ಶರಣೆಂಬೆ ಶ್ರೀ ಗುರುವೆ ಶರಣೆಂಬೆ ವರ ಗುರುವೆ |
ಶರಣು ಶರಣೆಂಬೆ ಶ್ರೀ ಗುರು ಸಿದ್ದಲಿಂಗ |
ಶರಣು ಯಡಿಯೂರ ಶ್ರೀ ಗುರು ಸಿದ್ದಲಿಂಗ|
ಶರಣೆಂಬೆ ಶ್ರೀ ಗುರುವೆ ಶರಣೆಂಬೆ ವರ ಗುರುವೇ
ಕಾಯಕವ ಮಾಡಿದೆ ಕರ್ಮವನು ಅಡಗಿಸಿದೆ
ಧರ್ಮದೇವತೆಯಂತೆ ನೀ ನಿಂದು ಮೆರೆವೆ ||
ಧರ್ಮನೀತಿಯ ನಿಲುವ ನೀನೇರಿ ಮೆರೆದೆ||
ಧರ್ಮಾತ್ಮರನು ಕಂಡು ನೀನವರಿಗೆ ಒಲಿದೆ |
ಶರಣು ಶರಣೆಂದೆ ಶ್ರೀ ಗುರುವೇ ಸಿದ್ಧಲಿಂಗ || ಶರಣೆಂಬೆ ||
ಯೋಗಿರ್ವಯನು ನೀನು ಪುಣ್ಯ ಮೂರ್ತಿಯು ನೀನು
ವಿಶ್ವಬಂಧುವು ನೀನು ವಿಶ್ವ ಪಾಲನು ನೀನು||
ವಿಶ್ವಜ್ಯೋತಿಯು ನೀನು ವಿಶ್ವಮೂರ್ತಿಯೂ ನೀನು||
ವಿಶ್ವವಂದ್ಯನು ನೀನು ಮುಟ್ಟಿದಾತನು ನೀನು|| ಶರಣು ||
ನೀನಾರು ನಾನಾರು ಎಂಬುದನ್ನು ಅರುಹಿದೆ
ಜನ್ಮಜನ್ಮಾಂತರದ ಮರ್ಮವನ್ನು ತಿಳುಹಿದೆ ||
ಸತ್ಯ ಧರ್ಮವನರುಹಿ ಧರ್ಮಾತ್ಮನೆನಿಸಿದೆ ||
ವಿಶ್ವ ಪ್ರೇಮದ ತೋರಿ ವಿಶ್ವಗುರುವೆನಿಸಿದೆ || ಶರಣು ||
ದಿನ ಬಂಧುವು ನೀನು ಪಾಪನಾತ್ಮನು ನೀನು
ಕರುಣಾಳು ಯಡೆಯೂರ ಪುಣ್ಯ ಮೂರ್ತಿಯೂ ನೀನು||
ಶಿವಯೋಗಿ ಸಿದ್ಧಕುಲ ಚಕ್ರವರ್ತಿಯು ನೀನು||
ಸರ್ವ ಲಿಂಗಾಂಗ ಲೀಲಾ ವಿನೋದನು ನೀನು ||ಶರಣು||