ಮನೆ ಮನರಂಜನೆ ತಂದೆಯಾಗಲಿರುವ ಸಿಹಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ

ತಂದೆಯಾಗಲಿರುವ ಸಿಹಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ

0

ಕನ್ನಡ ಚಿತ್ರರಂಗದ ನಟ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ದಂಪತಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಮದುವೆ ಆಗಿ ಮೂರು ವರ್ಷಗಳ ಬಳಿಕ ಪ್ರೇರಣಾ ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಧ್ರುವ ಸರ್ಜಾ ಬಹಳ‌ ಡಿಫ್ರೆಂಟ್ ಆಗಿ ಹಂಚಿಕೊಂಡಿದ್ದಾರೆ.

ಮಾರ್ಟಿನ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಧ್ರುವ ಸರ್ಜಾ ಪ್ರೇರಣಾರೊಂದಿಗೆ ಕಲರ್ ಫುಲ್ ಫೋಟೋಶೂಟ್ ಮಾಡಿಸುವ ಮೂಲಕ ತಾವು ಈ ತಿಂಗಳಲ್ಲೇ ಪೋಷಕರಾಗಲಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ದೈವಿಕವಾಗಿ ನಮ್ಮನ್ನು ಆಶೀರ್ವದಿಸಿ ಅಂತಾ ತಿಳಿಸಿದ್ದಾರೆ.

ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರು ಬಾಲ್ಯದಿಂದಲ್ಲೇ ಪ್ರೀತಿಸಿದ ಜೋಡಿ. ಇವರು 14 ವರ್ಷಗಳ ಪ್ರೀತಿಗೆ 24 ನವೆಂಬರ್ 2019ರಲ್ಲಿ ಮದುವೆಯಾದರು. ಈ ತಿಂಗಳಲ್ಲಿ ಮನೆಗೆ ಹೊಸ ಅತಿಥಿಯ ಆಗಮನ ಆಗುತ್ತಿದ್ದು, ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಹಿಂದಿನ ಲೇಖನಅದ್ಧೂರಿ ದಸರಾ ಆಚರಣೆಗೆ ಪ್ರಾಯೋಜಕತ್ವ ವಹಿಸುವ ಮೂಲಕ ಕೈಜೋಡಿಸಿ: ಡಿಸಿ ಡಾ.ಬಗಾದಿ ಗೌತಮ್
ಮುಂದಿನ ಲೇಖನವುವುಜೆಲಾ (ತುತ್ತೂರಿ) ಮಾರಾಟ ಮತ್ತು ಬಳಕೆ ನಿಷೇಧ