ವೃಂದಾ : ನಮೋ ವೆಂಕಟೇಶ ನಮೋ ತಿರುಮಲೇಶ |
ಸಪ್ತದ್ರೀ ವಾಸ ಪ್ರಭೋ ಶ್ರೀನಿವಾಸಾ |
ಬಾಲು : ಶತಕೋಟಿ ನಾಲಿಗೆಯ ನರ್ತಿಸುವ ನಾಮ
ನೋವಲ್ಲು ನಲಿವಲ್ಲು ನಾಮ||
ಹರಿ ನಾಮದಲ್ಲಿ ಅಡಗಿರುವ ಲೋಕ ||
ಅಣು ಅಣುವಿನಲ್ಲಿ ಸ್ವಾಮಿಯ ಶ್ಲೋಕ ||ಶತ ಕೋಟಿ||
ಬಾಲು : ಹಗಲೇನು ಇರುಳೇನು ತಿಳಿದಿಲ್ಲ ನನಗೆ |
ಕ್ಷಣವೇನು ಯುಗವೇನು ಮರೆತೋಯ್ತು ಮನಕೆ |
ಹಸಿವಿಲ್ಲ ನಿದಿರಿಲ್ಲ ದೂರಾಯ್ತು ನನಗೆ |
ಕಣ್ಮುಚ್ಚಿ ನಾ ಕುಳಿತೆ ನೀ ಬಂದೆ ಬಳಿಗೆ |
ಗೋವಿಂದ ನಿನ್ನಿಂದ ಆನಂದ ಪಡೆದೆ |
ಅನುಗಾಲ ನಿನ್ನ ನಾಮ ಬಿಡದಂತೆ ನುಡಿದೆ |
ವೆಂಕಟೇಶ ಶ್ರೀನಿವಾಸ
ವೃಂದ : ಗೋವಿಂದ ಗೋವಿಂದ ||
ಓಂ ಶ್ರೀನಿವಾಸ ನಮೋ ವೆಂಕಟೇಶ || ಶತಕೋಟಿ ||
ಬಾಲು : ಬಿಸಿಲೇನು ಮಳೆಯೇನು ತಿಳಿದಿಲ್ಲ ನನಗೆ |
ಬಿರುಗಾಳಿ ಬೀಸಿದರು ಭಯವಿಲ್ಲ ಮನಕೆ |
ಇನ್ನೊಮ್ಮೆ ಕಣ್ತುಂಬ ನಾ ನೋಡುವಾಸೆ |
ಶ್ರೀ ಪಾದ ಸ್ವರ್ಷದಲ್ಲಿ ನಲಿದಾಡುವಾಸೆ |
ಸಂಪ್ರಾದ್ರೀಯಲ್ಲಿ ಸ್ವಾಮಿ ದಿವ್ಯ ಸನ್ನಿಧಿಯಲ್ಲಿ |
ಹರಿನಾಮ ನುಡಿಯುತ
ಈ ಜನ್ಮ ಕಳೆಯುವೆ |
ವೆಂಕಟೇಶ ಶ್ರೀನಿವಾಸ
ವೃಂದ : ಗೋವಿಂದ ಗೋವಿಂದ ||
ಓಂ ಶ್ರೀನಿವಾಸ ನಮೋ ವೆಂಕಟೇಶ || || ಶತಕೋಟಿ |