ಕಣ್ಣುಗಳಿಗೆ ಸಂಬಂಧಿಸಿದ ಜಾಗರೂಕತೆಗಳು
ಮಾಡಬೇಕಾದ ಕೆಲಸಗಳು
★ ಕಣ್ಣುಗಳಿಗೆ ಅಪಾಯವಿರಬಹುದೆಂಬ ಸಂದರ್ಭಗಳಲ್ಲಿ,ಗಾಗಲ್ಸ್ ಅಥವಾ ಸೇಫ್ಟಿ ಗ್ಲಾಸ್ ಗಳನ್ನು ಬಳಸಬೇಕು.
★ ಬಿಲಸಿನಲ್ಲಿ ತಿರುಗಾಡಬೇಕಾದ ಸಂದರ್ಭಗಳಲ್ಲಿ ಸನ್ ಗ್ಲಾಸ್ ಗಳನ್ನು ಬಳಸಬೇಕು.
★ಕಣ್ಣು ಕೆಂಪಗಾದರೆ ಇಲ್ಲವೇ ನೋವುಂಟಾಗುತ್ತಿದ್ದರೆ ಕೂಡಲೇ ಕಣ್ಣಿನ ಡಾಕ್ಟರನ್ನು ಸಂಪರ್ಕಿಸಬೇಕು.
★ನೇತ್ರ ವೈದ್ಯರ ಬಳಿ ಹೋದಾಗ ನಿಮಗೆ ಡಯಾಬಿಟಿಸ್ ಇರುವ ವಿಷಯವನ್ನು ಮೊದಲೇ ಹೇಳಬೇಕು.
ಮಾಡಬಾರದ ಕೆಲಸಗಳು
★ಕೊಳಕಾಗ ಬೆರಳುಗಳಿಂದ ಕಣ್ಣನ್ನು ಮುಟ್ಟಿಕೊಳ್ಳಬಾರದು.
★ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು
★ ಕಣ್ಣಿನ ಮೇಕಪ್ ಗೋಸ್ಕರ ವಾಗಲಿ, ಕಾಂಟಾಕ್ಟ್ ಲೈನ್ಸ್ ನ್ನು ಹಾಕಿಕೊಳ್ಳುವಾಗದಾಗಲಿ ಉಗುಳಿನ ತೇವವನ್ನು Electric.
★ಅಶುಚಿಯಾದ ಕಾಂಟಾಕ್ಟ್ ಗಳನ್ನು ಉಪಯೋಗಿಸಬಾರದು.
ಕಿಡ್ನಿ ಸಮಸ್ಯೆಗಳು
★ಮುತ್ರ ಪಿಂಡಗಳಲ್ಲಿರುವ ರಕ್ತನಾಳವನ್ನು ಮುಚ್ಚಿ ಹೋಗುವುದು, ಇಲ್ಲವೇ ಕಿರಿದಾಗುವ ಕಾರಣಗಳಿಂದ ಮೂತ್ರಪಿಂಡಗಳಿಗೆ ಹಾನಿಯಾಗುವ ಸಂಭವವಿದೆ. ಇದು ಕಿಡ್ನಿ ಫೇಲ್ಯೂರ್ ಗೆ ಸಹ ದಾರಿ ಮಾಡಬಹುದು.
★ಡಯಾಬಿಟಿಸ್ ರೋಗಿಗಳಿಗೆ ಸಾಕಷ್ಟು ಮಂದಿ ಮೂತ್ರಪಿಂಡಗಳ ವೈಫಲ್ಯದಿಂದಲೇ ಮರಣಿ ಸುತ್ತಿದ್ದಾರೆ.
ಹೃದಯದ ಸಮಸ್ಯೆಗಳು
★ ರಕ್ತದ ಸಕ್ಕರೆಯ ಮಟ್ಟವನ್ನು ವರ್ಷಗಟ್ಟಲೆ ನಿಯಂತ್ರಣ ಮಾಡಿಕೊಳ್ಳದೆ ಹೋದರೆ, ಶರೀರದ ರಕ್ತನಾಳಗಳು ಪೆಡಸಾಗುವುದು, ಮುಂದವಾಗುದೂ ಆಗುತ್ತದೆ. ಇದನ್ನು Atherosclerosis ಎನ್ನುತ್ತಾರೆ
★ಇಂತಹ ವ್ಯಕ್ತಿಗಳಿಗೆ ಹೈಪರ್ ಟೆನ್ಷನ್, ಹೃದಯಘಾತ ಪಾರ್ಶ್ವ ವಾಯುವಿನಂತಹ ಕಾಯಿಲೆಗಳು ಬರುತ್ತವೆ. ಈ ವಿಷಯದಲ್ಲಿ ಡಯಾಬಿಟಿಸ್ ರೋಗಿಗಳು ವಸಿಸಬೇಕಾದ ಎಚ್ಚರಿಕೆಗಳು
★ನಿಮ್ಮಕುಟುಂಬದಲ್ಲಿ ಯಾರಿಗಾದರೂ ಡಯಾಬಿಟಿಸ್ ಇದ್ದರೆ ವರ್ಷಕೊಮ್ಮೆ ನೀವು Glucose Tolerance Test ಮಾಡಿಸಿಕೊಳ್ಳಬೇಕು.
★ನೀವು ಡಯಾಬಿಟಿಸ್ ರೋಗಿಯಾದರೆ ಎರಡು ಮೂರು ತಿಂಗಳಿಗೊಮ್ಮೆ ನಿಮ್ಮ ಬ್ಲಡ್ ಷುಗರ್ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಂಡು. ಅಗತ್ಯವಾದರೆ ನಿಮ್ಮ ಡಯಾಬಿಟಿಕ್ ಟ್ರೀಟ್ ಮೆಂಟನ್ನು ಅದಕ್ಕನುಗುಣವಾಗಿ ಬದಲಾಯಿಸಿಕೊಳ್ಳಬೇಕು.
★ಧೂಮಪಾನ, ಮದ್ಯಪಾನಗಳನ್ನು ಬಿಡಬೇಕು.
★ನಿಮ್ಮ ರಕ್ತದಲ್ಲಿನ Lipid Profile (ಕೊಲೆಸ್ಟಾರ್, HDL, LDL Triglycerides)ಪರೀಕ್ಷೆ ಮಾಡಿಸಿಕೊಳ್ಳಬೇಕು
ಪಾದಗಳ ಸಮಸ್ಯೆ
ಮಧುಮೇಹ ರೋಗಿಗಳಿಗೆ ಪಾದಗಳಲ್ಲಿನ ರಕ್ತನಾಳಗಳು ಹೆಚ್ಚು ಹಾನಿಗೀಡಾಗುವ ಸಾಧ್ಯತೆಗಳಿವೆ. ಅದರಿಂದ ಪಾದಗಳಿಗೆ ರಕ್ತಪೂರೈಕೆ ಸರಿಯಾಗಿ ನಡೆಯದು. ಆದರಿಂದ ಪಾದಗಳಲ್ಲಿ ಸ್ಪರ್ಶ ಜ್ಞಾನ ಕಳೆದುಕೊಳ್ಳುತ್ತಾರೆ.
★ಪಾದಗಳ ಮೇಲಿನ ಚರ್ಮ ತೆಳುವಾಗಿದ್ದು ಬಿರಿಯುವ ಸಂಭವವಿದೆ. ಆ ಗಾಯ ಮಾಯಲು ಸಾಧಾರಣಕ್ಕಿಂತ ಹೆಚ್ಚಿನ ಸಮಯ ಹಿಡಿಯುತ್ತದೆ.
★ಗಾಯಗಳನ್ನು ಗಮನಿಸಿದ ಪಕ್ಷದಲ್ಲಿ ಅವು ಕೀವು ವೃಣವಾಗಿ ಕ್ರಮೇಣ ಕಾಲಬೆರಳುಗಳನ್ನು ಕೊಳೆತುಹೋಗುವ(Gangrene) ಪರಿಸ್ಥಿತಿ ಉಂಟಾಗಬಹುದು.
★ಕಾಲು Gangrene ಒಳಗಾದೆ ಪರಿಸ್ಥಿತಿಯಲ್ಲಿ ಪಾದವನ್ನು ಅಥವಾ ಕಾಲನ್ನು ಕತ್ತರಿಸಿ ತೆಗೆಯಬೇಕಾದ ಅಗತ್ಯ ಕೂಡ ಬರುತ್ತದೆ.
★ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಪಾದಗಳು, ಪಾದಗಳ ಬೆರಳುಗಳ ವಿಷಯದಲ್ಲಿ ಯಾವ ಸಮಸ್ಯೆಗಳೂ ಬರದಿರಲು, ಈ ಕೆಳಗಿನ ಜಾಗರೂಕತೆಗಳನ್ನು ತಪ್ಪದೇ ವಹಿಸಬೇಕು.














