ಮನೆ ದೇವರನಾಮ ನಂಬಿದೆ ನಿನ್ನ ಪಾದ ನರಸಿಂಹ

ನಂಬಿದೆ ನಿನ್ನ ಪಾದ ನರಸಿಂಹ

0

ನಂಬಿದೆ ನಿನ್ನ ಪಾದ ನರಸಿಂಹ

ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ || ನಂಬಿದೆ||

ಹಂಬಲಿಸುವೆನು ಬಲು ನರಸಿಂಹ
ಪಾದ ನಂಬಿದವರನು ಕಾಯೊ ನರಸಿಂಹ ||ನಂಬಿದೆ||

ತುಂಬುರು ನಾರದ ಪ್ರಿಯ ನರಸಿಂಹ
ಚೆಲ್ವ ಶಂಬರಾರಿಯ ಪಿತನೆ ನರಸಿಂಹ |
ಅಂಬರೀಶನ ಕಾಯ್ದೆ ನರಸಿಂಹ ||2||
ಜಗದಂಬಾ ರಮಣನೆ ಶ್ರೀ ನರಸಿಂಹ ||ನಂಬಿದೆ||

ಬಾಲ ಕರೆದಲ್ಲಿ ಬಂದೆ ನರಸಿಂಹ
ಭಕ್ತ ಪಾಲಿಪ ದಯಾಳು ಶ್ರೀ ನರಸಿಂಹ ||
ಲೀಲೆಯಿಂದ ಹಿರಣ್ಯಾನ ನರಸಿಂಹ || 2 ||
ಕೊಂದ ಲೋಲ ಸಿರಿ ಅರಸನೆ ನರಸಿಂಹ ||ನಂಬಿದೆ||


ಅಚ್ಯುತಾನಂತ ಗೋವಿಂದ ನರಸಿಂಹ
ಶ್ರೀ ಸಚ್ಚಿದಾನಂದ ಮುಕುಂದ ನರಸಿಂಹ |
ಕಿಚ್ಚಿನಂದದಿ ಬೆಂದೆ ನರಸಿಂಹ || 2 ||
ಭವ ಇಚ್ಛೆಯಿಂದ ಬಿಡಿಸಯ್ಯ ನರಸಿಂಹ ||ನಂಬಿದೆ||

ಕರಿ ಮೊರೆಯನು ಕೇಳಿ ನರಸಿಂಹ
ಬಲು ಭರದಿಂದೊದಗಿ ಬಂದೆ ನರಸಿಂಹ |
ಗರುಡವಾಹನನಾಗಿ ನರಸಿಂಹ || 2 ||
ಉದ್ಧರಿಸಿ ಕಾಯ್ದೆಯಲ್ಲೊ ನರಸಿಂಹ ||ನಂಬಿದೆ||

ದೇವರದೇವನು ನೀನೆ ನರಸಿಂಹ
ಬೇರೆ ಕಾವರನ್ನು ಕಾನೆನಯ್ಯ ನರಸಿಂಹ |
ಬಾವಜನಯ್ಯನೆ ಶ್ರೀ ನರಸಿಂಹ || 2 ||
ನಿನ್ನ ಸೇವೆಯ ಪಾಲಿಸಿ ಕಾಯೊ ನರಸಿಂಹ ||ನಂಬಿದೆ||

ತಂದೆತಾಯಿ ಗುರು ದೈವ ನರಸಿಂಹ
ಎನ್ನ ಬಂಧುಬಳಗವು ನೀನೆ ನರಸಿಂಹ |
ಕುಂದು ಹೆಚ್ಚು ನೋಡ ಬೇಡ ನರಸಿಂಹ. || 2 ||
ಪುರಂದರ ವಿಠ್ಠಲ ಕಾಯೋ ನರಸಿಂಹ.||ನಂಬಿದೆ||

ಹಿಂದಿನ ಲೇಖನಶ್ರೀಮಂತ ಭಾಷೆ ನಮ್ಮ ಕನ್ನಡ: ಶಾಸಕ ಜಿ.ಟಿ.ದೇವೇಗೌಡ
ಮುಂದಿನ ಲೇಖನಸೊಂಟದ ಸ್ನಾಯುಗಳ ಆರೋಗ್ಯಕ್ಕೆ ಈ ಯೋಗಾಸನ ಮಾಡಿ