ಮನೆ ದೇವರ ನಾಮ ಕಾಗದ ಬಂದಿದೆ ನಮ್ಮ ಕಮಲನಾಭನದು

ಕಾಗದ ಬಂದಿದೆ ನಮ್ಮ ಕಮಲನಾಭನದು

0

ರಚನೆ : ಶ್ರೀ ಪುರಂದರ ದಾಸರು

ಕಾಗದ ಬಂದಿದೆ ನಮ್ಮ ಕಮಲನಾಭನದು, ಈ

ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ||ಪ||

ಕಾಮಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ

ನೇಮನಿಷ್ಠೆಯೊಳಿರೆಂಬೊ ಕಾಗದ ಬಂದಿದೆ

ತಾಮಸ ಜನರನ್ನು ಕೂಡದಿರೆಂಬೋ ಕಾಗದ ಬಂದಿದೆ , ನಮ್ಮ

ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ||

ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ

ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ

ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ , ನಮ್ಮ

ಕಮಲನಾಭನು ತಾನೆ ಬರೆದ ಕಾಗದ ಬಂದಿದೆ ||

ಗೆಜ್ಜೆ ಕಾಲ್ಕಟ್ಟಿರೆಂಬೊ ಕಾಗದ ಬಂದಿದೆ

ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ

ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ , ನಮ್ಮ

ಪುರಂದರವಿಟ್ಠಲ ತಾನೆ ಬರೆದ ಕಾಗದ ಬಂದಿದೆ ||

ಹಿಂದಿನ ಲೇಖನಕಾಂಗ್ರೆಸ್’ನಿಂದ ಮಾತ್ರ ಬಡವರ ಉದ್ಧಾರ ಸಾಧ್ಯ: ಡಾ. ಯತೀಂದ್ರ ಸಿದ್ದರಾಮಯ್ಯ
ಮುಂದಿನ ಲೇಖನಶವಾಸನದ ಉಪಯೋಗ