ಹರಿಯುವ ನದಿಯು ಹರುಷದಲ್ಲಿ|
ತನ್ನ ಶ್ರುತಿಯನ್ನು ಸೇರಿಸಿ ಹಾಡುತ್ತಿವೆ ಹಾಡುತಿದೆ |
ಬೀಸುವ ಗಾಳಿಯು ಜೊತೆಯಾಗಿ |
ಧನಿಯನು ಕೂಡಿಸಿ ಹಾಡುತಿದೆ |
ಪ್ರಕೃತಿಯೇ ನಿನ್ನೊಡ ನೊಂದಿಗೆ |
ಆ ಶ್ರೀಪತಿ ಧ್ಯಾನವ ಮಾಡುತ್ತಿದೆ ||
ಹರಿ ಹರಿ ಎನ್ನುತ್ತ ನೀ ಹಾಡು
ಹರಿ ನಾಮದ ಮಹಿಮೆಯ ನೀ ನೋಡು ||
ಬಣ್ಣಿಸಲಾಗದ ಆನಂದ
ನೀ ಕಾಣುವೆ ಆಗ ಓ ಕಂದ || 2 || ||ಹರಿ ಹರಿ ||
ಪ್ರೇಮದಿ ಬಾ ಎಂದು |
ಎಲ್ಲಿದ್ದರೂ ಅವನು ಅಲಿಸುವ |
ಅಮ್ಮನ ಕೂಗಿಗೆ ಓಗೊಡುವ |
ಹಸು ಕಂದನ ಹಾಗೆ ಬಳಿ ಬರುವ|
ನಿಜ ಭಕ್ತಿಗೆ ಅವನು ಸೋಲುವುದು |
ತನ್ನ ಭಕ್ತರನ್ನೇ ಕಾಪಾಡುವುದು |
ಭಕ್ತಿಗೆ ಅವನು ಸೋಲುವುದು |
ತನ್ನ ಭಕ್ತರನ್ನೇ ಕಾಪಾಡುವುದು ||ಹರಿ ಹರಿ ||