ಮನೆ ರಾಜ್ಯ ಧರ್ಮಸ್ಥಳ ಪ್ರಕರಣ – ಮೊದಲ ಬಾರಿಗೆ ಮೌನ ಮುರಿದ ಸಿಎಂ

ಧರ್ಮಸ್ಥಳ ಪ್ರಕರಣ – ಮೊದಲ ಬಾರಿಗೆ ಮೌನ ಮುರಿದ ಸಿಎಂ

0

ಬೆಂಗಳೂರು : ವಿಧಾನಸಭೆಯಲ್ಲಿ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಧರ್ಮಸ್ಥಳ ಬಗ್ಗೆ ಈಗ ಬಿಜೆಪಿಯವರು ಚಳವಳಿ ಮಾಡುತ್ತಿದ್ದಾರೆ.

ಧರ್ಮಸ್ಥಳ ತನಿಖೆ ಬಗ್ಗೆ ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಎಸ್‌ಐಟಿ ರಚನೆ ಮಾಡಿದಾಗ ಬಿಜೆಪಿಗರು ಮಾತನಾಡಲೇ ಇಲ್ಲ. 15 ಜಾಗದಲ್ಲಿ ಅಗೆದು ಎರಡು ಕಡೆ ಮಾತ್ರ ಅಸ್ಥಿಪಂಜರ ಪತ್ತೆಯಾಗಿತ್ತು. 13 ಕಡೆ ಏನೂ ಸಿಗದ ಬಳಿಕ ಬಿಜೆಪಿಯವರು ಮಾತನಾಡಲು ಶುರು ಮಾಡಿದ್ದಾರೆ ಎಂದರು.

ಗೃಹ ಸಚಿವ ಪರಮೇಶ್ವರ್ ಕೂಡ ಯಾವುದೇ ಸಂಖ್ಯೆ ಹೇಳದೇ ಜಾರಿಕೊಂಡಿದ್ದರೂ, ಈಗ ಸಿಎಂ ಎರಡು ಕಡೆ ಸಿಕ್ಕಿದೆ, 13 ಕಡೆ ಸಿಕ್ಕಿಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ. ಆದರೆ ಸಿಎಂ ತನಿಖೆಯ ಸಾರಾಂಶದ ಬಗ್ಗೆ ಯಾವುದೇ ವಿವರಣೆ ನೀಡಲಿಲ್ಲ ಎಂದು ತಿಳಿದುಬಂದಿದೆ.