ಮನೆ ದೇವರನಾಮ ಯಾರಿಗುಂಟು ಈ ಭಾಗ್ಯವು

ಯಾರಿಗುಂಟು ಈ ಭಾಗ್ಯವು

0

ಯಾರಿಗುಂಟು ಈ ಭಾಗ್ಯವು ||
ಹೇಳಮ್ಮ ಅನುಸೂಯ ದೇವಿ
ಯಾರಿಗುಂಟು ಈ ಪುಣ್ಯವು ಹೇಳಮ್ಮ|| ಯಾರಿಗುಂಟು||

ಸೃಷ್ಟಿ ಮಾಡುವ ಬ್ರಹ್ಮದೇವನ ಕಂದನ ಮಾಡಿದೆಯ||
ಪಾಲ್ಗಡಲೆ ಇರುವ ಹರಿಗೆ ಹಾಲನು ಕುಡಿಸಿದೆಯ|
ಆ ನಟ ರಾಜನ ತೊಟ್ಟಿಲಲಿರಿಸಿ||
ಜೋಗುಳ ಹಾಡಿಸಿದೆಯಾ ||ಯಾರಿಗುಂಟು||

ಆ ಸಿರಿ ದೇವಿಯೆ ಪತಿ ಭಿಕ್ಷೆಯನ್ನು ನಿನ್ನಲ್ಲಿ ಬೇಡಿದಳೆ ||
ಆದಿ ಶಕ್ತಿಯೆ ನಿನ್ ನಿನ್ನ ಶಕ್ತಿಯ ನೋಡಿ ಬೆಚ್ಚಿದಳೆ|
ಸರಸ್ವತಿಯೆ ನಿನ್ನ ಪಾತಿವ್ರತ್ಯವ||
ಹೊಗಳುತ ಹಾಡಿದಳೆ ||ಯಾರಿಗುಂಟು ||

ವಿಶ್ವಪಾಲಿಸುವ ವಿಶ್ವಪಾಲಕರ ಪ್ರೇಮದಿ ಪಾಲಿಸಿದೆ ||
ಲೋಕ ಸಲುವುವ ಲೋಕ ಮಾತೆಯರ ಭಯಕೆಯ ಸಲ್ಲಿಸಿದೆ |
ಬಿಡೆನು ನಿನ್ನ ಈ ದೀನನ ಮನದಲ್ಲಿ ||
ದತ್ತನ ನಿಲ್ಲಿಸದೆ ||ಯಾರಿಗುಂಟು||