ಮನೆ ದೇವರನಾಮ ಓ ಜನನಿ ಪಾಶ

ಓ ಜನನಿ ಪಾಶ

0

ಓಜನ ಪಾಶ ಕೋದಂಡ ಧಾರಿಣಿ ಸೃಷ್ಟಿ ಸಂಹಾರ ಕಾರಿಣಿ |
ಚಿತ್ತ ಕ್ಷೋಭ ವಿಮೋಚನಿ ಕೈಲಾಸ ವಾಸಿನಿ |
ಮಹಾಲಕ್ಷ್ಮಿ,ಮಹಾದೇವಿ, ಮಹಾ ಸರಸ್ವತಿ ರೂಪಿಣಿ |
ಶರಣು ಶರಣು ಓ ಅಂಬಿಕಾ ಭ್ರಮರಾಂಬಿಕಾ|
ಮೂಕಾಂಬಿಕಾ…. ಮೂಕಾಂಬಿಕಾ |

ನಮೋ ನಮೋ ಮಹೇಶ್ವರಿ,ನಮೋ ಭವಾನಿ ಶಂಕರಿ| |
ನಮೋ ದೃಡಾಣಿ ಈಶ್ವರಿ ನಮೋ ತ್ರಿಲೋಕ ಸುಂದರಿ |
ನಮೋ ನಮೋ ಮಹೇಶ್ವರಿ ನಮೋ ಭವಾನಿ ಶಂಕರಿ |
ನಮೋ ದೃಡಾಣಿ ಈಶ್ವರಿ ನಮೋ ತ್ರಿಲೋಕ ಸುಂದರಿ |
ನಮೋ ನಮೋ ಮಹೇಶ್ವರಿ,ನಮೋ ನಮೋ ಮಹೇಶ್ವರಿ |

ಅನಂತ ಭಾಗ್ಯದಾಯಿನಿ. ಅನಂತ ಶೋಕ ಹಾರಿಣಿ |
ಅನೇಕ ರೂಪ ಧಾರಿಣಿ, ಅನಂತ ಜ್ಞಾನ ವಾಹಿನಿ ||
ತಿಲೋಕವೆಲ್ಲಾ ಹೆದರಿದೇ…. ತ್ರಿಲೋಕವಿಂದು ನಡುಗಿದೆ ||
ತ್ರಿಲೋಚನಪ್ರಿಯೆ ಕೃಪಕಟಾಕ್ಷ ನೀಡು ಕರುಣಿಸು |
ಕೃಪಾಕಟಾಕ್ಷ ನೀಡಿ ಕರುಣಿಸು ಕರುಣಿಸು || ನಮೋ ನಮೋ ||

ನಿನ್ನಿಂದ ತಾನೇ ಲೋಕವೂ ನಿನ್ನಿಂದ ನಾಕವು
ನಿನ್ನಿಂದ ದೇವಿ ಎಲ್ಲವು ಶರ್ವಾಣಿ ನೀನೆ ಪ್ರಾಣವು ||
ಅದೇನು ಪಾಪ ನಮ್ಮದೋ, ಅದೇನು ಕೋಪ ನಿನ್ನದೋ ||
ನಮ್ಮನ್ನು ತಾಯೇ ಮನ್ನಿಸು,ನಮ್ಮೆಲ್ಲರನ್ನು ರಕ್ಷಿಸು ||
ನಮೋ ನಮೋ ಮಹೇಶ್ವರಿ ನಮೋ ನಮೋ ಮಹೇಶ್ವರಿ ||
ನಮ್ಮೆಲ್ಲರ ರಕ್ಷಿಸೂ ತಾಯೇ ಮೂಕಾಂಬಿಕೆ ಮಾತೇ…|
ಭ್ರಮರಾಂಬಿಕೇ ಮೂಕಾಂಬಿಕೆ |