ಮನೆ ದೇವರನಾಮ ಗುರುವಾರದಂದು ರಾಘವೇಂದ್ರ ರಾಯರ ಭಕ್ತಿಗೀತೆ

ಗುರುವಾರದಂದು ರಾಘವೇಂದ್ರ ರಾಯರ ಭಕ್ತಿಗೀತೆ

0

ತೂಗಿರೆ ರಂಗನ ತೂಗಿರೆ ಕೃಷ್ಣನ

ತೂಗಿರೆ ಅಚ್ಯುತಾನಂತನ

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ

ತೂಗಿರೆ ಕಾವೇರಿ ರಂಗಯ್ಯನ

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ

ನಾಗ ಕನ್ನಿಕೆಯರು ತೂಗಿರೆ

ನಾಗವೇಣಿಯರು ನೇಣ ಪಿಡಿದುಕೊಂಡು

ಬೇಗನೆ ತೊಟ್ಟಿಲ ತೂಗಿರೆ || ೧ ||

ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ

ಇಂದುಮುಖಿಯರೆಲ್ಲ ತೂಗಿರೆ

ಇಂದ್ರ ಕನ್ನಿಕೆಯರು ಚಂದದಿ ಬಂದು

ಮುಕುಂದನ ತೊಟ್ಟಿಲ ತೂಗಿರೆ || ೨ ||

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ

ನೀಲಕುಂತಳೆಯರು ತೂಗಿರೆ

ವ್ಯಾಳಶಯನ ಹರಿ ಮಲಗು ಮಲಗೆಂದು

ಬಾಲ ಕೃಷ್ಣಯ್ಯನ ತೂಗಿರೆ || ೩ ||

ಸಾಸಿರ ನಾಮನೆ ಸರ್ವೋತ್ತಮನೆಂದು

ಸೂಸುತ್ತ ತೊಟ್ಟಿಲ ತೂಗಿರೆ

ಲೇಸಾಗಿ ಮಡುವಿನೊಳ್ ಶೇಷನ ತುಳಿದಿಟ್ಟ

ದೋಷ ವಿದೂರನ ತೂಗಿರೆ || ೪ ||

ಅರಳೆಲೆ ಮಾಗಾಯಿ ಕೊರಳ ಮುತ್ತಿನ ಹಾರ

ತರಳನ ತೊಟ್ಟಿಲ ತೂಗಿರೆ

ಸಿರಿದೇವಿ ರಮಣನೆ ಪುರಂದರ ವಿಠಲನೆ

ಕರುಣದಿ ಮಲಗೆಂದು ತೂಗಿರೆ || ೫ ||

ಹಿಂದಿನ ಲೇಖನಟಿವಿ ಚಾನೆಲ್‌ಗಳು ದ್ವೇಷ ಭಾಷಣವನ್ನು ಗಂಭೀರವಾಗಿ ನಿಭಾಯಿಸಿಲ್ಲ: ಸುಪ್ರೀಂ ಕೋರ್ಟ್ ಅತೃಪ್ತಿ
ಮುಂದಿನ ಲೇಖನಭುಜದ ಮರಗಟ್ಟುವಿಕೆಗೆ ಈ 5 ಯೋಗಾಸನ ಉಪಯೋಗ