ಮನೆ ಜ್ಯೋತಿಷ್ಯ ಮಧುಮೇಹ

ಮಧುಮೇಹ

0

    ಜಗತ್ತಿನಲ್ಲಿ ಮಧುಮೇಹ ರೋಗಗಳಲ್ಲಿ ಭಾರತೀಯರ ಪಾಲು ಶೇಕಡ 20ಕ್ಕಿಂತಲೂ ಹೆಚ್ಚು ನಮ್ಮಲ್ಲಿ ಮೂರು ಕೋಟಿ ಜನ ಮಧುಮೇಹದಿಂದ ಪೀಡಿತರಾಗಿದ್ದಾರೆ.

Join Our Whatsapp Group

ಭಾರತೀಯರಲ್ಲಿ ಶೇಕಡಾ 12ರಷ್ಟು ಮಂದಿ ಈ ವ್ಯಾದಿಯಿಂದ ನರಳುತ್ತಿದ್ದಾರೆ. ಅವರಲ್ಲಿ ಶೇಕಡಾ 30ರಷ್ಟು ನಗರದಲ್ಲೇ ಇದ್ದಾರೆ ಇಲ್ಲಿನ ಜನಸಂಖ್ಯೆಯಲ್ಲಿ ಶೇಕಡ 14ರಷ್ಟು ಜನ ಮಧುಮೇಹದ ಪೂರ್ವ ಅಂತರದಲ್ಲಿದ್ದಾರೆ, ಇನ್ನುಳಿದ ದೇಶಗಳಿಗೆ ಹೋಲಿಸಿದರೆ ಮಧುಮೇಹ ಪೀಡಿತ ಭಾರತೀಯರು ವಯಸ್ಸಿನಲ್ಲಿ ಚಿಕ್ಕವರಾಗಿರುತ್ತಾರೆ. ಕುರುಡತ್ವ ಹೃದ್ರೋಗ, ಪಾರ್ಶ್ವವಾಯು   ಲೈಂಗಿಕ ಅಸಮರ್ಥ್ಯ ಭಾರತೀಯರಲ್ಲೇ ಹೆಚ್ಚು ಅದರಲ್ಲೂ ವ್ಯಾದಿಯ ವಿಷಯಗಳ ಶೇಕಡ 80 ರಷ್ಟು ಮಂದಿಗೆ ತಿಳಿದಿಲ್ಲ.

      ನಮ್ಮ ದೇಶದ ಒಂದು ಕಾರ್ಖಾನೆಯಂತೆ ದಿನದ 24 ಗಂಟೆಗಳ ಕಾಲ ಬಿಡುವಿಲ್ಲದೆ ದುಡಿಯುತ್ತಿರುತ್ತದೆ.ಪ್ರತಿದಿನ ನಾವು ತಿನ್ನುವ ಆಹಾರವು ಪಚನವಾಗಿ ಆದರಿಂದ ಉತ್ಪತ್ತಿಯಾಗುವ ಪೌಷ್ಟಿಕ ಆಹಾರವು ಇಂಧನ ರೂಪದಲ್ಲಿ ರಕ್ತದಲ್ಲಿ ಸೇರಿ ಕೆಲಸ ಮಾಡಲು ನಮಗೆ ಶಕ್ತಿ ನೀಡುತ್ತದೆ.ನಮ್ಮ ದೇಹದಲ್ಲಿ ಅನೇಕ ವಿಧವಾದ ಗ್ರಂಥಿಗಳು ಅನೇಕ ರೀತಿಯ ರಸವನ್ನು ಉತ್ಪತ್ತಿ ಮಾಡುತ್ತದೆ. ನಮ್ಮ ದೇಹದ ಮೆದೋಜೀರಕ ಗ್ರಂಥಿಯು ಇನ್ಸುಲಿನ್ ಎಂಬ ರಸವನ್ನು ಉತ್ಪತ್ತಿ ಮಾಡುತ್ತದೆ.ಈ ಇನ್ಸುಲಿನ್ ರಾಸಾಯನಿಕ ದ್ರವವು ನಮ್ಮ ದೇಹದ ರಕ್ತದಲ್ಲಿರುವ ಫಲಶರ್ಕರ ಎಂಬ ಪೌಷ್ಠಿಕ ಇಂಧನವನ್ನು ದೇಹದ ಜೀವಕೋಶಗಳಿಗೆ ತಲುಪಿಸಿ ಆ ಜೀವಕೋಶಗಳಲ್ಲಿ ಶಕ್ತಿಯನ್ನು ಬಿಡುಗಡೆಗೊಳಿಸಲು ಸಹಾಯ ಮಾಡುತ್ತದೆ.ಈ ಇನ್ಸುಲಿನ್ ದೇಹದಲ್ಲಿ ತೃಪ್ತಿಕರವಾಗಿಲ್ಲದಿದ್ದರೆ, ನಮ್ಮ ರಕ್ತದಲ್ಲಿರುವ ಗ್ಲುಕೋಸ್ ಹೆಚ್ಚು ಶೇಖರವಾಗುತ್ತದೆ.ಈ ರೀತಿ ರಕ್ತದಲ್ಲಿ ಗ್ಲುಕೋಸ್  ಶೇಖರವಾದರೆ  ಮಧುಮೇಹದ ಚಿನ್ಹೆ ಕಾಣಿಸಿಕೊಳ್ಳುತ್ತದೆ.

     ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಹಾಗೂ ಕೊಬ್ಬು ಎಂಬ ಮೂರು ಮುಖ್ಯವಾದ ಘಟಕಗಳಿರುತ್ತವೆ.ಅದು ಸುಮಾರು ಆರು ಗಂಟೆಗಳಿಗೂ ಅಧಿಕ  ಕಾಲ ಜಠರದಲ್ಲಿ ಆಹಾರ ವಚನವಾಗಿ ಅದು ಸಣ್ಣ ಕರುಳಿಗೆ ಸೇರಿ ಅಲ್ಲಿ ಷರ್ಷ್ಕರಪಿಷ್ಠಾದಿಗಳು ಕರಗುತ್ತಾ,ಅದು ಸಕ್ಕರೆ ರೂಪದಲ್ಲಿ ಯಾಗಿ ಪರಿವರ್ತನೆ ಆಗುತ್ತದೆ. ಈ ಫಲಶರ್ಕರವನ್ನು ನಮ್ಮ ಸಣ್ಣ ಕರುಳಿನಲ್ಲಿರುವ ಮಾಸ್ಕಸ್ ವೆಂಬ ತೆಳುವಾದ ಪೊರೆಯುಕ್ತವಾದ ಗ್ರಂಥಿಗಳು ಸೆಳೆದುಕೊಂಡು, ಅದನ್ನು ನಮ್ಮ ದೇಹದಲ್ಲಿ ಹರಿದು ಬರುತ್ತಿರುವ ರಕ್ತ ವಾಹಿನಿಗೆ ಸೇರಿರುತ್ತದೆ.ಇದು ನಮ್ಮ ರಕ್ತದಲ್ಲಿನ ಫಲಶರ್ಕರ ಪ್ರಮಾಣವನ್ನು ಹೆಚ್ಚಿಸುತ್ತದೆ.