ಮನೆ ದೇವರ ನಾಮ ಆನೆ ಮುಖ ಪಡೆದವನೆ

ಆನೆ ಮುಖ ಪಡೆದವನೆ

0

ಆನೆ ಮುಖ ಪಡೆದವನೆ ಆಸೆಗಳ ತರುವವನೆ
ಅಷ್ಟಸಿದ್ದಿ ಮಹಿಮನೆ ಬೆನಕನೆ ||
ಆನಂದದಾಯಕನೆ ಆತ್ಮಶಕ್ತಿ ಕೊಡುವವನೆ ||
ಆನಂತ ಕೋಟಿ ಸೂರ್ಯನ ಸಮ ತೇಜನೆ ||
ಕಥೆ ಹೇಳುವೆ ನಿನ್ನ ಕಥೆ ಹೇಳುವೆ ||

ಪಾರ್ವತಿಯು ಅಂದೊಮ್ಮೆ ಸ್ತಾನಗೃಹಕೆ ತೆರಳಲು
ಬೆವರಿನಿಂದ ಗೈದಳು ನಿನ್ನನು ||
ಜೀವತುಂಬಿ ಕಂದನಿಗೆ ಪ್ರೀತಿಯಿಂದ ನುಡಿದಳು
ಬಿಡಬೇಡ ನೀ ಒಳಗೆ ಯಾರನು ||
ಮುದ್ದು ಗಿರಿಜೆ ತನೆಯನು ತಾಯಿಯ ನುಡಿಯಂತೆ
ಬಾಗಿಲಿಗೆ ಕಾವಲಾಗಿ ನಿಂತನು || ಮಡದಿಯ ಸಂದಿಸಲು ಪರಮೇಶ್ವರ||
ತಾನು ಆಕ್ಷಣ ಬಾಗಿಲತ್ತ ಬಂದನು |

ಬಾಗಿಲಿಗೆ ಬಂದವನ ತಂದೆ ಎಂದು ಅರಿಯನು
ತಡೆದವನ ನಿಲ್ಲಿಸಿದನು ಕಂದನೂ ||
ಉಘ್ರಕೋಪ ಕಾನಾಗಿ ಕಂದನೆಂದು ತಿಳಿಯದೆ ||
ಶಿರವ ಕಡಿದು ಹಾಕಿದ ಶಂಕರನು ||

ಗೌರಿ ಬಂದಳಲ್ಲಿಗೆ ರಕ್ತಕೋಡಿ ಅರಿದಿದೆ
ಕಂದನಪ್ಪಿ ನಿಂತರೆ ಸಾವನೂ ||
ಗಿರಿಜಯ ರೋಧನಕ್ಕೆ ತಾಯಿ ಕರುಳ ಅಳಲಿಗೆ ||
ಮನ ಕರಗಿ ನಿಂತನು ಈಶ್ವರನು ||

ಕೈಲಾಸ ಗಣಗಳ ನಂದೀಶ್ವರ ಇತರರ
ಶಂಕರನು ಆಗ ಬಳಿಗೆ ಕರೆದನು ||
ಉತ್ತರಕ್ಕೆ ಮಲಗಿರುವ ಒಂದು ಪ್ರಾಣಿ ಶೀರವನು ||
ಕಡಿದು ತನ್ನಿ ಇಲ್ಲಿಗೆ ಎಂದನು ||

ಅರಸಿ ಹೊರಟ ಗಣಗಳು ಕಂಡರಾನೆ ಒಂದನು
ಕಡಿದು ತಂದರಾನೆಯ ಶಿರವನು ||
ಆನೆ ಶಿರವ ಕಂದನಿಗೆ ಜೋಡಿಸಿದ ಶಂಕರನು. ||
ಅದಕ್ಕೆ ಆಗ ಜೀವವ ತುಂಬಿದನು ||

ನಿದ್ದೆ ತಿಳಿದು ಎದ್ದಂತೆ ಕಣ್ಣು ತೆರೆದ ಬಾಲಕನು
ತಂದೆಗೆ ವಿನಯದಿಂದ ನಮಿಸಿದನೂ ||
ಗಜಮುಖನ ಮುದ್ದು ಸುತ ನೋಡಿದ ನಾಗ ಶಂಕರನು||
ಗಣಗಳಿಗೆ ಇವನೆ ಎಂದು ನಾಯಕನು |
ಅಂದಿದಿನಿಂದ ಅಗ್ರ ಪೂಜೆ ಗಣೇಶನಿಗೆ ಮೀಸಲು ||

ಶಕ್ತಿಪೂರ್ವ ದೈವವಾದ ಗಣೇಶನೂ|^
ಸಂಕವ ಕಳೆಯುವನು ವಿಘ್ನಗಳ ಆರಿಸುವನು ||
ಎಲ್ಲರಿಗು ಇಷ್ಟ ದೈವ ಗಣಪನೂ |
ಗಣಪನೂ ಗಣಪನೂ ಗಣಪನೂ|