ಮನೆ ದೇವರ ನಾಮ ರಾಮದೂತನ ಪಾದ ತಾಮರಸವ ಕಂಡ

ರಾಮದೂತನ ಪಾದ ತಾಮರಸವ ಕಂಡ

0

ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೂ

ಶ್ರೀ ಮನೋಹರನಂಘ್ರಿ ಭಜಕ ಸ್ತೋಮ ಕುಮುದಕೆ ಸೋಮನೆನಿಸುವ ಭೂಮಿಯೊಳು ಯದುಗಿರಿಯ ಸೀಮೆಯ ಕಾಮವರದೊಳು ಪ್ರೇಮದಿಂದಿಹ

ಕೋತಿ ರೂಪದಿ ರಘುನಾಥನಾಜ್ಞೆಯ ತಾಳಿ ಪಾದೋದಿಯ ಲಂಘಿಸಿ  
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ ಮಾತೆಯನ್ನು ಕಂಡೆರಗಿ ದಶಮುಖ ಹೋತ ಖಳಕುಲ ವ್ಯಾತ ಘಾತಿಸಿ ಸೀತೆವಾರ್ತೆಯ ನಾಥಗರುಹಿದ

ಪಾಂಡುಸುತನೆ ಪ್ರಚಂಡ ಗದೆಯನ್ನು ದೋರ್ದಂಡದಿ ಧರಿಸುತಲೀ
ಮಂಡಲದೊಳು ಭಂಡ ಕೌರವ ಚಂಡ ರಿಪುಗಳ ಖಂಡಿಸಿ ಶಿರ ಚೆಂಡನಾಡಿ ಸತಿಗೆ ಕರುಳಿನ
ದಂಡೆ ಮುಡಿಸಿದ ಉಧ್ಧಂಡ ವಿಕ್ರಮ

ಧಾರುಣಿಯೊಳು ದ್ವಿಜನಾರಿ ಗರ್ಭದಿ ಬಂದು ಮೂರೊಂದಾಶ್ರಮ ಧರಿಸಿ
ಧೀರನೀನೆರದಿಕತ್ರಿದಶ ಸಾರಗ್ರಂಥಗಳವಿರಚಿಸುತ ಮಹಾಶೂರ ಶ್ರೀಗೋಪಾಲವಿಠ್ಠಲನ
ಚಾರು ಚರಣಕೆ ಅರ್ಪಿಸಿದ ಗುರು