ಮನೆ ದೇವರ ನಾಮ ಜೈ ಜೈ ಜೈ ಹನುಮಂತ

ಜೈ ಜೈ ಜೈ ಹನುಮಂತ

0

ಜೈ ಜೈ ಜೈ ಹನುಮಂತಾ ||
ಜೈ ಜೈ ಹೇ ಧೀಮಂತಾ |
ಧೀರಶಿರೋಮಣಿ ಶೂರಾಗ್ರಣಿ ನೀ |
ಮಹಾನ್ ಶಕ್ತಿವಂತಾ ಆ….|| ಜೈ ಜೈ ಜೈ || ಹನುಮಂತಾ

ಬಾಲ್ಯ ಕಲದಲೆ ಸೂರ್ಯನ ನುಂಗಿದ ಪ್ರಚಂಡ ಸಾಹಸಿ ನೀನು |
ಉಗ್ರಸಮುದ್ರ ಹಾರಿ ದಾಟಿದ ರುದ್ರ ಪರಾಕ್ರಮಿ ನೀನು |
ಶಂಕೆಯ ಬಿಟ್ಟು ಲಂಕೆಯ ಸುಟ್ಟದಿಟ್ಟ ಪುರುಷ ನೀನು|
ಛಲದಲ್ಲಿ ಬಲದಲ್ಲಿ ನಿನಗೇ ಗೆಲುವು ಶೌರ್ಯದ ಪ್ರತಿ ನೀನು|
ಅಮೋಘ ಶಕ್ತಿಯ ಆಗಾಧ ರೂಪಿ |
ಅನಂತವಾಗಿ ಅಖಂಡ ಕೀರ್ತಿ
ತುಂಬಿ ದಿಗ್ ದಿಗಂತಾ….. || ಜೈ ಜೈ ಜೈ ಹನುಮಂತಾ ||

ಭಕ್ತಿಯ ರೂಪ ಭಕ್ತರ ದೀಪ ಶಕ್ತಿ ನಿನ್ನ ಅನುರೂಪ |
ಬ್ರಹ್ಮಾಂಡದಲ್ಲಿ ಚಿರ ವಿಖ್ಯಾತ ನಿನ್ನಯ ಶೌರ್ಯ ಪ್ರತಾಪ |
ದೃಷ್ಟರ ಬಡಿಯಲು ಹಿಡಿದಿಹೆ ಗಧೆಯ ತೋಳ್ಬಲಕ್ಕಿಲ್ಲ ಸಮಾನ |
ರಣ ಮಾರ್ತಾಂಡಾ ನೀ ವಜ್ರಾಂಗ |
ಅಸುರಗಿಂತ ಅಸಮಾನ |
ಭೂಮಿಯ ಘೋಷ ನಿನ್ನಾ ವೇಷ
ನ್ನುತ ಸಾರಿದೆ ಭೂಮ್ಯಾಕಾಶ |
ಮಹಾನ್ ಕೀರ್ತಿ ವಂತಾ || ಜೈ ಜೈ ಜೈ ಹನುಮಂತಾ||