ಕೊಳಲೂದೊ ಗುರುವಾಯುರು ಕೃಷ್ಣನೇ ಕೃಷ್ಣನೆ
ಜೇನಂತ ಅತಿಮಧುರ ಸಂಗೀತ ಸುಧೆ ತಂದ
ಹಾಡಿನಲಿ ಅದಿವ್ಯ ಲೋಕವ ಸ್ರಷ್ಠಿಸುವ
ಪರವಶವಾಗಿಸುವ ಗಾಯಕನೆ ನಾಯಕನೆ
||ಕೊಳಲೂದೊ||
ಯಮುನಾ ನದಿ ತೀರ ಓಳಾಡಿ ನಲಿದಾಗ
ಅ ರಾಧೆ ಜತೆಗೂಡಿ ನಗೆ ಬೀರುವ
ಗೋವೆಲ್ಲ ಕೂಡಿರಲು ಕುಣಿದಾಡುವ
ಬರುವ ಕೃಷ್ಣಾ…ಬರುವ ಕೃಷ್ಣಾ
ಎಂದೇ… ರಾಧೆ ಮನ ನೊಂದಿರೆ
ದುಂಬಿಯ ಹಾದಿಯನು ಕಾದಿಹ ಹೂವನ್ನು
ಹೋಲುವ ರಾಧೆಯ ಮನ ಮಿಡಿವ
ನಗುತಿರುವ ||ಕೊಳಲೂದೊ||
ಮಧುರಾಪುರಿ ಮಾಧವನೆ ಮಧುಸೂದನ
ದ್ವಾರಕಾಪುರಿ ಗಿರಿಧಾರಿ ಉಡುಪಿ ಕ್ರಷ್ಣಾ
ಗುರುವಾಯುರಲ್ಲಿರುವ ಮನಮೋಹನ
ಸಮಸರ್ವ ಮತವೆಂಬ ಕರುಣಾಲಯ
ಸರ್ವರು ಶರಣೆಂಬ ನ್ಯಾಯಾಲಯ
ಪ್ರೀತಿಯ ನಿಧಿ ನೀನು ಪ್ರೇಮದ ಸವಿ ಜೇನು
ಗುರುವಾಯುರಪ್ಪನೆ ದಯೆ ತೋರು
ಗೋಪಾಲ||ಕೊಳಲೂದೊ||