ಹರಿಹರ ಸುತನು ಸುರಗಣ ಹಿತನು ವರಮುನಿ ಸನ್ನುತನು
ಸುಂದರ ರೂಪನು ಆತ್ಮಪ್ರದೀಪನು ಪಂದನ ರಾಜಕುಮಾರನು ಪಂದಲ ರಾಜಕುಮಾರ||
ಪಂಕಜ ವದನನು ಸಂಕಟ ಹರನು ಮಂಗಳ
ಪದಯುಗ ಸಮಿತಿ ಸಮ್ಮಿಹಿತನು|
ಶಾಂತಿಯ ಧಾಮನು ಸುರಧುರ ನಾಮನು
ಒಲವಲಿ ವರಗಳ ಕರೆವವನು||
ಸ್ವಾಮಿಯೇ ಶರಣಂ ಅಯ್ಯಪ್ಪ ||ಹರಿಹರ||
ಕರುಣಾಭರಣನು ಸುಖದಾಯಕನು
ಶಾರಾಣಾಗತ ಜನ ರಕ್ಷಕನು||
ಪಂಪ ಬೀರ ಸಮೀರ ನಿವಾಸನು|
ಪ್ರಾಣವನಾ ಪರಿ ಶೋಭಿತನು |
ಸ್ವಾಮಿಯೆ ಶರಣಂ ಅಯ್ಯಪ್ಪ ||ಹರಿಹರ ||
ಭೂತನಾಥನು ದಿವ್ಯಚರಿತನು ಶೀತಲ ಚಂದನ ಪ್ರಿಯನು||
ಮತತೀತನು ಗೀತ ರಚಿತನು ತಿಲೋಕ ವಂದಿತನು |
ತ್ರಿಲೋಕ ವಂದಿತನು |
ಸ್ವಾಮಿಯೇ ಶರಣಂ ಅಯ್ಯಪ್ಪ ||ಹರಿಹರ ||
ಪಾಪವಿಧೂರನು ಪಾಪವಿದಾರನು ಆಪತ್ ವಿವಾರ ಕಾರಣನು|
ಮುನಿ ಜನ ಸೇವಿತ ಶತ್ರು ಜನ ಭಕ್ತರ ಶೋಕ ವಿನಾಶಕನು|
ಭಕ್ತರ ಶೋಕ ವಿನಾಶಕನು |
ಸ್ವಾಮಿಯೇ ಶರಣಂ ಅಯ್ಯಪ್ಪ ||ಹರಿಹರ||