ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇದೀಗ, ಎಸ್‌ಐಟಿಗೆ 500 ಪುಟುಗಳ ದಾಖಲೆಯನ್ನು ಗಿರೀಶ್ ಮಟ್ಟಣ್ಣನವರ್ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಕೆಲವು ಅಸಹಜ ಸಾವುಗಳ ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ತನಿಖೆ ನಡೆಸಿ ಎಂದು ಗಿರೀಶ್ ಮಟ್ಟಣ್ಣನವರ್, ಎಸ್‌ಐಟಿ ಮುಂದೆ ಮನವಿ ಮಾಡಿದ್ದಾರೆ. ಕಳೆದ 35 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಆಗಿರುವ ಅಸಹಜ ಸಾವುಗಳ ವಿವರವಾದ ದಾಖಲೆ ನೀಡಿದ್ದಾರೆ.
ಈ ಸಾವುಗಳಲ್ಲಿ ಬಹುತೇಕ ಸಾವುಗಳ ತನಿಖೆಯೇ ನಡೆದಿಲ್ಲ. ಧರ್ಮಸ್ಥಳ ಪೊಲೀಸರು ಈ ತನಿಖೆ ನಡೆಸಲು ವಿಫಲರಾಗಿದ್ದಾರೆ. ತನಿಖೆ ನಡೆಸದಿರಲು ಏನು ಕಾರಣ ಎಂಬುದರ ಬಗ್ಗೆ ನಮಗೆ ಅನುಮಾನವಿದೆ ಎಂದು ಎಸ್‌ಐಟಿಗೆ ಕೊಟ್ಟ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಅವರಿಂದ ಧರ್ಮಸ್ಥಳ ಪಂಚಾಯಿತಿ ದಾಖಲೆ ಫೋರ್ಜರಿ ದಾಖಲೆ ಬಿಡುಗಡೆ ಹಿನ್ನೆಲೆ, ಎಸ್‌ಐಟಿಯಿಂದ ಧರ್ಮಸ್ಥಳ ಪಂಚಾಯಿತಿ ಅಧಿಕಾರಿಗಳಿಗೆ ಬುಲಾವ್ ನೀಡಲಾಗಿದೆ. ಈ ಪರಿಣಾಮವಾಗಿ ಧರ್ಮಸ್ಥಳ ಗ್ರಾಪಂ ಅಧಿಕಾರಿ, ಸಿಬ್ಬಂದಿಯು ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ, ಪಂಚಾಯತ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಸೂಚಿಸಿತ್ತು. ದಾಖಲೆ ತೆಗೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.














