ಮನೆ ರಾಜ್ಯ ಧಾರವಾಡ ಲೋಕಸಭಾ ಕ್ಷೇತ್ರ: ಇತಿಹಾಸ ಸೃಷ್ಠಿಸಿದ ಪ್ರಲ್ಹಾದ್ ಜೋಶಿ

ಧಾರವಾಡ ಲೋಕಸಭಾ ಕ್ಷೇತ್ರ: ಇತಿಹಾಸ ಸೃಷ್ಠಿಸಿದ ಪ್ರಲ್ಹಾದ್ ಜೋಶಿ

0

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರ ಈ ಬಾರಿಯೂ ಬಿಜೆಪಿಯ ತೆಕ್ಕೆಗೆ ಬಿದ್ದಿದೆ. ಐದನೇ ಬಾರಿಯೂ ಗೆಲ್ಲುವ ಮೂಲಕ ಪ್ರಲ್ಹಾದ್ ಜೋಶಿ ಇತಿಹಾಸ ಸೃಷ್ಟಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಲ್ಹಾದ್ ಜೋಶಿ ಐದನೇ ಬಾರಿಗೆ ಕಣಕ್ಕೆ ಇಳಿದಿದ್ದರು. ಇನ್ನು ಕಾಂಗ್ರೆಸ್​ ಹೊಸ ಮುಖಕ್ಕೆ ಮಣೆ ಹಾಕಿದ್ದು ವಿನೋದ ಅಸೂಟಿ   ಅವರನ್ನು ಕಣಕ್ಕಿಳಿತ್ತು.

Join Our Whatsapp Group

ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ್​ ಜೋಶಿಯವರು 6,84,837 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​ನ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರು 4,79,765 ಮತಗಳನ್ನು ಪಡೆದಿದ್ದರು. ಪ್ರಹ್ಲಾದ್​ ಜೋಶಿಯವರು ವಿನಯ್ ಕುಲಕರ್ಣಿ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ಇದಕ್ಕೂ ಮುನ್ನ 2014ರ ಲೋಕಸಭಾ ಚುನಾವಣೆಯಲ್ಲೂ ಸಂಸದ ಪ್ರಹ್ಲಾದ್​ ಜೋಶಿಯವರೇ ಗೆಲವು ಸಾಧಿಸಿದ್ದರು. ಈ ಚುನಾವಣೆಯಲ್ಲೂ ಪ್ರಹ್ಲಾದ್​ ಜೋಶಿಯವರ ವಿರುದ್ಧ ವಿನಯ ಕುಲಕರ್ಣಿಯವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಹ್ಲಾದ್​ ಜೋಶಿಯವರು 5,43,395 ಮತಗಳನ್ನು ಪಡೆದಿದ್ದರು. ಇನ್ನು ವಿನಯ್​ ಕುಲಕರ್ಣಿಯವರು 4,31,738 ಮತಗಳನ್ನು ಪಡೆದಿದ್ದರು.

ಇನ್ನು ಧಾರವಾಡ ಲೋಕಸಭಾ ಕ್ಷೇತ್ರ 1996ರ ಲೋಕಸಭಾ ಚುನಾವಣೆವರೆಗೂ ಕಾಂಗ್ರೆಸ್​ನ ಭದ್ರಕೋಟೆಯಾಗಿತ್ತು. 1996ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್​ ಕೋಟೆ ಮೇಲೆ ಮೊದಲ ಬಾರಿಗೆ ತನ್ನ ಬಾವುಟ ಹಾರಿಸಿತು. ಅಲ್ಲಿಂದ ಇಲ್ಲಿಯವರೆಗೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿದೆ. ಬಿಜೆಪಿಯ ಭದ್ರಕೋಟೆಯಾಗಿದೆ.