ಮನೆ ಆರೋಗ್ಯ ಧನ್ವಂತರಿ ಸಂಹಿತೆ

ಧನ್ವಂತರಿ ಸಂಹಿತೆ

0

 ಅಧ್ಯಾಯ – 5

17. ಜ್ವರ ಸ್ಟಾಂತೇ ಭಯಾ ಬೈಕಾ ಪ್ರಭುಂಕ್ಕೆ ದ್ವೇ ವಿಭೀತಕೆ !

Join Our Whatsapp Group

 ಭುಕ್ಕಾ ಮಧ್ವಾಜ್ಯಧಾ ಶ್ರೀಣಾಂ ಚತುಷ್ಯಂ ಶತವರ್ಷಕೃತ್ | |

       ಜ್ವರ ಬಿಟ್ಟ ಬಳಿಕ, ಒಂದು ಆಳಲೆಕಾಯಿ, ಎರಡು ತಾರೆಕಾಯಿ ಮತ್ತು ಇಲ್ಲ ಬೆಟ್ಟದ ನೆಲ್ಲಿಕಾಯಿಗಳನ್ನು ಜೇನು ಮತ್ತು ತುಪ್ಪದೊಡನೆ ಕ್ರಮಬದ್ದವಾಗಿ ದಿನಕ್ಕೆ 3 ಬಾರಿ ಸೇವಿಸಿದರೆ ನೂರು ವರ್ಷ ಬಾಳಬಹುದು.

 18.ತ್ರಿಕಟು ತ್ರಿಫಲಾ ವಕ್ಷಿರ್ಗುಡೂಚೀ ಚ ಶತಾವರಿ ||

 ವಿಡಂಗ ಲೋಹ ಚೂರ್ಣಂ ತು ಮಧುನಾ ಸಹ ರೋಗನುತ್|  ತ್ರಿಫಲ ಚ ಕಣಾ ಶುಂಠಿ ಗುಡೂಚಿ ಚ ಶತಾವರಿ ॥

 ವಿಡಂಗ ಶೃಂಗ ರಾಜಾದಿ ಭಾವಿತಂ ಸರ್ವರೋಗಾನುತ್

       ತ್ರಿಕಟು, ತ್ರಿಫಲ, ಶುದ್ಧಗೊಳಿಸಿದ ಚಿತ್ರಮೂಲ, ಅಮೃತಬಳ್ಳಿ, ಶತಾವರಿ, ವಾಯುವಿಳಂಗ ಮತ್ತು ಲೋಹ ಭಸ್ಮವನ್ನು ಜೇನಿನೊಡನೆ ಸೇವಿಸಿದರೆ ಸಕಲ ರೋಗಗಳು ಗುಣವಾಗುತ್ತದೆ. ತ್ರಿಫಲ, ಹಿಪ್ಪಲಿ, ಶುಂಠಿ, ಅಮೃತ ಬಳ್ಳಿ, ಶತಾವರಿ ವಾಯುವಿಳಂಗ, ಭೃಂಗರಾಜ ಇವುಗಳ ಚೂರ್ಣವನ್ನು ಜೇನು ಅಥವಾ ತುಪ್ಪದೊಡನೆ ಸೇವಿಸಿದ ಸರ್ವರೋಗ ವಾಸಿಯಾಗುತ್ತದೆ.

 – ಅಧ್ಯಾಯ  7

19. ತ್ರಿಫಲಾ ಚಿತ್ರಕಬಲಾ ನಿರ್ಗುಂಡೀ ನಿಂಬವಾಸಕ | ಪುನರ್ನವಾ ಗುಡೂಚೀ ಚ ಬೃಹತಿ ಚ ಶತಾವರಿ | ಏತೈಫೂತಂ ಯಥಾಲಾಭಂ ಸರ್ವರೋಗ ವಿಮರ್ಧನಮ್ ||

ತ್ರಿಫಲ, ಚಿತ್ರಮೂಲ, ಬಲಾ, ಲಕ್ಕಿಗಿಡ, ಕಹಿಬೇವು, ಆಡುಸೋಗೆ, ಪುನರ್ನವ, ಆಮೃತಬಳ್ಳಿ, ನೆಲಗುಳ ಮತ್ತು ಶತಾವರಿ ಇವುಗಳಿಂದ ತಯಾರಿಸಿದ ಘೃತ ಸರ್ವ ರೋಗಗಳನ್ನು ಗುಣಪಡಿಸುತ್ತದೆ.

 ಅಧ್ಯಾಯ -8

 20 ಧನ್ಯಾಕ ನಿಂಬ ಮುಸ್ತಾನಾಂ ಸಮದುಃ ಸತು ಸುಶೃತಃ |

 *ಪಟೋಲ ಪತ್ರಯುಕ್ತಸ್ತು ಗುಡೂಚೀತ್ರಿ ಫಲಾಯುತಃ ||

*

 ಪೀತೋಖಿಲ ಜ್ವರಹರಃ ಕ್ಷುದಾಕೃದ್ವಾತನುತ್ ತ್ವಿದಮ್ ||

       ಕೊತ್ತಂಬರಿ ಬೀಜ, ಕಹಿಬೇವು, ಭದ್ರಮುಷ್ಟಿ, ಕಹಿಪಡವಲ, ತಾಲೀಸಪತ್ರ (ನಮಗೆ ಚಕ್ಕೆ) ಅಮೃತ ಬಳ್ಳಿ ಮತ್ತು ತ್ರಿಫಲ ಇವುಗಳ ಕಷಾಯಕ್ಕೆ ಜೇನು ಸೇರಿಸಿ ಸೇವಿಸಿದರೆ ಎಲ್ಲಾ ಬಗೆಯ ಜ್ವರ ವಾಸಿಯಾಗುತ್ತದೆ.

 ಅಧ್ಯಾಯ – 9

21. ಶೃಂಗರಾಜಂ ಲೋಹ ಚೂರ್ಣಂ ತ್ರಿಫಲಾ ಬೀಜ ಪೂರಕಮ್ |

22. ನೀಲೀ ಚ ಕರವೀರಂ ಚ ಗುಡಮೇತೈ ಸಮೈಃ ಶೃತಮ್ ।।

 ಪಲಿತಾನೀಹ ಕೃಷ್ಣಾನಿ ಕುರ್ಯಾಲ್ಲೇ ಪಾನ್ಮ ಹೌಷದಮ್ ||

ಗರುಗದ ರಸ, ಲೋಹ ಚೂರ್ಣ, ತ್ರಿಫಲ, ಮಾದಲಹಣ್ಣು, ನೀಲಿಗಿಡ, ಕರವೀರ (ಕಣಿಗಿಲೆ), ಬೆಲ್ಲ- ಇವುಗಳನ್ನು ಸಮ ಪ್ರಮಾಣದಲ್ಲಿ ಅರೆದು ಲೇಪಿಸಿದರೆ ಬಿಳಿಯ ಕೂದಲು ಕಪ್ಪಗಾಗುತ್ತದೆ.

 ಅಧ್ಯಾಯ – 10

22. ತ್ರಿಕಟು ತ್ರಿಫಲಾ ಚೈವ ಕರಂಜಕ್ಕೆ ಫಲಾನಿ ಚ|   ಸೈಂಧವಂ ರಜನೀ ದ್ವೇ ಚ ಭ್ರಂಗರಾಜರಸೇನ ಹಿ ||

 ಪಿಷ್ಟ್ವಾ ತದಂಜನಾದೇವ ತಮಿರಾದಿ ವಿನಾಶನಮ್ ||

       ತ್ರಿಕಟು (ಶುಂಠಿ, ಹಿಪ್ಪಲಿ, ಕರಿಮೆಣಸು), ತ್ರಿಫಲ, ಕರಂಜದ ಹಣ್ಣು, ಸೈಂಧ್ರಲವಣ, ಆರಿಸಿನ, ಮರದರಿಸಿನ ಇವುಗಳನ್ನು ಗರುಗದ ರಸದಲ್ಲಿ ಅರೆದು ಮಾತ್ರೆ ಮಾಡಿ ನೆರಳಿನಲ್ಲಿ

 ಒಣಗಿಸಬೇಕು ಈ ಮಾತ್ರೆಯನ್ನು ನೀರಿನೊಡನೆ ಅರೆದು ಅಂಜನದಂತೆ ಕಣ್ಣಿಗೆ ಹಚ್ಚಿದರೆ ತಿಮಿರ  ಮೊದಲಾದ ಕಣ್ಣಿನ ರೋಗಗಳು ಗುಣವಾಗುತ್ತದೆ.

 ಅಧ್ಯಾಯ – 17 .

 23. *ತ್ರಿಫಲಾಯಾಸ್ತು ಚೂರ್ಣಂತು ಸಾಜ್ಯಂ ಕುಷ್ಠ ವಿನಾಶಮ್ ||

ತ್ರಿಫಲ ಚೂರ್ಣಕ್ಕೆ ತುಪ್ಪ ಬೆರೆಸಿ ಸೇವಿಸಿದರೆ ಕುಷ್ಠರೋಗ ವಾಸಿಯಾಗುತ್ತದೆ.

 ಅಧ್ಯಾಯ – 18

24. ತ್ರಿಫಲಾ ಗುರು ಭೂನಿಂಭಃ ಶಿಲಾಜಿತು ಹರೀತಕೀ ।

  ಏಕೈಕ ಮೇಷಾಂ ಚೂರ್ಣಾಂತು ಮಧುನಾ * ಚ ವಿಮಿಶ್ರಿತಮ್ । *

 ಪೀತಂ ಸವಂಚ ಮೇಹಂ ತು ಕ್ಷಯಂ ನಯತಿ ಸುಸ್ವತ ||

        ತ್ರಿಫಲ, ನೆಲಬೇವು, ಶಿಲಾಜಿತು, ಅಳಲೆಕಾಯಿ ಇವುಗಳ ಒಂದೊಂದು ಚೂರ್ಣನ್ನು ಜೇನಿನೊಡನೆ ಸೇವಿಸಿದರೆ ಸಕಲ ವಿಧವಾದ ಮೇಹ ರೋಗಗಳು ಮತ್ತು ಕ್ಷಯರೋಗ ಗುಣವಾಗುತ್ತದೆ ಎಂದು ಧನ್ವಂತರಿ ಸುಶ್ರುತನಿಗೆ ತಿಳಿಸುತ್ತಾನೆ.

25. ತ್ರಿಕಟು ತ್ರಿಫಲಾಕ್ತಂ ತಿಲತೈಲಂ ತಥೈವ ಚ | ಮನಃಶಿಲಾ *ನಿಂಬಪತ್ರಂ ಜಾತಿ ಪುಷ್ಪ ಮಜಾಪಯಃ ||

 *ತನ್ಮೂತ್ರಂ ಶಂಖನಾಭಿಶ್ಚ ಚಂದನಂ ಘರ್ಷಯೇತ್ತತಃ |*

ಏ ಭಿಶ್ಚ ವರ್ತಿಕಾಂ ಕೃತ್ವಾ ತ್ವಕ್ಷೀಣೇ ಚಾಂಜಯೇತ್ತಃ | |

 *ನಶ್ಯತೇ ಪಟಲಂ ಕಾಚಂ ಪುಷ್ಪಂ ಚ ತಿಮಿರಾದಿಕಮ್ |

     ತಿಕಟು (ಶುಂಠಿ, ಹಿಪ್ಪಲಿ, ಕರಿಮೆಣಸು), ತ್ರಿಫಲ, ಎಳ್ಳೆಣ್ಣೆ, ಮಣಿಶಿಲೆ, ಬೇವಿನ ಎಲೆ, ಜಾಜಿಮಲ್ಲಿಗೆ (ಅಥವಾ ಬಿಳಿ ಸೇವಂತಿಗೆ), ಆಡಿನ ಹಾಲು, ಆಡಿನ ಮೂತ್ರ, ಶಂಖನಾಭಿ, ಶ್ರೀಗಂಧ – ಇವುಗಳನ್ನು ಅರೆದು ಬತ್ತಿ ಮಾಡಿಟ್ಟುಕೊಂಡು ಅದರಿಂದ ಕಣ್ಣಿಗೆ ಅಂಜನ ಹಾಕಬೇಕು. ಹೀಗೆ ಅಂಜನ ಮಾಡುವುದರಿಂದ ಕಣ್ಣಿನಪರೆ ಮತ್ತು ತಿಮಿರ ಮೊದಲಾದ ಕಣ್ಣಿನ ರೋಗಗಳು ಗುಣವಾಗುತ್ತವೆ.

26. ಪಿಪ್ಪಲೀ ತ್ರಿಫಲಾ ಚೂರ್ಣ೦ ಮಧುಸೈಂಧವ ಸಂಯುಕ್ತಮ್ |

 ಸರ್ವರೂಪ ಜ್ವರ ಶ್ವಾಸ *ಶೋಷಪೀನ ಸಹೃದ್ಭವೇತ್ ||

      ಹಿಪ್ಪಲಿ, ತ್ರಿಫಲ ಚೂರ್ಣ ಮತ್ತು ಸೈಂಧ್ರ* ಲವಣ ಸೇವಿಸಿದರೆ ಎಲ್ಲಾ ಬಗೆಯ ಜ್ವರ, ಕೆಮ್ಮು ದಮ್ಮು ಮತ್ತು ಪೀನಸ (ಶೀತ) ವನ್ನು ಗುಣಪಡಿಸುತ್ತದೆ.

 ಅಧ್ಯಾಯ – 19

97. ತ್ರಿಫಲಾ ಜಲತ್ಕೃಷ್ಟಂಚ ಮೂರ್ಜಾರಾಸ್ಥಿ ವಿಲೇಪೀತಮ್ । .  ತತೋನ ಪ್ರಸ್ರವೇದ್ರಕ್ತಂ ನಾತ್ರ ಕಾರ್ಯ ವಿಚಾರಣಾ 1

ತ್ರಿಫಲ ಕಷಾಯದಲ್ಲಿ ಬೆಕ್ಕಿನ ಎಲುಬನ್ನು ಅರೆದು ರಕ್ತ ಸ್ರಾವವಾಗುತ್ತಿರುವ ಜಾಗದ ಮೇಲೆ ಲೇಪಿಸಿದರೆ ರಕ್ತಸ್ರಾವ ನಿಲ್ಲುತ್ತದೆ.

 ಅಧ್ಯಾಯ – 23

28. ತ್ರಿಫಲಾ ಪಿಪ್ಪಲೀ ಚೂರ್ಣ೦ ಭಕ್ಷಿತಂ ಮಧುನಾ ಯುತಮ್ ।

 *ಭೋಜನಾದೌ ಹಿ ಸಮಧು ಪಿಪಾಸಾಜ್ಜರಿತಂ ಹರೇತ್ ॥

*

       ತ್ರಿಫಲ, ಹಿಪ್ಪಲಿ, ಜೇಷ್ಠಮಧು – ಇವುಗಳ ಚೂರ್ಣಕ್ಕೆ ಜೇನು ಬೆರೆಸಿ ಊಟಕ್ಕೆ ಮೊದಲು ಸೇವಿಸಿದರೆ ಬಾಯಾರುವ ಜ್ವರ ಗುಣವಾಗುತ್ತದೆ.

 ಅಧ್ಯಾಯ – 25

29. ಭೂನಿಂಬ ನಿಂಬ ತ್ರಿಫಲಾ ಪರ್ಪಟೈಶ್ಚ ಶೃತಂ ಜಲಮ್ |

 ಪಟೋಲೀ ಮುಸ್ತಕಾಭ್ಯಂ ಚ ವಾಸಕೇನ ಚ ನಶಯೇತ್ ||

*

 ವಿಸ್ಫೋಟಕಾನಿ ರಕ್ತಂ ಚ ನಾತ್ರ ಕಾರ್ಯ ವಿಚಾರಣಾ ॥ 41 ॥

      ನೆಲಬೇವು, ಕಹಿಬೇವು, ತ್ರಿಫಲ, ಪರ್ಪಾಟಕ, ಕಹಿಪಡವಲ, ಭದ್ರಮುಷ್ಟಿ, ಆಡುಸೋಗೆ – ಇವುಗಳ ಕಷಾಯ ಸೇವನೆಯಿಂದ ರಕ್ತ ದೋಷದಿಂದ ಚರ್ಮದ ಮೇಲೇಳುವ ಗುಳ್ಳೆ ಮತ್ತು ಬೊಕೈಗಳು ನಿವಾರಣೆಯಾಗುತ್ತವೆ.

 ಅಧ್ಯಾಯ 26

 30. ತ್ರಿಫಲಾ ಬದರಂ ದ್ರಾಕ್ಷಾ ಪಿಪ್ಪಲಿ ಚ ವಿರೇಕ ಕೃತ್ ॥ 

ತ್ರಿಫಲ, ಬೊಗರಿ ಬೇರು, ದ್ರಾಕ್ಷಿ, ಹಿಪ್ಪಲಿ – ಇವುಗಳ ಚೂರ್ಣ ಸೇವಿಸಿದರೆ ಸುಖ ವಿರೇಚನವಾಗುತ್ತದೆ.