ಈ ಗ್ರಂಥಿಯು ಅನೇಕ ರಸಗಳನ್ನು ಉತ್ಪತ್ತಿ ಮಾಡುತ್ತದೆ.ಅದರಲ್ಲಿ ಮುಖ್ಯವಾಗಿ ರಸ ಮತ್ತು ‘ಇನ್ಸುಲಿನ್’ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಈ ಗ್ರಂಥಿಯು ಮೃದುವಾಗಿ ತೆಳುವಾದ ಉದ್ದವಾದ ಅಂಗವಾಗಿದೆ ಇದು ಎಲೆಯಾಕಾರದಲ್ಲಿ ಹೊಟ್ಟೆಯ ಗೋಡೆಯಲ್ಲಿ ಜಠರದ ಹಿಂಭಾಗದಲ್ಲಿ ಬೆನ್ನು ಹುರಿಯ ಒಂದು ಮತ್ತು ಎರಡನೇ ಭಾಗದ ಗಂಟಿನ ಹತ್ತಿರವಿರುತ್ತದೆ.
ಇದು ಜೆ ಆಕಾರವಾಗಿ ದಪ್ಪ ಭಾಗವು ತಲೆಯಾಗಿ ಅನಂತರ ಕತ್ತು. ದೇಹ ಮತ್ತು ಬಾಲವೆಂದು ನಾಲ್ಕು ಭಾಗಗಳಾಗಿ ವಿಭಾಗಿಸಿದ್ದಾರೆ ಇದು 15 ರಿಂದ 20 ಸೆಂ.ಮೀಟರ್ ಉದ್ದ 2.5 ರಿಂದ 3.6 ಸೆಂಟಿಮೀಟರ್ ಅಗಲ 1.2 ರಿಂದ 1.8 ಸೆಂ.ಮೀ ದಪ್ಪವಾಗಿ ; ಸುಮಾರು 90 ಗ್ರಾಂ ತೂಕವಿರುತ್ತದೆ.ಪೂರ್ತಿ ಅಂಗವು ಹೊಟ್ಟೆಯ ಹಿಂದಿನಿಂದ ಬಂದು ಅದರ ತಲೆಭಾಗದಲ್ಲಿ ಸ್ವಲ್ಪ ಭಾಗ ರಕ್ತದನಾಳವನ್ನು ಸುತ್ತಿರುತ್ತದೆ.
ಮೆದೋಜಿರಕ ರಸ – ಇದರಲ್ಲಿ ಜೀರ್ಣವಾಗಿಸುವ ಅನೇಕ ರಾಸಾಯನಿಕ ವಸ್ತುಗಳಿವೆ. ಇವು ಆಹಾರವನ್ನು ಜೀರ್ಣ ಮಾಡುತ್ತದೆ.
ಇದು ನಾಳ ಇರುವ ಅಥವಾ ನಾಳ ಇಲ್ಲದ ಗ್ರಂಥಿಯಾಗಿದೆ.ನಾಳ ಇರುವ ಗ್ರಂಥಿಯು ಮೇದೋಜೀರಕ ರಸವನ್ನು ಸಣ್ಣ ಕರುಳಿನ ಆದಿಭಾಗಕ್ಕೆ ಸೇರಿಸಿ, ಜೀರ್ಣ ಶಕ್ತಿಯನ್ನು ವೃದ್ಧಿಸುವುದಕ್ಕೆ ಸಹಾಯ ಮಾಡುತ್ತದೆ. ನಾಳವಿಲ್ಲದ ಗ್ರಂಥಿಯು ಒಂದು ವಿಶೇಷವಾದ ಹಾರ್ಮೋನ್ ಗಳ ಗುಂಪನ್ನು ಧ್ರವಿಸುವ ಜೀವಕೋಶಗಳಾದ ಐಸ್ ಲೆಟ್ಸ್ ಲಾಂಗರಾನ್ಸ್ ಗಳು ಪೂರ್ಣವಾಗಿ ಗ್ರಂಥಿಯಲ್ಲಿ ಆವರಿಸಿಕೊಂಡಿರುತ್ತದೆ. ಈ ಐಸ್ ಲೈಟ್ಸ್ ಗಳು ಮೂರು ವಿಧವಾದ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುತ್ತದೆ. ಅದು ಇನ್ಸುಲಿನ್ ಗ್ಲೂಕಾಗೋನ್ ಮತ್ತು ಸೋಮ ಟೊ ಸ್ಟ್ರೇನ್ ಎಂಬ ಮೂರು ಹಾರ್ಮೋನ್ ಅನ್ನು ಕ್ರಮವಾಗಿ ಮೂರು ವಿಧವಾದ ಬೀಟಾ ಮತ್ತು ಅಲ್ಛಾ ಮತ್ತು ಡೆಲ್ವಾ ಕೋಶಗಳಿಂದ ಉತ್ಪತ್ತಿ ಮಾಡುತ್ತದೆ.
1. ಇನ್ಸುಲಿನ್ — ಈ ಹಾರ್ಮೋನ್ ಬೀಟಾ ಗ್ರಂಥಿಯಿಂದ ಉತ್ಪತ್ತಿಯಾಗುತ್ತದೆ ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸರಿಯಾಗಿ ಸಮತೋಲನಲ್ಲಿ ಇಡುತ್ತದೆ ಎರಡು ರೀತಿಯಲ್ಲಿ ಸಮತೋಲನವನ್ನು ಕಾಪಾಡುತ್ತದೆ.
1. ಸಕ್ಕರೆಯನ್ನು ಗ್ಲುಕೋಸ್ ರೂಪಾಂತರದಲ್ಲಿ ದೇಹದ ಜೀವಕೋಶಗಳಿಗೆ ರಕ್ತದ ಮೂಲಕ ರವಾನಿಸುತ್ತದೆ.
2. ರಕ್ತದಲ್ಲಿ ಹೆಚ್ಚಾದ ಸಕ್ಕರೆಯ ಪ್ರಮಾಣವನ್ನು ಗ್ಲುಕೋಜಿ ರೂಪಾಂತರದಲ್ಲಿ ಯಕೃತ್ ಮತ್ತು ಮಾಂಸಖಂಡಗಳಲ್ಲಿ ಸ್ವೀಕರಿಸಲು ಸಹಾಯ ಮಾಡುತ್ತದೆ.
2. ಗ್ಲೂಕಾಗೋನ್— ಈ ಹಾರ್ಮೋನ್ ಗಳನ್ನು ಅಲ್ಪಾ ಕೋಶಗಳು ಧ್ರವಿಸುತ್ತದೆ.ಇದು ಯಕೃತ್ ನಲ್ಲಿ ನಿಂತಿರುವ ಗ್ಲೂಕೋಜಿನನ್ನು ಪರಿವರ್ತಿಸಲು ಆಗಿ ಪರಿವರ್ತಿಸಲು ಪ್ರೇರೇಪಿಸುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ.
3. ಸೋಮಾಟೊಸ್ಟೈನ್ — ಮೆಮೇದೋಜೀರಕ ಗ್ರಂಥಿಯಲ್ಲಿ 20 ಲಕ್ಷದಷ್ಟು ಲ್ಯಾಂಗರ್ ಹ್ಯಾಂನ್ಸ್, ಎಂಬ ನಿರ್ನಾಳ ಗ್ರಂಥಿಗಳು ಹುದುಗಿ ಕೊಂಡಿದೆ. ಈ ಲ್ಯಾಂಗರ್ ಹ್ಯಾಂನ್ಸ್ ಗ್ರಂಥಿಯಲ್ಲಿ ಬೀಟಾ ಕೋಶಗಳಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ರಾಸಾಯನಿಕ ದ್ರವ್ಯ, ರಕ್ತದಲ್ಲಿ ಸೇರಿ ರಕ್ತದಲ್ಲಿರುವ ಗ್ಲೂಕೋಸ್ ಅನ್ನು ದೇಹದ ಎಲ್ಲ ಅಂಗಾಂಗದಲ್ಲಿರುವ ಜೀವಕೋಶದ ಜೀವ ಕಣಗಳಿಗೆ ತಲುಪಿಸುತ್ತದೆ. ಈ ಜೀವಕೋಶದ ಜೀವಕಣಗಳು ದೇಹದ ಅಂಗಾಂಗಗಳು ಕೆಲಸ ಮಾಡಲು ಈ ಗ್ಲೂಕೋಸ್ ನಲ್ಲಿರುವ ಶಕ್ತಿಯನ್ನು ಇಂಧನ ರೂಪವಾಗಿ ಪಡೆದು, ದೇಹಕ್ಕೆ ಶಕ್ತಿ ನೀಡಿ ಶಾಖವನ್ನುಂಟು ಮಾಡುತ್ತದೆ.
ಈ ರೀತಿಯಾಗಿ ದೇಹದ ಅಂಗಾಂಗಗಳಿಗೆ ರಕ್ತದಲ್ಲಿ ಗ್ಲೂಕೋಸ್ ನ್ನು ತಲುಪಿಸಿ ಅದರ ಕಾರ್ಯನಿರ್ವಹಿಸಲು ಇನ್ಸುಲಿನ್ ಎಂಬ ರಾಸಾಯನಿಕ ವಸ್ತು ಅವಶ್ಯಕವಾಗಿ ಬೇಕು. ಒಂದು ವೇಳೆ ಜೀವಕಣಗಳ ಕಾರ್ಯನಿರ್ವಹಿಸಲು ಬೇಕಾಗುವ ಶಕ್ತಿಗಿಂತ ಹೆಚ್ಚು ಗ್ಲೂಕೋಸ್ ದೇಹದಲ್ಲಿ ಉತ್ಪತ್ತಿಯಾಗುತ್ತಿದರೆ, ಗ್ಲೂಕೋಸ್ ಗ್ಲೂಕೋಜಿನ್ ಆಗಿ ಮಾರ್ಪಟ್ಟು ನಮ್ಮ ಯಕೃತ್ ನಲ್ಲಿ ಶೇಖರವಾಗುತ್ತದೆ.ಹೀಗೆ ಹೆಚ್ಚು ಉತ್ಪತ್ತಿಯಾದ ಗ್ಲುಕೋಸ್,ಯಕೃತ್ನನ ಜೀವಕೋಶಗಳಲ್ಲಿ ಶೇಖರವಾಗಲೂ ಈ ಇನ್ಸುಲಿನ್ ಸಹಾಯ ಮಾಡುತ್ತದೆ
ನಾವು ಸೇವಿಸಿದ ಆಹಾರದಲ್ಲಿ ಗ್ಲೂಕೋಸ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಹಾಗೆ ಉತ್ಪತ್ತಿಯಾದ ಫಲ ಶರ್ಕರವನ್ನು ನಮ್ಮ ದೇಹದ ರಕ್ತದಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಶೇಖರವಾಗದಂತೆ ಈಇನ್ಸುಲಿನ್ ತಡೆಯುತ್ತದೆ ಈ ದ್ರವ ನಮ್ಮ ರಕ್ತದಲ್ಲಿನ ಗ್ಲುಕೋಸ್ ಅನ್ನು ಸಮ ಪ್ರಮಾಣದಲ್ಲಿರುವಂತೆ ಮಾಡಲು ಬಹಳ ಸಹಾಯಕಾರಿಯಾಗಿದೆ. ಈ ಇನ್ಸುಲಿನ್ ರಾಸಾಯನಿಕ ದ್ರವದ ಸಹಾಯವಿಲ್ಲದೆ ನಮ್ಮ ರಕ್ತದಲ್ಲಿರುವ ಗ್ಲೂಕೋಸ್ ನಮ್ಮ ದೇಹದ ವಿವಿಧ ಅಂಗಗಳಲ್ಲಿರುವ ಜೀವಕೋಶದ ಜೀವ ಕಣಗಳ ಒಳಗೆ ಪ್ರವೇಶಿಸಲು ಆಗದು ಮತ್ತು ಜೀವಕೋಶಗಳು ಕಾರ್ಯನಿರ್ವಹಿಸಲು ಈಗ್ಲೂ ಕೋಸ್ ಗ್ಲುಕೋಜಿನ್ ಇಂಧನವಾಗಿ ಜೀವಕೋಶದಲ್ಲಿ ಮಾರ್ಪಡುವುದಿಲ್ಲ.ಈ ಇನ್ಸುಲಿನ್ ಕೊರತೆಯಿಂದ ರಕ್ತದಲ್ಲಿ ಫಲಶರ್ಕದ ಪ್ರಮಾಣ ಹೆಚ್ಚಾಗುತ್ತದೆ. ಈ ರೀತಿ ಗ್ಲುಕೋಸ್ ಪ್ರಮಾಣದ ಹೆಚ್ಚಾದ ರಕ್ತವು ನಮ್ಮ ದೇಹದ ಮೂತ್ರಪಿಂಡಗಳ ಮೂಲಕ ಹರಿದು ಹೋಗುವಾಗ ಹೆಚ್ಚಾದ ಸಕ್ಕರೆ ಪ್ರಮಾಣವನ್ನು ಅದು ಸೆಳೆದುಕೊಂಡು ಅದನ್ನು ಮೂತ್ರದಲ್ಲಿ ವಿಸರ್ಜಿಸುತ್ತದೆ ಅದು ನಮ್ಮ ಮೂತ್ರದಿಂದ ಹೊರ ಬರುತ್ತದೆ. ಆದರೆ ಇನ್ಸುಲಿನ್ ಕೊರತೆಯಿಂದ ಅಥವಾ ಜೀವ ಕೋಶಗಳ ಪ್ರತಿರೋಧಕದಿಂದ ಇನ್ಸುಲಿನ್ ಇಲ್ಲದ ರಕ್ತ ನಮ್ಮ ಜೀವಕೋಶಗಳ ಒಳಗೆ ಪ್ರವೇಶ ಮಾಡದೆ.
ಜೀವಕೋಶಗಳಿಗೆ ಇಂಧನ ಕೊರತೆಯಿಂದ ನಿರ್ಜೀವವಾಗಿ ನಾಶವಾಗಲು ಆರಂಭಿಸುತ್ತದೆ ಇದರಿಂದ ಮನುಷ್ಯನು ಬಲಹೀನವಾಗಿ ತನ್ನ ತೂಕವನ್ನು ಕಳೆದುಕೊಳ್ಳುತ್ತಾನೆ.ಅಲ್ಲದೆ ಮಧುಮೇಹಿಗಳು ಹೆಚ್ಚು ಮೂತ್ರ ಹೋಗುತ್ತಾರೆ. ಈ ರೀತಿ ಹೆಚ್ಚು ಮೂತ್ರ ಹೋಗುವುದರಿಂದ ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ,ನಮಗೆ ಹೆಚ್ಚು ದಾಹವಾಗುತ್ತದೆ.