ಅಧ್ಯಾಯ – 39
27.ಬಲಾಪಟೋಲ ತ್ರಿಫಲಾ ಯಷ್ಟ್ಯಾಹ್ವಾನಂ ವೃಹಸ್ಯ ಚ || ಕ್ಯಾಥೋ ಮಧುಯುತಃ ಪೀತೋಹನ್ತಿ ಪಿತ್ತಕಫ ಜ್ವರಮ್ ।
ಕಳ್ಳಂಗಡಲೆ (ಬಲಾ), ಕಹಿಪಡವಲ, ತ್ರಿಫಲ, ಅತಿಮಧುರ, ಆಡುಸೋಗೆ – ಇವುಗಳ ಅಯಕ್ಕೆ 1 ಕರ್ಷ ಪ್ರಮಾಣ ಜೇನುತುಪ್ಪವನ್ನು ಮಿಶ್ರ ಮಾಡಿ ಕುಡಿಸಿದರೆ ಪಿತ್ತ-ಕಫ, ಜ್ವರ ಮರಣೆಯಾಗುತ್ತದೆ (1 ಕರ್ಷ = 12 ಗ್ರಾಂ).
28.ಗುಡ ಪ್ರಗಾಡ್ಯಾಂ ತ್ರಿಫಲಾಂ ಪಿಬೇದ್ವಾ ವಿಷಮಾರ್ದಿತಃ ||
ವಿಷಮ ಜ್ವರ ಪೀಡಿತನಿಗೆ, ತ್ರಿಫಲ ಕಷಾಯಕ್ಕೆ ಹೆಚ್ಚಾಗಿ ಬೆಲ್ಲವನ್ನು ಸೇರಿಸಿ ಕುಡಿಸಬೇಕು.
29.ಗುಡೂಚೀ ತ್ರಿಫಲಾವಾಸಾತ್ರಾಯ ಮಾಣಾಯ ವಾಸಕ್ಕೆ: ||
ಕ್ವಥಿತೈರ್ವಿದಿವತ್ವಕ್ಟ ಮೇತೈಃ ಕಕೃತೈ: ಸಮ್ಮೇಃ ।
*ದ್ರಾಕ್ಷಾಮಾಗಧಿ ಕಾಮ್ಭೋದ ನಾಗರೋತ್ಪಲ ಚಂದನ್ಯ: ||
ಪೀತಂ ಸರ್ಪಿ! ಕ್ಷಯ ಸ್ವಾಸಕಾಸ ಜೀರ್ಣ ಜ್ವರ್ರಾ ಜಯೇತ್ |*
ಅಮೃತಬಳ್ಳಿ, ತ್ರಿಫಲ, ಆಡುಸೋಗೆ, ಕಹಿದಸರಿ, ತುರುಚನಬೇರು – ಇವುಗಳ ಕಷಾಯಕ್ಕೆ ತುಪ್ಪ, ದ್ರಾಕ್ಷಿ, ಹಿಪ್ಪಲಿ, ಕೊನ್ನಾರಿಗೆಡ್ಡೆ, ಶುಂಠಿ, ನೈದಿಲೆ ಗೆಡ್ಡೆ, ಕೆಂಪು ಗಂಧ ಇವುಗಳ ಸಮ ಪ್ರಮಾಣದ ಕಲ್ಕ ತಯಾರಿಸಿ ಘೃತ ಪಾಕ ಮಾಡಿ ಸೇವಿಸಿದರೆ ಕ್ಷಯ, ಶ್ವಾಸ, ಕಾಸ ಮತ್ತು ಜೀರ್ಣ ಜ್ವರ ವಾಸಿಯಾಗುತ್ತದೆ.
30.ಪಟೋಲಿ ಪರ್ಪಟಾರಿಷ್ಟ ಗುಡೂಚೀ ತ್ರಿಫಲಾ ವೈಪೈ: || ಕಟುಕಾಮ್ಬುದ ಭೂನಿಮ್ಮಯಾಸಯಾಷ್ಟ್ರಜ್ಞ ಚಂದನೈ: |
ದಾರ್ವಿ ಶಕ್ರಯವೋಶೀರಾತ್ರಾ ಯಮಣಾಕಣೋತ್ಸಲೈ || ದಾತ್ರಿಭೃಙ್ಗ ರಜೋಭೀರುಕಾಕಮಾಲೆ ರಸ್ಟ್ ಧೃತಮ್ |
ಸಿದ್ಧಮಾಶ್ವಪಚೀಕುಷ್ಠಜ್ವರ ಶುಕ್ರಾರ್ಜುನ ವ್ರರ್ಣಾ || ಹನ್ನಾನ್ನಯನವದನ ಕರ್ಣರ್ಜಾಫಾಣಾರ್ಜಾ ಗರ್ದಾ |
ಕಹಿಪಡವಲ, ಪರ್ಪಾಷ್ಟಕ, ಬೇವಿನ ತೊಗಟೆ, ಅಮೃತಬಳ್ಳಿ, ತ್ರಿಫಲ, ಆಡುಸೋಗೆ, ಕಟುಕ ರೋಹಿಣಿ, ಕೊನ್ನಾರಿ ಗೆಡ್ಡೆ, ನೆಲಬೇವು, ತುರುಚನ ಬೇರು
ಅತಿಮಧುರ, ಕೆಂಪುಗಂಧ, ಮರದರಿಸಿನ, ಕೊಡಸಿಗನ ಬೀಜ, ಲಾಮಂಚ, ಕಹಿದಸರಿ, ಹಿಪ್ಪಲಿ, ನೈದಿಲೆ ಗೆಡ್ಡೆ, ಬೆಟ್ಟದ ನೆಲ್ಲಿಕಾಯಿ, ಗರುಗದ ಸೊಪ್ಪು, ಆಷಾಡಿ (ಶತಾವರಿ) ಬೇರು, ಗಣಿಕೆಸೊಪ್ಪು – ಇವೆಲ್ಲವನ್ನು ಸೇರಿಸಿ ಕಷಾಯ ಮಾಡಿ, ತುಪ್ಪ ಸೇರಿಸಿ ಘೃತ ಪಾಕ ಮಾಡಿ ಸೇವಿಸಿದರೆ ಗಂಡಮಾಲೆ, ಕುಷ್ಠ, ಜ್ವರ, ನೇತ್ರದ ಶುಕ್ರ, ಅರ್ಜುನನೆಂಬ ನೇತ್ರರೋಗ, ವ್ರಣ, ಕಣ್ಣು, ಕಿವಿ, ಮುಖ ಮತ್ತು ಮೂಗಿಗೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ.
ಪಂಚಗವ್ಯ ಧೃತ
ಗವ್ಯಂ ದಧಿ ಚ ಮೂತ್ರಂ ಚ ಕ್ಷೀರಂ ಸರ್ಪಿ: ಶಕ್ಕೆದ್ರಸ ||
*ಸಮಭಾಗಿಸಿ ಪಾಚ್ಯಾನಿ ಕಲ್ಯಾಂ ಶ್ಚೈರ್ತಾ ಸಮಾವೇಶ್ ।
ತ್ರಿಫಲಾ ಚಿತ್ರಕಂ ಮುಸ್ತಂ ಹರಿದ್ರೇ ದ್ವೇ ವಿಷಾಂ ವಾಚಾಮ್ ||
ವಿಡಙ್ಗ ತೂಷಣಂ ಚವ್ಯಂ ಸುರದಾರು* ತಥೈವ ಚ |
ಪಞ್ಗ ಗವ್ಯ ಮಿದಂ ಪಾನಾದ್ವಿಷಮ ಜ್ವರನಾಶನಮ್ ||
ಹಸುವಿನ ಮೊಸರು, ಮೂತ್ರ, ಹಾಲು, ತುಪ್ಪ ಮತ್ತು ಸಗಣಿಯ ರಸ – ಇವುಗಳನ್ನು ಸಮಭಾಗ ತೆಗೆದುಕೊಂಡು ಮಿಶ್ರ ಮಾಡಿ 1/ 4 ಭಾಗ ನಿಲ್ಲುವಂತೆ ಕುದಿಸಿ ತ್ರಿಫಲ, ಚಿತ್ರಮೂಲ, ಕೊನ್ನಾರಿಗೆಡ್ಡೆ, ಅರಿಸಿನ, ಮರದರಿಸಿನ, ಅತಿಬಜೆ, ಬಜೆ, ವಾಯುವಿಳಂಗ, ತ್ರಿಕಟು, ಚಿವ್ಯ, ದೇವದಾರು – ಇವುಗಳ ಸಮ ಭಾಗದ ಕಲ್ಕ ತಯಾರಿಸಬೇಕು. ಈ ಕಲ್ಕವನ್ನು ಮೇಲೆ ತಯಾರಿಸಿದ ಪಂಚಗವ್ಯ ಕಷಾಯ ಮತ್ತು ಕಷಾಯ ಪ್ರಮಾಣದ ತುಪ್ಪದೊಡನೆ ಕಾಯಿ ತಯಾರಿಸಿದ ಘೃತವನ್ನು ಪಂಚಗವ್ಯ ಧೃತ ಎಂದು ಕರೆಯುತ್ತಾರೆ. ಇದರ ಸೇವನೆಯಿಂದ ವಿಶಮಶಿತ ಜ್ವರ ವಾಸಿಯಾಗುತ್ತದೆ.
32.ತ್ರಿಫಲೋಶೀರಸಮ್ಮಾಕ ಕಟುಕಾಶಿ ವಿಷಾನ್ವಿತೈ: (ಘನೈ) |
ಶತಾವರೀ ಸಪ್ತಪರ್ಣ ಗುಡೂಚೀ ರಜನೀಧ್ವಯ್ಯ: ||
ಚಿತ್ರಕತ್ರಿವೃತಾಮೂರ್ವಾ ಪಟೋಲಾರಿಷ್ಟ ಮಲಕೈ! |
*ಕಿರಾತ ತಿಕ್ಕಕವಚಾ ವಿಶಾಲಾ ಪದ್ಮಕೋತ್ಪಲೈಃ ॥
*
ಸಾರಿವಾದ್ವಯಯಷ್ಟಾಹ ಚನ್ನವಿಕಾರಕ್ತಚಿನೈ | ದುರಾಲಬಾಪರ್ಪಟಕ * ತ್ರಾಯಮಾಣಾಟರೂಪಕೈ ||
ರಾಸ್ಸಾಕುಙ್ಕ ಮಮಞ್ಞಾಷ್ಮಾ ಮಾಗಧೀನಾಗಿ ಸ್ತಥಾ | ಧಾತ್ರೀಫಲಂಸೈ ಸಮ್ಯಗ್ದ್ವಿ ಗುಣೖಃ ಸಾದಿತಂ ಹವಿಃ ||
*ಪರಿಸರ್ಪಜ್ವರ ಶ್ವಾಸಗುಲ್ಮಎ ಕುಷ್ಠ ನಿವಾರಣ್ |
ಪಾಣ್ಡು ಪ್ಲೀಹಾಗ್ನಿ ಮಾನ್ದ್ಯೇ ಭ್ಯ ಏತದೇವ* ಪರಂ ಹಿತಮ್jl|
ತ್ರಿಫಲ, ಲಾಮಂಚ, ಕಕ್ಕೆಕಾಯಿ, ಕಟುಕ ರೋಹಿಣಿ, ಅತಿಬಜೆ, ಮುಸ್ತಾ, ಶತಾವರಿ (ಆಶಾಡಿ ಬೇರು), ಮದಾಲೆ ತೊಗಟೆ, ಅಮೃತಬಳ್ಳಿ, ಅರಿಸಿನ ಮರದರಿಸಿನ, ಚಿತ್ರಮೂಲ, ತಗಡೆಬೇರು, ಕೊರಟಿಗೆ ಬೇರು, ಕಹಿಪಡವಲ, ಬೇವಿನ ತೊಗಟೆ, ಮಡಿವಾಳ, ನೆಲಬೇವು, ಬಜೆ, ದಾಸಮಕ್ಕೆಯ ಬೇರು, ತಾವರೆ, ನೈದಿಲೆಗೆಡ್ಡೆ, ಬಿಳಿಸೋಗದೇ ಬೇರು, ಕಪ್ಪು ಸೋಗದೇ ಬೇರು, ಅತಿಮಧುರ, ಚವ್ಯ, ರಕ್ತಚಂದನ, ತುರುಚನ ಬೇರು, ಪರ್ಪಾಟಕ, ಕಹಿದಸರಿ, ಆಡುಸೋಗೆ ಸೊಪ್ಪು, ರಾಸ್ತೆ, ಕುಂಕುಮ ಕೇಸರಿ, ಮಂಜಿಷ್ಟ, ಹಿಪ್ಪಲಿ, ಶುಂಠಿ – ಇವುಗಳ ಒಟ್ಟು ಕಷಾಯಕ್ಕೆ ¾ ಭಾಗ ತುಪ್ಪ ಸೇರಿಸಿ ತಯಾರಿಸಿದ ಧೃತ ಪಾಕವನ್ನು ಸೇವಿಸುವುದರಿಂದ ವಿಸರ್ಪ, ಜ್ವರ, ಗುಲ್ಮ, ಕುಷ್ಠರೋಗ, ಶ್ರೀಹವೃದ್ಧಿ, ಅಗ್ನಿಮಾಂದ್ಯಗಳಂತಹ ತೊಂದರೆಗಳು ನಿವಾರಣೆಯಾಗುತ್ತವೆ.
ಅಧ್ಯಾಯ – 41
33. ಏಲಜ ಮೋದಾಮಲಕಾಭಯಾಕ್ಷಗಾಯತ್ರೆರಿಷ್ಟಾ ಸನಶಾಲಸಾರಾನ್ |
. ವಿಡಙ್ಗ ಭಲ್ಲಾತಕ ಚಿತ್ರಕೋಗ್ರಾ ಕಟತ್ರಿಕಾಲ್ಲೋ ದುಸುರಾಷ್ಟ್ರಜಾಂಶ್ಚ ||
*ಪಕ್ತ್ವಾಜಲೇತೇನಪಚೇದ್ಧಿ ಸರ್ಪಿಸ್ತಸ್ಮಿನ್ ಸುಸಿದ್ದೇ ತ್ವವತಾರಿತೇ ಚ ।
ತ್ರಿಂಶತ್ಸಲಾನತ್ರ ಸಿತೋಪಲಾಯ *ದತ್ವಾತುಗಾಕ್ಷೀರ ಪಲಾನಿ ಪಟ್ಟ ॥
ಪ್ರಸ್ಸೇ ಘೃತಸ್ಯ ದ್ವಿಗುಣಂ ಚ ದದ್ಯಾತ್ ಕ್ಷೌದ್ರಂ ತತೋಮನ್ನಹತಂ ವಿದದ್ಯಾತ್|
ಪಲಂ ಪಲಂ ಪ್ರಾತರತಃ ಪ್ರಲಿಹ್ಯ ಪಶ್ಚಾತಿಬೇತ್ ಕ್ಷೀರಮತತಶ್ಚ ||
ಏತದ್ಧಿ ಮೇಧಂ ಪರಮಂ ಪವಿತ್ರಂ ಚಕ್ಷುಷ್ಯ ವಮಾಯುಷ್ಯಮೇಥೋ ಯಶಸ್ಸಮ್ |
ಯಕ್ಷಣ ಮಾಶು ವೃಪಹನ್ತಿ ಚೈತತ್ ಪಾಮಯಂ ಚೈವ ಭಗಂದರಂ ಚ ||
*ಶ್ವಾಸಂ ಚ ಹನ್ತಿಸ್ವರಭೇದ ಕಾಸಹಹಗುಲ್ಬಗ್ರಹಣಿ ಗದಾಂಚ |
ನಾ ಚಾತ್ರ ಕಿಞ್ಞಾತ್ ಪರಿವರ್ಜನೀಯಂ ರಸಾಯನಂ ಚೈ ತದಪಾಸ್ಯಮಾನಮ್
ಎಲಕ್ಕಿ, ವಾದಕ್ಕಿ, ತ್ರಿಫಲ, ಕಗ್ಗಲಿ, ತೊಗಟೆ, ಬೇವಿನ ತೊಗಟೆ, ಕೆಂಪುಹೊನ್ನೆ, ಶಾಲ ವಕ್ಷದ ಗೋಂದು, ವಾಯುವಿಳಂಗ, ಗೇರು ಬೀಜ ಚಿತ್ರಮೂಲ ಬಜೆ,ತ್ರಿಗಟು ಕೊನ್ನಾರಿ ಗೆಡ್ಡೆ,,ತುವರೆ ಮಣ್ಣು ಇವುಗಳನ್ನು ಸಮಭಾಗ ಸೇರಿಸಿ ಒಟ್ಟು ದ್ರವ್ಯದ 4 ಭಾಗದಷ್ಟು ನೀರು ಸೇರಿಸಿ ಒಂದು ಭಾಗ ಕಷಾಯ ಉಳಿಯುವಂತೆ ಕುದಿಸಿ ಸೊಸಿಕೊಂಡ ಕಷಾಯಕ್ಕೆ ಕಷಾಯಕ್ಕೆ 1/4 ಭಾಗ ತುಪ್ಪ ಸೇರಿಸಿ ಪಾಕ ಮಾಡಿ ತಣ್ಣಗಾದ ನಂತರ 1 ಪ್ರಸ್ಥದಷ್ಟು ಕಷಾಯಕ್ಕೆ ಸೇರಿಸಿ ಮಿಶ್ರಣ ಮಾಡಿ ಸಂಗ್ರಹಿಸಿಟ್ಟುಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಹೊತ್ತು 1 ಪಲ ಪ್ರಮಾಣದಷ್ಟು ಸೇವಿಸಿ ಹಾಲು ಕುಡಿಯುವುದರಿಂದ ಮೇಧ ಜನಕವಾಗುತ್ತದೆ. ಆಯಸ್ಸನ್ನು ಹೆಚ್ಚಿಸುತ್ತದೆ, ಕ್ಷಯರೋಗ ಬೇಗ ವಾಸಿಯಾಗುತ್ತದೆ. ಪಾಂಡುರೋಗ, ಭಗಂಧರ (Fistula), ಶ್ವಾಸ, ಕಾಸ, ಸ್ವರಭೇದ, ಹೃದ್ರೋಗ, ಪ್ಲೀಹ ವೃದ್ಧಿ, ಗುಲ್ಮ ಮತ್ತು ಗ್ರಹಣಿ ರೋಗ ನಿವಾರಣೆಯಾಗುತ್ತದೆ. ಆಹಾರದಲ್ಲಿ ಪತ್ಯವಿಲ್ಲ (1 ಪಲ = 48 ಗ್ರಾಂ: ಪ್ರಕೃತಿ 768 пор).
ಅಧ್ಯಾಯ – 42
34. ಪಾಠಾನಿಕುಮ್ಮರಜನಿತ್ರಿಕಟು ತ್ರಿಫಲಾಗ್ನಿಕಮ್* ||. ಲವಣಂ ವೃಕ್ಷಬೀಜಂ ಚ ತುಲ್ಕಂ ಸ್ಯಾದನವಂ ಗುಡಮ್ ||
ಪಥ್ಯಾಭಿರ್ವಾಯುತಂ ಚೂರ್ಣಂ ಗವಾಂ ಮೂತ್ರಯುತಮ್ ಪಚೇತ್
||
ಗುಟಿಕಾಸ್ತದ್ಧನೀಭೂತಂ ಕೃತ್ವಾಖಾದೇದ ಭುಕ್ತಿವಾನ್ |
ಗುಲ್ಕ ಪ್ಲೇಹಾಗ್ನಿ ಸಾದಾಂಸ್ತನ್ನಾ ಶಯೇಯುರಶೇಷತಃ ॥ *ಹೃದ್ರೋಗಂ ಗ್ರಹಣೀಂ ದೋಷಂ ಪಾಣ್ಡುರೋಗಂ ಚ ಧಾರುಣಮ್ |
ಅಗಳುಶುಂಠಿ, ಜಾಪಾಳದ ತೊಗಟೆ, ಅರಿಸಿನ, ತ್ರಿಕಟು, ತ್ರಿಫಲ, ಚಿತ್ರಮೂಲ, ಸೈಂಧವ ಲವಣ, ಕೊಡಸಿಗೆ ಬೀಜ – ಇವುಗಳ ಒಟ್ಟು ಮಿಶ್ರಣದ ಸಮಭಾಗ ಹಳೆ ಬೆಲ್ಲ ಸೇರಿಸಿ ಸೇವಿಸಬೇಕು ಅಥವಾ ಸಮಭಾಗ ಆಳಲೆಕಾಯಿ ಚೂರ್ಣದೊಡನೆ ಮಿಶ್ರಣ ಮಾಡಿ ಗೋಮೂತ್ರದಲ್ಲಿ ಕಲಸಿ ಕುದಿಸಿ ಗಟ್ಟಿಯಾದ ಮೇಲೆ ಗುಳಿಗೆಗಳನ್ನು ಮಾಡಿಟ್ಟುಕೊಂಡು ಭೋಜನಕ್ಕೆ ಮೊದಲು ಸೇವಿಸಬೇಕು. ಈ ಗುಳಿಗೆಗಳನ್ನು ಸೇವಿಸುವುದರಿಂದ ಗುಲ್ಮ, ಹಪ್ಲೀ, ಅಗ್ನಿಮಾಂದ್ಯ, ಹೃದ್ರೋಗ, ಗ್ರಹಣಿರೋಗ ಮತ್ತು ಪಾಂಡುರೋಗ ವಾಸಿಯಾಗುತ್ತದೆ.