ಮನೆ ದೇವರನಾಮ ಕಲ್ಯಾಣಾದ್ಬುತ ಗಾತ್ರಾಯ

ಕಲ್ಯಾಣಾದ್ಬುತ ಗಾತ್ರಾಯ

0

ಕಲ್ಯಾಣಾದ್ಭುತ ಗಾತ್ರಾಯ|
ಕಾಮಿತಾರ್ಥ ಪ್ರದಾಯಿನಿ
ಶ್ರೀಮದ್ ವೆಂಕಟನಾಥಾಯಾ |
ಶ್ರೀ ವಾಸಾಯತೆ ನಮಃ ||

ಮನವೆ ಕುಣಿದಿದೆ ಗೋವಿಂದ||
ನಿನ್ನ ಪಾದವ ಸ್ಪರ್ಶಿಸಲಾನಂದ ||
ಲೋಕವೇ ನೀನು ಗೋವಿಂದ |
ನಿನ್ನ ನೆರಳಲಿ ನನಗೆ ಆನಂದ|
ಜನ್ಮಗಳೇಳು ಸಾಲದು
ನಿನ್ನ ಪೂಜಿಸುವೆ ತೀರದು ||ಮನವೆ||

ಶಕ್ತಿಯು ದೇಹದಿ ತುಂಬಿರುವಾಗ |
ನಿನ್ನಾ ನಾನು ನೆನೆಯಲು ಇಲ್ಲ |
ಭಕ್ತರು ಕೋಟಿ ಕಣ್ಣೆದುರಿರಲು|
ಭಕ್ತಿಯು ನನಗೆ ಬರಲಿಲ್ಲ |
ಕಾಮಾಂದದಲಿ ಮುಳುಗಿದೆ ನಾನು||
ಕ್ರೋಧದ ಪೀಠದ ಮೇರೆದೆನಃ ನಾನು |
ನನ್ನ ಕಣ್ಣನು ತೆರೆಸಿದೆ ನೀನು|
ನನ್ನಯ ತಪ್ಪನ್ನು ಮುನ್ನಿಸೆ ಏನು|
ಸ್ವಾಮಿ ವೆಂಕಟೇಶ ನಮೋ ತಿರುಮಲೇಶ ||ಮನವೆ||

ಸ್ವಾರ್ಥದ ಬದುಕಲಿ ಈಜೀದೆ ನಾನು |
ದಾನ ಧರ್ಮದ ಮರೆತೆನು ನಾನು|
ದುಷ್ಟರ ಕೂಟದ ದೊರೆಯಾದೇನು ನಾ|
ಅಟ್ಟ ಹಾಸದಲ್ಲಿ ಮೆರೆದಾಡಿದೆ ನಾ |
ಹಣಹೊಂದಿದ್ದರೆ ಸಾಕು ಎಂದೆ |
ನಿನ್ನ ಮರೆತು ಮೂರ್ಖನಾದೆ |
ಜ್ಞಾನದ ಕಣ್ಣು ತೆರೆಸಿದೆ ನೀನು|
ಕತ್ತಲೆಯಿಂದ ಸರಿಸಿದೆ ನೀನು |
ಉಸಿರಿರುತನಕ ಮರೆಯಲು ನಾನು|
ನಿನ್ನಾ ಜಪಿಸುತ ಮಡಿವೆನು ನಾನು |
ಸ್ವಾಮಿ ವೆಂಕಟೇಶ ನಮೋ ತಿರುಮಲೇಶ ||ಮನವೆ ||