ಮನೆ ದೇವರನಾಮ ಸಿಂಧೂರ ವದನ ಕೊಡುವರಾ

ಸಿಂಧೂರ ವದನ ಕೊಡುವರಾ

0

ಸಿಂಧೂರ ವದನ ಕೊಡುವರಾ |

ಇಂದುಧರಾತ್ಮಜ ವಂದಿಸುವೆನು ನಾ ।। ಪ||

ಮುದಮುನಿ ಮತಾಂಬುಧಿ ಚಂದಿರಾ ।

ಬುಧಜನ ಪ್ರಸಂಗದಿ ಭವಹರಾ ।।

ಮಧು ವಿರೋಧಿಯ ಕಥಾಮೃತ ಶ್ರವಣದಿ ।

ಒದಗಿಸೋ ಮನ ಸುಜ್ಞಾನ ಮನಸಲಿ ।।

ಭಜಕರ ಮನೋರಥ ಪೂರಕಾ ।

ಸುಜನರ ಭಾವಾಂಬುಧಿ ತಾರಕಾ ।

ವಿಜಯ ಸಾರಥಿಯ ಭಜನೆಯ ಮಾಡಿಸೋ ।

ರುಜಿನ ವಾರಿಧಿ ಕುಂಭ ಸಂಭವ ।।

ಗಿರಿಜೆಯ ಕುಮಾರ ಕೃಪಾಕರ ।

ಶರಧಿಗೆ ಮನೋಹರ ಕಾರ್ಪರಾ ।

ನರ ಮೃಗೇಂದ್ರ ಚರಣಾ೦ಬುಜ ಮಧುಕರ ।

ಕರುಣಿಸೆನಗೆ ಸಿದ್ಧಿಯನು ಕಾರ್ಯದಲ್ಲಿ ।।

ಹಿಂದಿನ ಲೇಖನಉರಿಗೌಡ, ನಂಜೇಗೌಡ ಕುರಿತ ಸತ್ಯವನ್ನು ನಿರ್ಮಲಾನಂದನಾಥ ಸ್ವಾಮೀಜಿಗೆ ಮನವರಿಕೆ ಮಾಡಿಕೊಡಲಾಗುವುದು: ಸಿ ಟಿ ರವಿ
ಮುಂದಿನ ಲೇಖನಬ್ಯುಸಿ ಲೈಫ್’ಗೆ ಈ ಆಸನಗಳು ಒಳ್ಳೆಯದು