ಬಾಲು : ಜೇಯಂ ಸದಾ ತವಪಾದಾರ್ಚನೇನ |
ಮಮಭಾವಂ ಸದಾ ತವಸಂರ್ಕಿನೇನ |
ಬಾಲು : ಮಹಾಮಹಿಮ ಏಕದ್ವೀತಿಯನೆ ಮೇರೆವೇಕದಂಥ ಗಣೇಶನೆ |
ಭಾರತ ಲೇಖನ ಚತುರ ಸಮುಖನೆ
ಮಹಾ ಗಣಪತಿಯೆ ವಂದನೆ |
ನಮ್ಮೆಲ್ಲರ ಸಂಕಷ್ಟ ಕಳೆದು ಸೌಭಾಗ್ಯ ರಾಶಿಯನ್ನು ಸುರಿದು |
ಏಳೇಳು ಲೋಕವನ್ನಾಳುತಿರುವ
ತವ ಚರಣಕೆ ಶರಣು ದೇವ |
ಸ್ಮರಿಸಿ ನಾವೆಲ್ಲ ಧನ್ಯರು ನಿನ್ನ ನಾಮಾಂಮೃತ |
ಸವಿದು ನಾವೆಲ್ಲ ಸುಕೃತರು ನಿನ್ನ ಪಾದತೀರ್ಥ |
ವೃಂದ ಸ್ಮರಿಸಿ ನಾವೆಲ್ಲಾ ಧನ್ಯರು ನಿನ್ನ ನಾಮಾಂಮೃತ |
ಸವಿದು ನಾವೆಲ್ಲ ಸುಕೃತ್ತರು ನಿನ್ನ ಪಾದ ತೀರ್ಥ |
ಬಾಲು ಮಹಾಮಹಿಮ ಏಕದ್ವಿತಿಯನೇ ಮೆರೆವೇಕದಂಥ ಗಣೇಶನೆ |
ಭರತ ಲೇಖನ ಚತುರ ಸುಮುಖನೆ
ಮಹಾ ಗಣಪತಿಯೆ ವಂದನೆ |
ಬಾಲು : ತಂದೆ ತಾಯಿಗಳಿಗಿಂತ ಬೇರೆ ದೇವರುಗಳು ಬೇಕಿಲ್ಲ |
ಆ ನೀತಿಯ ಸಾಧಿಸಿ ಲೋಕಕ್ಕೆ ತೋರಿದ ಬಾಲ ಗಣಪತಿಯೆ |
ಲೋಕದ ಜೀವಿಗಳಲ್ಲಿ ಮೇಲು ಕೀಳುಗಳೆಂಬುದು ಇಲ್ಲ |
ಎಂಬ ಸತ್ಯವ ತೋರಲು ಪುಟ್ಟ ಇಲಿಯನ್ನು ನೀನೇರಿದೆ |
ನಿನ್ನ ನಂಬಿದ ಭಕ್ತರಿಗಿಲ್ಲ ಯಾವ ಚಿಂತೆಗಳು |
ನಿನ್ನ ಕರುಣೆಯ ನೆರಳಿನಲ್ಲಿ ರುವುದೆ ಪೂರ್ವ ಪುಣ್ಯವು |
ಎ ಸುಂದರಾಂಗ ನಿನ್ನ ಭಕ್ತಸಂಗ ಎಂದೆಂದಿಗು ನೀಡಯ್ಯ |
ನೀನಿರಲು ನಮಗೆ ಬೆಂಗವಾಲಾಗಿ
ಬಹು ಭಾಗ್ಯವಂತರು ನಾವಯ್ಯ |
ಸ್ಮರಿಸಿ ನಾವೆಲ್ಲ ಸುಕೃತರು ನಿನ್ನ ನಾಮಾಂಮೃತ |
ಸವಿದು ನಾವೆಲ್ಲ ಸುಕೃತರು ನಿನ್ನ ಪಾದ ತೀರ್ಥ |
ವೃಂದ ಸ್ಮರಿಸಿ ನಾವೆಲ್ಲ ಧನ್ಯರು ನಿನ್ನ ನಾಮಾಂಮೃತ |
ಸವಿದು ನಾವೆಲ್ಲ ಸುಕೃತರು ನಿನ್ನ ಪಾದಾತೀರ್ಥ |
ಬಾಲು : ಸುರನರಾದಿಗಳೆ ಆಗಲಿ ಎಂಥ ಉನ್ನತೊನ್ನತರೆರೆ ಆಗಲಿ |
ಆ ಗರ್ವತನವು ತರವಲ್ಲವೆನ್ನಲು ಚಂದ್ರನ ಶಿಕ್ಷಿಸಿದೆ |
ದಾನದ ರಾವಣನನ್ನು ಆತ್ಮಲಿಂಗ ಸಾಧಿಸಿ ದಂದು |
ತಾ ನಿನ್ನ ಪೂಜಿಸದೆ ತಪದ ಫಲವನ್ನು ಕಳೆದುಕೊಂಡನು |
ಅಂತರಂಗದಲ್ಲಿ ನಿಲ್ಲು ಆದಿದೇವನೆ|
ಅದರದಲಿ ಆಸರೆ ನೀಡು ಆದಿವಂದ್ಯನೆ |
ಮೂಷಿಕವೆನೇರೆ ಮನೆ ಮನೆಗೆ ಬಾರೊ ಹೇ ಗುಣ ಗಣ ಬರಣನೆ |
ನಮಗೆಲ್ಲ ವೃದ್ಧಿ ಸಮೃದ್ಧಿ ನೀಡೋ
ಏ ಸುರಪತಿ ಗಣಪತಿ ಗಜಾನನ |
ಸ್ಮರಿಸಿ ನಾವೆಲ್ಲ ಧನ್ಯರು ನಿನ್ನ ನಾಮಾಂಮೃತ |
ಸವಿದು ನಾವೆಲ್ಲ ಸುಕೃತರು ನಿನ್ನ ಪಾದ ತೀರ್ಥ |
ಸವಿದು ನಾವೆಲ್ಲ ಸುಕೃತರು ನಿನ್ನ ಪಾದಾತೀರ್ಥ|| || ಮಾಹ||