ಮನೆ ಆರೋಗ್ಯ ಡಯಾಬಿಟಿಸ್ : ಭಾಗ 3

ಡಯಾಬಿಟಿಸ್ : ಭಾಗ 3

0

 ಡಯಾಬಿಟೀಸ್ ಗೆ ಕಾರಣಗಳು

Join Our Whatsapp Group

 ★ಅನುವಂಶೀಯತೆ

 ★ಹೆಚ್ಚಿನ ತೂಕ, ಹೆಚ್ಚಿಗೆ ತಿನ್ನುವುದರಿಂದ

 ★ಶರೀರ ಶ್ರಮವಿಲ್ಲದೆ ಇರುವುದರಿಂದ

 ★ಮಾನಸಿಕ ಒತ್ತಡಗಳು

★ ಕೆಲವು ಬಗೆಯ ಔಷಧಿಗಳಿಂದ

★ವಯಸ್ಸಿನಿಂದಾಗಿ ಪದೇ ಪದೇ ಅಂಟುರೋಗಗಳು ಬರುವುದರಿಂದ.

ಅಧಿಕ ತೂಕ

 ★ಟೈಪ್ ಟೂ ಡಯಾಬಿಟೀಸ್ ಇವರಲ್ಲಿ ಇರುವವರಲ್ಲಿ ಎಂಬ ಶೇಕಡಾ 80 ಮಂದಿ ಹೆಚ್ಚು ತೂಕವುಳ್ಳವರೇ ಆಗಿರುತ್ತಾರೆ.ಇಲ್ಲಿ ಸಮಸ್ಯೆ ತೂಕದ್ದಲ್ಲ. ಆ ತೂಕ ಯಾವ ಯಾವ ಭಾಗಗಳಲ್ಲಿ ಕೇಂದ್ರೀಕೃತವಾಗಿದೆ ಎನ್ನುವುದು ಡಯಾಬಿಟಿಸ್  ಬರಲು ಕಾರಣವಾಗಿರುತ್ತದೆ.

 ★ಮುಖ್ಯವಾಗಿ ಹೊಟ್ಟೆಯ ಭಾಗ ಬೆಳೆದವರಿಗೆ ಈ ವ್ಯಾಧಿ ಬರುವ ಸಂಭವ ಹೆಚ್ಚು.

★ಸಾಮಾನ್ಯವಾಗಿ ಮಧ್ಯವಯಸ್ಸು ದಾಟಿದವರಿಗೆ ಹೊಟ್ಟೆ ಬರುತ್ತದೆ ಈ ಕಾರಣದಿಂದ ಮಧ್ಯವಯಸ್ಸಿನಿಂದ ಟೈಪ್ ಟು ಡಯಾಬಿಟಿಸ್ ಬರಲು ಹೆಚ್ಚಿನ ಅವಕಾಶವಿದೆ.

 ★ಆದರೆ ಇಂದಿನ ದಿನಗಳಲ್ಲಿ 25 30 ವರ್ಷಗಳ ನಡುವಿನ ಯುವಕರಿಗೂ ಕೂಡಾ ಬೊಜ್ಜು ಹೊಟ್ಟೆ ಕಂಡುಬರುತ್ತದೆ.ಆದ್ದರಿಂದ ಈ ವಯಸ್ಸಿನವರಲ್ಲಿಯೂ ಕೂಡ ಈ ನಡುವೆ ಡಯಾಬಿಟಿಸ್ ಕಂಡುಬರುತ್ತಿದೆ.

ಶರೀರಕ್ಕೆ ಶ್ರಮ:-

★ ಕ್ರಮಬದವಾಗಿ ವ್ಯಾಯಾಮಗಳನ್ನು ಮಾಡುವುದು.ಶರೀರಕ್ಕೆ ಶ್ರಮ ಕೊಡುವುದರಿಂದ ಸ್ತೂಲ ದೇಹ ಉಂಟಾಗುವುದಿಲ್ಲ.

 ★ವ್ಯಾಯಾಮಗಳನ್ನು ಮಾಡದವರು ಡಯಾಬಿಟೀಸ್ ಗೆ ಈಡಾಗುವ ಸಂಭವವಿದೆ.

ಕೆಲವು ಬಗೆಯ ಔಷಧಗಳು :-

★ ಕೆಲವು ಬಗೆಯ ಔಷಧಗಳು  ಶರೀರದಲ್ಲಿನ ಬ್ಲಡ್ ಷುಗರ್ ನ್ನು ವೃದ್ಧಿಸುತ್ತವೆ. ಬೆಳಸಿ, ಡಯಾಬಿಟೀಸ್ ಬರಲು ದಾರಿ ಮಾಡಿಕೊಡುತ್ತವೆ

 ★ಅಂತಹ ಔಷಧಗಳಲ್ಲಿ ಮುಖ್ಯವಾದವು ಕಾರ್ಟಿಸೋನ್ ಗುಂಪಿಗೆ ಸೇರಿದ ಔಷಧಗಳು ಸ್ವೆರಾಯಿಡ್ಸ್.

  ★ಶರೀರದಲ್ಲಿನ ನೀರನ್ನು ಹೊರ ಹಾಕುವ ಮೂತ್ರ ವರ್ಧಕಗಳು ಕೂಡಾ, ಡಯಾಬಿಟೀಸ್ ಬರಲು ಕೆಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ.

ಅಂಟು ರೋಗಗಳು

 ಪದೇ ಪದೇ ಅಂಟುರೋಗಗಳು ಬರುತ್ತಿದ್ದರೆ ಆ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ. ರೋಗನಿರೋಧಕ ವ್ಯವಸ್ಥೆ ಬಲಹೀನಗೊಳ್ಳುವುದರಿಂದ ಅಂಟುರೋಗಗಳು  ಬರುತ್ತವೆ ನ್ನುವುದು ಕೂಡಾ ಮತ್ತೊಂದು ವಿಷಯ ಇಂತಹವರಿಗೆ.ಡಯಾಬಿಟೀಸ್ ಬಹಳ ಸುಲಭವಾಗಿ ಬರುತ್ತದೆ.

ಕಾಂಪ್ಲಿಕೇಷನ್ :-   

★ ಡಯಾಬಿಟಿಸ್ ಇರುವ ವ್ಯಕ್ತಿ ಅನೇಕ ರೋಗಗಳನ್ನು ಆಹ್ವಾನಿಸುತ್ತಿರುತ್ತಾನೆ. ಡಯಾಬಿಟಿಸ್ ಕಾರಣದಿಂದಾಗಿ ಶರೀರದಲ್ಲಿನ ಎಲ್ಲ ಅವಯ ವಗಳಿಗೂ ಅಪಾಯವಿದ್ದರೂ ಮುಖ್ಯವಾಗಿ ಕಣ್ಣುಗಳು, ಮೂತ್ರಪಿಂಡಗಳು ಕಿಡ್ನಿಗಳು ರಕ್ತನಾಳಗಳು, ನರಗಳು ಹೃದಯ ಮೊದಲಾದ ಭಾಗಗಳಿಗೆ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ.

 ★ಒಂದು ಬಾರಿ ಅವಯವಗಳಲ್ಲಿ ಯಾವುದಾದರೂ ಹಾನಿಗೊಳಗಾಗಿವೆಯೆಂದು. ತೀರ್ಮಾನವಾದರೆ,ಅವುಗಳನ್ನು ಸರಿಪಡಿಸುವುದು ಬಹಳ ಕಷ್ಟಸಾದ್ಯವಾಗುತ್ತದೆ.ಅಷ್ಟೇ ಅಲ್ಲದೆ ರೋಗಿ ವಿಪರೀತ ನೋವಿಗೀಡಾಗುತ್ತಾನೆ ವೆಚ್ಚವೂ ಸಹ ಬಹಳವಾಗಿರುತ್ತದೆ.

 ★ಈ ಕಾರಣದಿಂದ ಸಮಯ ಮೀರಿ ಹೋಗುವವರೆಗೂ ನಿರ್ಲಕ್ಷ್ಯ ಮಾಡದೆ.ಡಯಾಬಿಟಿಸ್ ನ್ನು ಆಗಿಂದಾಗ ಔಷಧಗಳ ಮೂಲಕ ವೂ,ಆಹಾರದ ಜಾಗರೂಕತೆಯ ಮೂಲಕವೂ, ವ್ಯಾಯಾಮಗಳ ಮೂಲಕವೂ ನಿಯಂತ್ರಿಸಿ ಕೊಳ್ಳುತ್ತಾ ಆಯಾ ರೋಗಗಳು,ಅವುಗಳ ಲಕ್ಷಣಗಳು ಹತ್ತಿರ ಬರದಂತೆ ನೋಡಿಕೊಳ್ಳುವುದು ಉತ್ತಮ.

 ★ಡಯಾಬಿಟಿಸ್ ನಿಂದ ಉಂಟಾಗುವ ಜಟಿಲತೆಗಳು ಎರಡು ಬಗೆಯಾಗಿರುತ್ತದೆ. ಅವು ಅವು :

1. ಆಗಿಂದಾಗಲೇ ಬರುವ ಆಕ್ಯೂಟ್ ಕಾಂಪ್ಲಿಕೇಷನ್ :-   ಇವು  ಸೋಂಕುಗಳಿಗೀಡಾಗುವುದು ಡಯಾಬಿಟಿಸ್ ಕೋಮಾ ಎಂದು ಕರೆಯಲ್ಪಡುವ ಇದರೊಳಗೆ ಬರುತ್ತವೆ. ಈ ಎರಡನೆಯದನ್ನು ಕುರಿತು ನಂತರದ ಅಧ್ಯಾಯದಲ್ಲಿ ನೋಡೋಣ.

2. ದೀರ್ಘಕಾಲವಿದ್ದು ಬೇರೂರಿ ಹೋಗುವ ಕ್ರಾನಿಂಗ್ ಕಾಂಪ್ಲಿಕೇಶನ್ ಗಳು :

 ಕಣ್ಣುಗಳು ಪಾದಗಳು, ಮೂತ್ರಪಿಂಡಗಳು, ಹೃದಯ ಮುಂತಾದವುಗಳಿಗೆ ಹಾನಿಯಾಗುವುದು ಇದರಲ್ಲಿ ಬರುತ್ತವೆ ಈಗ ಇವುಗಳಲ್ಲಿ ಒಂದೊಂದರ  ಕುರಿತು ನೋಡೋಣ.