ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು. ಮಾ.31 ಒಳಗೆ ನಿರ್ಧಾರವಾಗದಿದ್ದರೆ ಏಪ್ರಿಲ್ 2 ರಂದು ಅಂತಿಮ ತೀರ್ಮಾನ ಕೈಗೊಳ್ಳಲು ತಿರ್ಮಾನಿಸಲಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಮೂರುಸಾವಿರಮಠದಲ್ಲಿ ನಡೆದ ಮಠಾಧೀಶರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಸುಮಾರು 125 ಕ್ಕೂ ಹೆಚ್ಚು ಮಠಾಧೀಶರು ಭಾಗಿದ್ದರು. ಅಲ್ಪ ಸಮಯದಲ್ಲಿ ಇಷ್ಟು ಸ್ವಾಮೀಜಿ ಯವರು ಪಾಲ್ಗೊಂಡಿದ್ದಾರೆ.ಸಮಾಜಕ್ಕೆ ಅನ್ಯಾಯವಾದಾಗ ಸುಮ್ಮನಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಅನಿವಾರ್ಯವಾದರೆ ಲೋಕಸಭೆಗೆ ಸ್ವತಂತ್ರ ಸ್ಪರ್ಧೆ ಗೂ ಸಿದ್ಧ.ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕೆ ವಿನಃ ತುಳಿದು ರಾಜಕಾರಣ ಮಾಡುವುದಲ್ಲ.ಸಮಾಜದ ಹಲವು ಸಮಸ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಿದ್ದಾರೆ.
Saval TV on YouTube