ಹರಿವರಾಸನ ಕೇಳಿ ಮಲಗಿದ
ಹರಿಹರಪುತ್ರ ಕಣ್ತೆರೆ
ದಾಸನ ಕಣ್ಣೀರು ಪಣ್ಣೀರಾಗಿಸಿ
ಅಭಿಷೇಕದಲ್ಲಿಡಲು
ನಿನ್ನಯ ದಾಸನು ಬಂದಿರುವೆ
ಬ್ರಾಹ್ಮ ಮುಹೂರ್ತದಲಿ ಶರಣಮಂತ್ರಗಳ
ಬ್ರಹ್ಮೋಪಾಸನೆ ಮಾಡಿ
ತಾರಕ ಬ್ರಹ್ಮೋಪಾಸನೆ ಮಾಡಿ |
ಒರುಕುಳಿ ತೀರ್ಥದಿ ಮಿಂದು ಶ್ರೀನಾಮಗಳ
ಬಿಡದೆಲೆ ಸ್ಮರಿಸುತ ಮಿಂದೆ
ಕಣ್ತೆರೇ… ಭಗವಾನ್ ಕಣ್ತೆರೆ ಬೇಗ
ಉದಯದಿ ಪ್ರಭೆಯಾಗಿ
ನನ್ನ ಹ್ರದಯದ ಪ್ರಭೆಯಾಗಿ
ಸರಸ್ವತಿ ಯಾಮದಲಿ ಸನ್ನಿಧಿಗೆ ಬಂದು
ಸಗುಣೋಪಾಸನೆ ಮಾಡಿ
ದಾಸನು ಸಗುಣೋಪಾಸನೆ ಮಾಡಿ |
ಸಹಸ್ರ ಕಿರಣಗಳು ಒಳಬರುವ ಮುನ್ನ
ಸಹಸ್ರಾರ್ಚನೆಗೆ ಬಂದಿಹೆನು
ಕಣ್ತೆರೇ ಭಗವಾನ್ ಕಣ್ತೆರೆ ಬೇಗ
ಉದಯದ ಪ್ರಭೆಯಾಗಿ
ನನ್ನ ಹ್ರದಯದ ಪ್ರಭೆಯಾಗಿ