ಕರುನಾಳು ಯಡಿಯೂರು ವಾಸ
ಸಿದ್ದಲಿಂಗೇಶ ಪೊರೆಯೊ ಹೇ ಪರಮೇಶ ದೇವಾಧಿ ದೇವ ||
ಕರುನಾಳು ಯಡಿಯೂರ ವಾಸ |
ಭಾವದಲ್ಲಿ ಬಂದೆ ಗತಿಯೇನು ಮುಂದೆ
ತವ ಸೇವೆಯೊಂದೆ ಬೇಡುವೆನು ತಂದೆ||
ಭಕ್ತಿಯ ಪ್ರಥಮ ವ್ಯಕ್ತಿಯ ನಿಲುವ ||
ತೋರಿಸಿ ಅಭವ ಕೃಪೆಯಾಗು ದೇವ || ಕರುನಾಳು ||
ವಿರತಿಯ ಬಾನು ವರಶೈವ ದೇನು
ಪರಶಿವನ ನೀನು ಶರಣೆಂದೆ ನಾನು || ಶಿವಮಂತ್ರ ಪ್ರಾಣ ನೀನೆ ಪ್ರಾಮಾಣ ||
ತವನಾಮ ಸ್ಮರಣ ಭವತಾಪ ||ಕರುನಾಳು ||
ತನುಮನ ಧನವು ನಿನಗೆ ಅರ್ಪಣವು
ಕರುಣೆ ನೀನ್ನೊಲವು ಇರಲೆನಗೆ ಬಲವು ||
ಜಗದೇಕ ಗುರುವೆ ಜಗವ ತುಂಬಿರುವೆ ||
ನೆನಸಿದಲ್ಲಿರುವೆ ಏ ಕಲ್ಪತರುವೆ ||ಕರುನಾಳು||