ಮನೆ ಜ್ಯೋತಿಷ್ಯ ಧನಿಷ್ಠಾ (ಉತ್ತರಾರ್ಧ)

ಧನಿಷ್ಠಾ (ಉತ್ತರಾರ್ಧ)

0

ಕ್ಷೇತ್ರ – ಕುಂಭರಾಶಿಯಲ್ಲಿ 0 ಡಿಗ್ರಿಯಿಂದ 6 ಡಿಗ್ರಿ 40 ಕಲೆ. ರಾಶಿಸ್ವಾಮಿ – ಶನಿ, ನಕ್ಷತ್ರಸ್ವಾಮಿ – ಮಂಗಳ, ಗಣ – ರಾಕ್ಷಸ, ಯೋನಿ – ಸಿಂಹ, ನಾಡಿ – ಮಧ್ಯ, ನಾಮಾಕ್ಷರ – ಗೂ,ಗೇ. ಶರೀರಭಾಗ – ಮೊಣಕಾಲು ಮೊಣಕಾಲ ಹಿಂಭಾಗ, ಮಧ್ಯಭಾಗ.

ರೋಗಗಳು :- ಕಾಲಿನಲ್ಲಿ ಎಲುಬು ಭಂಗವಾಗುವುದು, ರಕ್ತವಿಕಾರ, ರಕ್ತದೋಷ, ಹೃದಯ ಸ್ತಂಭನ, ರಕ್ತದೊತ್ತಡ, ರಕ್ತದಲ್ಲಿ ಬಿಸಿ ಏರುವುದು.

ಸಂರಚನೆ :- ಯಾವಾಗಲೂ ಜಗಳ ಮಾಡುವ, ಬೇಗ ಕೋಪಗೊಳ್ಳುವ ಸ್ವಭಾವ ಇರುವವರು, ಸಂಕೋಚ, ಕಾರ್ಯತತ್ಪರ, ಪ್ರೀತಿ, ಮೈತ್ರಿಯುಳ್ಳವರು, ಸಂಘಸ್ಥಾಪಕರು, ಚಂಚಲ ಬುದ್ಧಿಯಿರುವವರು, ಶ್ರೀಮಂತರಂತೆ ನಟಿಸುವವರು, ಪರಿಶ್ರಮಿ, ನ್ಯಾಯಪರರೂ ಆಗುವರು.

ಉದ್ಯೋಗ, ವಿಶೇಷಗಳು :- ಕೃಷಿ, ಚಹ, ಕಲ್ಲಿದ್ದಲು, ಲೋಹಗಳು ವಿಸ್ಪೋಟಗಳ ಸಂಗಡ ಸಂಬಂಧ ಹೊಂದುವರು, ಇಂಜಿನಿಯರ್, ಪತ್ರಕ,ರ್ತ ಗಣಿಗಾರ, ವಸ್ತುತಜ್ಞ, ದೂರದರ್ಶನದಲ್ಲಿ ಪ್ರಸಿದ್ಧನಾಗುವವ, ನಶೆಯ ಪದಾರ್ಥಗಳ ಮಾರಾಟಗಾರ, ಕ್ಲಾರ್ಕ್, ಟೈಪಿಸ್ಟ್, ಗಣಕಯಂತ್ರ ತಜ್ಞ, ನಿರೀಕ್ಷಕ, ಯಂತ್ರ ನಿರ್ವಾಹಕ, ದಾನಿ, ಶ್ರೀಮಂತರಾಗಬಹುದಾಗಿದೆ.  

ಧನಿಷ್ಠ ಉತ್ತರಾರ್ಧದಲ್ಲಿ ಜನಿಸಿದವರು ಉತ್ತಮ ಗುಣಗಳನ್ನು ಹೊಂದುವರು. ಗಟ್ಟಿ ಶರೀರದ ಭಾಗ್ಯಶಾಲಿ ಸಂತಾನವಂತರಾದ ಇವರು ಶ್ವಾಸರೋಗವಿರುವವರಾಗುವರು. ಶನಿಯ ತನ್ನ ದಶಕಾಲದಲ್ಲಿ ಗುರುವಿನೊಂದಿಗೆ ಸೇರಿದರೆ ಉತ್ತಮ ಫಲ ನೀಡುವನು. ಬುದ್ಧಿಜೀವಿಗಳು, ಅಧಿಕ ಲಾಭ ಹೊಂದುವರು, ಕೆಟ್ಟ ಚಟಗಳನ್ನು ತ್ಯಾಗ ಮಾಡಿದವನು ಉತ್ತಮನಾಗಿರುವನು.

ಸೂರ್ಯನು ಈ ನಕ್ಷತ್ರದ ಪಾದಗಳಲ್ಲಿ ಪಾಲ್ಗುಣ ಮಾಸದಲ್ಲಿ ಏಳು ದಿನವಿರುವನು. ಚಂದ್ರನು 12 ಗಂಟೆಯಿರುವವನು.