ಮನೆ ದೇವರನಾಮ ಅಮ್ಮ ಶ್ರೀ ಗೌರಿಶಂಕರಿ

ಅಮ್ಮ ಶ್ರೀ ಗೌರಿಶಂಕರಿ

0

ವೃಂದ ಶ್ರೀ ಗೌರಿ ಮಂಗಳಗೌರಿ ಜಯ್ ಜಯ್ ಗೌರಿ ಸ್ವರ್ಣ ಗೌರಿ ||
ಬಾಲು ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾದಿಕೇ |
ಶರಣ್ಯೆ ತ್ರಯಬ್ರಕೆ ಕಥೆ ಗೌರೀ ನಾರಾಯಣ ನಮೋಸ್ತುತೆ |

ಬಾಲು ಅಮ್ಮ ಶ್ರೀ ಗೌರಿಶಂಕರಿ ಕಾಯವ್ ಜಯಗೌರಿ|
ಹಿಮಗಿರಿ ನಿಲಯೆ ಸದಮಲ ಹೃದಯೆ |
ಪರಮೇಶ್ವರಿಯೆ ಶ್ರಿತಜನ ಬಲಯೆ |
ಶಿವದೆ ಆರ್ತಿನಿ ಪ್ರವರ್ತಿನಿ ಗೌರೀ |
ಅಮ್ಮ ಶ್ರೀ ಗೌರಿಶಂಕರಿ ಕಾಯವ್ ಜಯಗೋರಿ |

ಮನೋ ಮಂದಿರದಿ ನೆಲೆ ಯಾಗಮ್ಮ
ಮಾನಸ ಪೂಜೆಯ ಸ್ವೀಕರಿಸಮ್ಮ ||
ನುಡಿವ ನುಡಿಗಳೆ ಮಂತ್ರಗಳು|
ನಮ್ಮ ನಯನಗಳೇ ದೀಪಗಳು |
ನಡೆವ ನಡಿಗೆಯೆ ಪ್ರದಕ್ಷಿಣೆ |
ಮನೋ ಭಿಷ್ಟಗಳೇ ನಿವೇದನೆ |
ಕಾಪಾಡು ಶ್ರೀ ಗೌರಿ ವರನೀಡು ವರಗೌರಿ |
ಶುಭನೀಡು ಶುಭೆಗೌರಿ ಜಯೆ ನೀಡು ಜಯಗೌರಿ |
ಶ್ರೀ ಸರ್ವ ಮಂಗಳೇ ಮಾತಾನ್ನ ಪೂರ್ಣೆ|
ಅಮ್ಮ ಶ್ರೀ ಗೌರಿಶಂಕರಿ ಕಾಯುವ್ ಜಯಗೌರಿ|

ಭಕ್ತರ ಕರೆಗೆ ಓಗೋಡು ತಾಯೆ
ಮಮತೆಯ ತೋರಿ ಜತೆನದಿ ಕಾಯೆ||
ನಮ್ಮ ಪ್ರಾರ್ಥನೆ ನೀ ಹಾಲಿಸು |
ನಮ್ಮ ಬಾಳನ್ನು ಆದ ಗೊಳಿಸು |
ನಮ್ಮ ಬಾಳಲ್ಲಿ ಸುಖ ಬೆರೆಸು |
ಸಂತಾಪವನ್ನು ಹರಿಸು|
ಸಂತೋಷವನ್ನು ಹರಿಸೂ|
ಸಮಾ ಭಾವನೆಯ ಬೆಳೆಸು |
ಸಂಭಾವೈದೆಯ ಕಲಿಸು |
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ||ಅಮ್ಮ ||