ಮನಸ್ಸಿನಲ್ಲಿ ನಿಂತಿರಲು ಮಂಜುನಾಥ |
ಮಂಜಿನೊಲು ಮರೆಯುವುದು ಎಲ್ಲ ಕ್ಲೇಶ |
ಮನೆಯೇ ಒಂದು ಪುಣ್ಯದ ಧರ್ಮಸ್ಥಳ |
ಮುದದಿಂದ ಬಂದಿರಲು ಮಂಜೇಷ |
ಸತ್ಯ ಧರ್ಮ ನಿಷ್ಠೆಯಿಂದ ಪಾಲಿಸುವಾಗ |
ಭಕ್ತಿಯಿಂದ ದೈವ ಪೂಜೆ ಮಾಡಿದಂತೆ |
ಅನ್ನದಾನ ವಸ್ತ್ರದಾನ ಮಾಡುವಾಗ |
ಧರ್ಮಸ್ಥಳ ಪ್ರಭು ದರ್ಶನ ಅದರಂತೆ |
ಶುಭವಾದ ಮನಸ್ಸು ಪಡೆದಿರುವಾಗ |
ನೇತ್ರಾವತಿ ನೀರಸ್ನಾನ ಮಾಡಿದಂತೆ |
ಆತ್ಮಸಾಕ್ಷಿ ಗಂಗೆ ಬಾನ ಕಳೆಯುವಾಗ |
ಧರ್ಮಸ್ಥಳ ಯಾತ್ರೆಯಾ ಮಾಡಿದಂತೆ |
ನೊಂದವರಿಗೆ ಸೇವೆಯನು ಮಾಡಿದಾಗ |
ಮಂಜುನಾಥ ಸೇವೆಯನು ಮಾಡಿದಂತೆ|
ತ್ಯಾಗ ಎಂಬ ರಾಗವನ್ನು ಹಾಡಿದಾಗ |
ಮಂಜುನಾಥ ನಮಗೆ ಒಲಿವಿನಂತೆ |
ಮನಸ್ಸಿನಲ್ಲಿ ನಿಂತಿರಲು ಮಂಜುನಾಥ|
ಮಂಜಿನೊಲು ಮರೆಯುವುದು ಎಲ್ಲಾ ಕ್ಲೇಶ |