ಮನೆ ದೇವರನಾಮ ಮೊದಲೊಂದಿಪೇ ನಿನಗೆ ಗಣನಾಥ ದೇವರನಾಮ ಮೊದಲೊಂದಿಪೇ ನಿನಗೆ ಗಣನಾಥ February 26, 2023 0 Share WhatsAppTelegramFacebookTwitterEmail ಮೊದಲೊಂದಿಪೆ ನಿನಗೆ ಗಣನಾಥ ಬಂದ ವಿಘ್ನ ಕಳೆಯೋ ಗಣನಾಥ ಮೊದಲೊಂದಿಪೆ ನಿನಗೆ ಗಣನಾಥ ।।ಪ।। ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ ಸಂದ ರಣದಲ್ಲಿ ಗಣನಾಥ ।।೧।। ಮಾಧವನ ಆಜ್ಞೆಯಿಂದ ಧರ್ಮರಾಯ ಪೂಜಿಸಲು ಸಾಧಿಸಿದ ರಾಜ್ಜ ಗಣನಾಥ ।।೨।। ಮಂಗಳ ಮೂರುತಿ ಗುರು ರಂಗ ವಿಠಲನ ಪಾದ ಹಿಂಗದೆ ಪಾಲಿಸೊ ಗಣನಾಥ ।।೩।।