ಆರಾಧಿಸು ನೀ ಏ ಮನವೇ ಸತ್ಯ ರೂಪನ ಚರಣಾ ಭುಜವ ||
ಆರಾಧಿಸು ನೀ ಏ ಮನವೇ |
ಕಟ್ಟಿಗೆ ಮಾರುವ ಬಡವನಿಗಿಗಂದು
ಕನಕವೃಷ್ಟಿಯನ್ನು ತಾ ಕರೆದಾ||
ಭಕ್ತಿಲಿ ಪೂಜಿಸೋ ಬಡ ಬ್ರಾಮಾಣಗೆ ||
ಬಡತನ ನೀಗಿಸು ತಾ ಪೊರೆದಾ |
ಆರಾಧಿಸು ನೀ ಏ ಮನವೆ ಸತ್ಯ ರೂಪನ ಚರಣಾ ಭುಜವ |
ಆರಾಧಿಸುವೆ ನೀ ಏ ಮನವೇ |
ರಾಜ್ಯವು ಹೋಗಿ ಬೀದಿಗೆ ಬಂದ
ಅರಸಗೆ ಅಂದು ರಾಜ್ಯದ ತಂದಾ ||
ಪೂಜಿಸೆ ಮರೆತ ವರ್ತಕನನ್ನು ||
ಕಾರಾಗೃಹದಲ್ಲಿ ನಿಲಿಸಿದ |
ಆರಾಧಿಸು ನೀ ಏ ಮನವೆ ಸತ್ಯ ರೂಪನ ಚರಣಾಭುಜವ |
ಆರಾಧಿಸು ನೀ ಏ ಮನವೇ |
ಪ್ರಸಾದವನ್ನು ಬುಂಜಿಸಿ ಮೆರೆತ
ಹೆಣ್ಣಿಗೆ ಅಂದು ಪಾಠ ಕಲಿಸಿದ ||
ತನ್ನನು ನಂಬಿ ನಿಂತಂಥವರ ||
ಬಾಳನು ಜೇನಿನ ಹೊಳೆ ಮಾಡಿದಾ || ಆರಾಧಿಸು ||