ಮನೆ ಆರೋಗ್ಯ ಮಧುಮೇಹ: ಮೂತ್ರ ಹೆಚ್ಚು ಹೋಗುವುದು

ಮಧುಮೇಹ: ಮೂತ್ರ ಹೆಚ್ಚು ಹೋಗುವುದು

0

        ಏಕೆಂದರೆ ರಕ್ತದಲ್ಲಿ ಗ್ಲೂಕೋಸ್ ಲಾವಣಾಂಶವಾಗಿ ಅದು ರಕ್ತದಲ್ಲಿ ಹೆಚ್ಚದಂತೆ ಅದನ್ನು ದೇಹದಿಂದ ಹೊರಹಾಕಲು ಮೂತ್ರಪಿಂಡಕ್ಕೆ ಹೆಚ್ಚಿನ ನೀರಿನ ಅವಶ್ಯಕವಿದೆ. ಒಂದು ಗ್ರಾಂ ಗ್ಲುಕೋಸ್ ಹೊರ ಹಾಕಲು 500 ಮಿ. ಲೀಟರ್  ನೀರಿನ ಅಲಶ್ಯವಿದೆ.ಆದ್ದರಿಂದ ಮೂತ್ರಪಿಂಡ ದೇಹದಲ್ಲಿರುವ ನೀರನ್ನು ಸೆಳೆದುಕೊಂಡು ಅದು ಸಾಲದೆ ಇದ್ದರೆ ಇತರ ಅಂಗಗಳಿಂದ ನೀರು ಸೆಳೆದುಕೊಳ್ಳುತ್ತದೆ. ಇದರಿಂದ ನಿಮಗೆ ನೀರಿನ ದಾಹ ಹೆಚ್ಚುತ್ತದೆ ನಾವು ನೀರು ಹೆಚ್ಚು ಹೆಚ್ಚು ಸೇವಿಸಿದರೆ ಉತ್ತಮ. ಇಲ್ಲದಿದ್ದರೆ ದೇಹದ ಸ್ನಾಯು ಜೀವಕೋಶಗಳಲ್ಲಿರುವ ನೀರನ್ನೂ ಸಹ ತಿಳಿದುಕೊಳ್ಳುತ್ತದೆ. ಇದರಿಂದ ಈ ಮನುಷ್ಯನ ತೂಕ ಕಳೆದುಕೊಳ್ಳುತ್ತಾನೆ.

Join Our Whatsapp Group

      ಅದೇ ರೀತಿ ದೇಹದ ರಕ್ತದಲ್ಲಿ ಇನ್ನೂ ಗ್ಲೂಕೋಸ್ ಪ್ರಮಾಣ ಹೆಚ್ಚಿದರೆ ಇರುವ ನೀರಿನಲ್ಲಿಯೇ ಮೂತ್ರಪಿಂಡ ಗ್ಲುಕೋಸ್ ಅನ್ನು ಹೊರಹಾಕಲು ಪ್ರಯತ್ನಿಸುತ್ತದೆ.ಆದರೆ ಈ ಇರುವ ನೀರಿನಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿ ಅದು ಪಿಂಡಕ್ಕೆ ಹೋದಾಗ, ಮೂತ್ರಪಿಂಡದ ನ್ಯೂಪ್ರೋನ್ ಗಳು  ಅದನ್ನು ಸೋಸಯಲಾರದೆ ಸೂಕ್ಷ್ಮ ನ್ಯೂಪ್ರೋನ್ ನಲ್ಲಿ ಗ್ಲೂಕೋಸ್ ಸೇರಿ ಅದು  ಹಾಳಾಗುತ್ತದೆ ಮೂತ್ರಪಿಂಡದಲ್ಲಿ 10 ಲಕ್ಷ ನ್ಯೂಪ್ರೊನ್ ಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ಹಾಳಾಗುತ್ತಾ ಕೊನೆಗೆ ಮೂತ್ರಪಿಂಡ ಪೂರ್ಣವಾಗಿ ಕಾರ್ಯ  ನಿಲ್ಲಿಸುತ್ತದೆ.ಆದ್ದರಿಂದ ಹೆಚ್ಚು ನೀರು ಸೇವಿಸಿದರೆ ಉತ್ತಮ. ಆದರೆ ನಮಗೆ ತಿಳಿಯದೆ ಗ್ಲೂಕೋಸ್ ಮಟ್ಟ ಹೆಚ್ಚುತ್ತದೆ ಮೂತ್ರಪಿಂಡದ ಸೋಸಯಲಾರದೆ ಮೂತ್ರವು ಹೊರಗೆ ಬರಲಾರದು. ಮೂತ್ರಪಿಂಡ ಪೂರ್ಣ ಕಾರ್ಯ ನಿಲ್ಲಿಸಿದರೆ,ಮೂತ್ರ ಹೊರಬರಲಾರದು. ಆಗ ನಾವು ಹೆಚ್ಚು ನೀರು ಸೇವಿಸಿದರೂ ಅದು ಬರದೇ ದೇಹದಲ್ಲಿಯೇ ಸಂಚಯವಾಗಿ ಕೈ ಕಾಲು ಊದಿ ಕೊಳ್ಳುತ್ತದೆ.

    ಅದರಿಂದ ಮಧುಮೇಹ ಇರುವವರು ಹೆಚ್ಚು ನೀರನ್ನು ಕುಡಿಯಬೇಕು, ಮೂತ್ರಪಿಂಡ  ಕೆಟ್ಟಿರುವವರು ಹೆಚ್ಚು ನೀರನ್ನು ಕುಡಿಯಬಾರದು.

 ಇನ್ಸುಲಿನ್ ಕಾರ್ಯ :

    ಈ ಇನ್ಸುಲಿನ್ ನಾವು ಸೇವಿಸುವ ಆಹಾರವನ್ನು ದೇಹಕ್ಕೆ ನೀಡಿ ಅಂಗವಾಗಿ ಮಾರ್ಪಡಿಸುವಾಗ ನಮ್ಮ ಆಹಾರದಲ್ಲಿಯ  ಕೊಬ್ಬಿನಾಂಶ ಮತ್ತು ಪೌಷ್ಟಿಕಾಂಶವನ್ನು ಹತೋಟಿಯಲ್ಲಿಟ್ಟಿರುತ್ತದೆ. ಆಹಾರದಲ್ಲಿ ಹೆಚ್ಚಾದ ಕೊಬ್ಬಿನಾಂಶವು ಜೀರ್ಣವಾಗಿ ಕೊಬ್ಬಿನ ಆಮ್ಲವಾಗಿ ಪರಿವರ್ತನೆ ಯಾಗುತ್ತದೆ.ಆದರೆ ಈ ಇನ್ಸುಲಿನ್ ಮತ್ತೆ ಅದನ್ನು ಕೊಬ್ಬಿನಾಂಶವಾಗಿ ಪರಿವರ್ತಿಸುತ್ತದೆ.ಈ ಕೊಬ್ಬಿನಾಂಶವು ಮತ್ತೆ ಅಂಗಾಂಗಗಳ ಜೀವಕೋಶಗಳಲ್ಲಿ ಶೇಖರಣವಾಗುತ್ತದೆ.ದೇಹದಲ್ಲಿ ಪೌಷ್ಟಿಕಾಂಶವನ್ನು ಶೇಖರಿಸಲು ಮತ್ತು ಅದನ್ನು ಅಂಗಾಂಗಗಳಿಗೆ ತಲುಪಿಸಲು ಈ ಇನ್ಸುಲಿನ್ ಬಹಳ ಅವಶ್ಯಕವಾಗಿರುತ್ತದೆ.ಏಕೆಂದರೆ, ಈ ಇನ್ಸುಲಿನ್ ನಮ್ಮ ರಕ್ತದಲ್ಲಿ ಶೇಖರವಾಗಿರುವ ಪ್ರೋಟೀನ್ ಮತ್ತು ಕೊಬ್ಬನ್ನು ನಮ್ಮ ದೇಹದ ಅವಶ್ಯಕತೆಗೆ ತಕ್ಕಂತೆ ಶಕ್ತಿಯಾಗಿ ಪರಿವರ್ತಿಸುತ್ತದೆ.ಒಂದು ವೇಳೆ ರಕ್ತದಲ್ಲಿ ಕೊರತೆಯಾದರೆ ದೇಹದ ಅಂಗಾಂಗಗಳಿಗೆ ಈ ಪೌಷ್ಟಿಕಾಂಶವನ್ನು ತಲುಪಿಸಲು ಮತ್ತು ಶಕ್ತಿಯಾಗಿ ಪರಿವರ್ತಿಸಲು ಈ ರಕ್ತದಿಂದ ಆಗುವುದಿಲ್ಲ 

       ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಸಕ್ಕರೆ ಮತ್ತು ಶೇಖರವಾಗಿರುವ ಗ್ಲೂಕೋಜಿನ್ ಸಹ ದೇಹದಲ್ಲಿ ಶಕ್ತಿಯಾಗಿ ಪರಿವರ್ತಿಸುವ ಕಾರ್ಯ ಮಾಡುತ್ತದೆ.ಆದ್ದರಿಂದ ಈ ಇನ್ಸುಲಿನ್ ಕೊರತೆಯಿಂದ ದೇಹದಲ್ಲಿ ಕೊಬ್ಬಿನಾಂಶವು ಏರುವ ಸಂದರ್ಭಗಳು ಇರುತ್ತದೆ.ಇದರಿಂದ ಹೃದಯಕ್ಕೆ ಅಪಾಯಗಳು ಬರುತ್ತದೆ.