ಮನೆ ಅಪರಾಧ ಕನ್ನಡ ನಾಡಿನ ಪುಣ್ಯ

ಕನ್ನಡ ನಾಡಿನ ಪುಣ್ಯ

0

ಕನ್ನಡ ನಾಡಿನ ಪುಣ್ಯ|
ಈ ಕುಕ್ಕೆ ಸುಬ್ರಹ್ಮಣ್ಯ|
ದರುಶನ ಪಡೆದವ ಧನ್ಯ|
ಈ ದರೆಯಲ್ಲಿ ಅವನೇ ಮಾನ್ಯ |
ಕನ್ನಡ ನಾಡಿನ ಪುಣ್ಯ |

ಕುಮಾರ ಧಾರೆ ಇವುದಿಲ್ಲಿ
ಕುಮಾರ ಪರ್ವತ ಬಳಿಯಲ್ಲಿ ||
ಕುಮಾರ ಸ್ವಾಮಿಯು ಶ್ರೀವಲ್ಲಿ||
ದೇವ ಸೇನೆಯು ಇಹರಲ್ಲಿ ||ಕನ್ನಡ ||

ಕುಮಾರ ಧಾರೆಯ ಸ್ಥಾನ
ಪಾಪ ಪಂಕದ ಹರಣ ||
ಕುಮಾರ ಸ್ವಾಮಿಯ ದರುಶನ |
ಜೀವನವೆಲ್ಲ ಪಾವನ || ಕನ್ನಡ ||

ಕೃತಿಗೆ ಕೂಡಿದ ಆಶಾಡ
ಭಕ್ತಿ ವಿಶೇಷವು ಅತಿ ಗಾಢ ||
ವೃತ್ತಿಕೆ ಮಹಿಮೆ ಬಲು ಗೂಢ ||
ಸ್ವಾಮಿ ಭಕ್ತಿ ಪವಾಡ |
ಕನ್ನಡ ನಾಡಿನ ಪುಣ್ಯ ||ಕನ್ನಡ||