ಮನೆ ದೇವರನಾಮ ಕೇಳಿ ಎಲ್ಲಾ ಕೇಳೀ

ಕೇಳಿ ಎಲ್ಲಾ ಕೇಳೀ

0

ಶಿವ ನೆಂದು ಹಾಡಿದರೆ ಸಂತೋಷ |
ಶಿವನೆಂದು ಕೂಗಿದರೆ ಉಲ್ಲಾಸ |
ಶಿವನಾಮ ಒಂದೇ ನಿನ್ನನ್ನು |
ಕಾಪಾಡೋ ಶಕ್ತಿ ಎಂದೆಂದು |
ನಂಬಿದರೇ ಕೈಲಾಸ |
ಶಿವನ ನಂಬಿದರೆ ಕೈಲಾಸ
ಕೇಳಿ ಎಲ್ಲಾ ಕೇಳಿ ||

Join Our Whatsapp Group

ಹಾಲ ಕಡಲನ್ನು ಸುರರು ಕಡೆದಾಗ
ವಿಷವು ಯಮನಂತೆ ಮೇಲೆ ಬಂದಾಗ ||
ಅಯ್ಯೋ ಗತಿಯೇನು ನಮಗೆಂದು ಸುರರೆಲ್ಲ ಕೂಗಿ |
ಸಾವು ಬಂತೆಂದು ನಡುಗುತ್ತ ಓಡೋಡಿ ಹೋಗಿ |
ದೇವ ಜಗದೀಶ ಸರ್ವೇಶ ಕಾಪಾಡು ಏನೆ |
ಶಿವನೇ ದಯೆ ತೋರಿದಾ ಅಭಯವ ನೀಡುದಾ|
ಕ್ಷಣದಲ್ಲೆ ವಿಷವನ್ನು ಹಾಲಂತೆ ಕುಡಿದ |
ಸುರರನ್ನೂ ಕಾಪಾಡಿ ಶಿವನೆ ವಿಷಕಂಠಾ ತಾನಾದ ಕೇಳೀ ಎಲ್ಲಾ ಕೇಳಿ |

ಸಾವು ನೋವಿಲ್ಲ ನಾ ನಿನಗೆ ಎದುರಿಲ್ಲ
ಶಿವನ ನಂಬಿದರೆ ಯಾರ ಭಯವಿಲ್ಲ ||
ವಯಸ್ಸು ಹದಿನಾರು ಮುಗಿದಾಗ ಉರಿಭಾಗಲನ್ನು
ಕಂಡು ಯಮಧರ್ಮ ತನಪಾಶ ಎಸೆದಾಗ ಅವನು |
ಅಯ್ಯೋ ಮಹಾದೇವ ಸಲಹೆಂದು ಅತ್ತಾಗ ಮಗುವು |
ಶಿವನು ತನ ಶೂಲವಾ ಬೀಸಿ ಎಸೆದಾಗಲೆ |
ಯಮನು ಅಫರಾದ ತನದೆಂದು ತಲೆ ಭಾಗಿದಾಗ |
ಮಾರ್ಕಂಡಯ್ಯ ಕೈಮುಗಿದಾ |
ಅವನ ಶಿವನಾ ಕೊಂಡಾಡಿದ |
ಕೇಳಿ ಎಲ್ಲಾ ಕೇಳೀ ||