ಅನ್ನಪೂರ್ಣೆ ಸದಾಪೂರ್ಣೆ
ಶಂಕರ ಪ್ರಾಣವಲ್ಲಭೆ
ಜ್ಞಾನವೈರಾಗ್ಯ ಸಿದ್ಧ್ಯರ್ಥಂ
ಭಿಕ್ಷಾಂದೇಹಿ ಚ ಪಾರ್ವತಿ ..
ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು
ನಾಲಿಗೆ ಸಾವಿರ ಸಾಲದು ಈಶ್ವರಿ ಇವಳನ್ನು ಹೊಗಳಲು
ಕಣ್ಣು ನೂರು ಸಾಲದು …..
ಭಿಕ್ಷಾಂದೇಹಿ ಎನ್ನಲು ಶಂಕರ ಭಿಕ್ಷೆಯ ನೀಡಿತು ಈ ಕರ
ಭಿಕ್ಷಾಂದೇಹಿ ಎನ್ನಲು ಶಂಕರ ಭಿಕ್ಷೆಯ ನೀಡಿತು ಈ ಕರ
ದಯೆಯ ಆಕಾರ ಪ್ರೇಮದ ಸಾಗರ , ಭಕ್ತರಿಗಿವಳೇ ಆಧಾರ ..||1||
ಮಲೆನಾಡಿನ ಮನೆ ಬೇಕೆಂದಿವಳು ಕುಳಿತಿಹಳಿಲ್ಲಿ ಹೊರನಾಡಿನಲಿ
ಮಲೆನಾಡಿನ ಮನೆ ಬೇಕೆಂದಿವಳು ಕುಳಿತಿಹಳಿಲ್ಲಿ ಹೊರನಾಡಿನಲಿ
ಚೆಲುವಿನ ತಾಣ ಒಲವಿನ ಪ್ರಾಣ .. ಆಗಿದೆ ಮಂದಿರ ಕಾಡಿನಲಿ… ||2||
ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು
ನಾಲಿಗೆ ಸಾವಿರ ಸಾಲದು ಈಶ್ವರಿ ಇವಳನ್ನು ಹೊಗಳಲು,. …. ಕಣ್ಣು ನೂರು ಸಾಲದು …..
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ಎಂ ರಂಗರಾವ್
ಗಾಯನ : ವಾಣಿ ಜಯರಾಂ