ಮನೆ ದೇವರ ನಾಮ ದುರ್ಗಾ ದೇವಿ ದುರಿತ ನಿವಾರಿನಿ

ದುರ್ಗಾ ದೇವಿ ದುರಿತ ನಿವಾರಿನಿ

0

ದುರ್ಗಾ ದೇವಿ ದುರಿತ ನಿವಾರಿನಿ

ದುಷ್ಟವಿಮರ್ದಿನಿ ಹೇ ಜನನಿ

ದೀನರ ಪೊರೆವ ದಯಾನಿಧಿ ದೇವಿ

ನಿನ್ನನೇ ನಂಬಿದೆ ನಾರಾಯಣಿ

ಕಟೀಲು ಕ್ಷೇತ್ರದಿ ನಿಂತಿಹ ತಾಯೇ, ಕರುಣಾ ಸಿಂಧು ಕಾರ್ತ್ಯಾಯನೀ

ಕಾಮ ಸಂಹಾರಿಯ ಹೃದಯ ವಿಹಾರಿನಿ,

ಕಾಪಾಡು ದುರ್ಗಾ ಪರಮೇಶ್ವರಿ

ಆದಿ ಶಕ್ತಿಯೇ ಆನಂದ ಭೈರವಿ, ಆದಿ ಅಂತ್ಯವು ನಿನಗಿಲ್ಲ ಶಾಂಭವಿ

ಮಾಯೆಯ ಮುಸುಕಲಿ ತೊಳಲುವ ನನಗೆ,

ಮುಕ್ತಿ ತೋರಿಸೆ ದುರ್ಗಾ ಪರಮೇಶ್ವರಿ

ಕತ್ತಲು ಕವಿದಿಹ ಬಾಳಿಗೆ ರವಿ ನೀ, ಧರ್ಮವ ಪೊರೆವ ದಾಕ್ಷಾಯನಿ

ದಾರಿಯ ಕಾಣದೆ ಅಲೆದಿಹೆನಮ್ಮ,

ಕೈ ಹಿಡಿದು ನಡೆಸೆ ದುರ್ಗಾ ಪರಮೇಶ್ವರಿ