ಮನೆ ದೇವರ ನಾಮ ಬಂತು ಬಂತು ಬಾದ್ರಪದ

ಬಂತು ಬಂತು ಬಾದ್ರಪದ

0

 ಬಂತು ಬಂತು ಬಾದ್ರಪದ ಶುಕ್ಲ ಚತುರ್ಥಿ

 ಬಡವ ಧನಿಕ  ಆಚರಿಸುವ ಪುಣ್ಯ ಚತುರ್ಥಿ ||

 ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ ||

 ಮಂಗಳವ ತರುತಲಿರುವ ಶುಭದ ಚತುರ್ಥಿ  || ಬಂತು ||

 ಮಣ್ಣಿನಿಂದ ಮಾಡಿದ ಮೂರ್ತಿಯ ತಂದು

 ಮಂಟಪದೆ ಕೂರಿಸಿ ಭಕುತಿಯೋಳು ಇಂದು||

 ಮಾವಿನೆಲೆಯ ಕಟ್ಟಿ ಮನೆಯ ಸಿಂಗರಿಸಿ ||

 ರಂಗೋಲಿಯ ಹಾಕಿರಿ ಹಬ್ಬವ ಆಚರಿಸಿ || ಬಂತು ||

 ಮಂತ್ರ ಹೇಳಿ ಪ್ರಾಣ ಪ್ರತಿಷ್ಠೆಯ ಮಾಡಿ |

 ಅರಿಶಿನ ಕುಂಕುಮಾವ ಅದಕ್ಕೆ ಹೇರಿಸಿ |

 ಬಗೆ ಬಗೆ ಹೂಗಳಿಂದ ಆರ್ಚನೆ ಗೈದು |

 ದೂರ್ವೇಯಿಂದ ಪೂಜಿಸಿ ದೈವ ಗಣಪತಿಗೆ || ಬಂತು||

 ಧೂಪ-ದೀಪದಿಂದ ಅವನ ಉಪಾಸನೆ

 ಮೋದಕ ಕಡಬು ನೈವೇದ್ಯದ ಆರಾಧನೆ ||

 ಕರ್ಪೂರದ ಆರತಿಯ ಎತ್ತಿರಿ ಗಣಪತಿಗೆ ||

 ಕರುಣಾಮಯ ವರನೀಡು ಎನ್ನಿರಿ ನಮಗೆ || ಬಂತು||