ಪಾದಗಳ ಸಮಸ್ಯೆ :-
★ಪಾದರಕ್ಷೆಗಳಿಲ್ಲದೆ ನಡೆಯಬಾರದು. ಇಲ್ಲವಾದರೆ ಪಾದಗಳಿಗೆ ಗಾಯವಾಗುವ ಅಪಾಯವಿದೆ.
★ಪಾದಗಳಲ್ಲಿ ಗುಳ್ಳೆ,ಕೊಯ್ದು ಗಾಯ, ಕೆಂಪಾಗುವಿಕೆ ಕೀವಾಗುವುದು. ಬೊಬ್ಬೆಗಳಂತಹವು ಇವೆಯೇನೋ ಎಂದು ಪ್ರತಿದಿನವೂ ಪರೀಕ್ಷೆ ಮಾಡಿಕೊಳ್ಳಬೇಕು.
★ಡಾಕ್ಟರ್ ಬಳಿಹೋದ ಪ್ರತಿ ಬಾರಿಯೂ ಪಾದಗಳನ್ನು ತೋರಿಸಿಕೊಳ್ಳಬೇಕು.
★ಪಾದಗಳನ್ನು ಸೊಪ್ಪಿನಿಂದ, ಉಗುರು ಬೆಚ್ಚನೆಯ ನೀರಿನಿಂದ ಶುಭ್ರ ಮಾಡಿಕೊಳ್ಳಬೇಕು. ಬಹಳ ಬಿಸಿಯಾದ ನೀರನ್ನು ಬಳಸಬಾರದು. ಪಾದಗಳ ಮೇಲಿನ ಬೆರಳುಗಳ ನಡುವಿನ ತೇವವನ್ನು ಜಾಗ್ರತೆಯಾಗಿ ಒರೆಸಬೇಕು
★ಪಾದಗಳ ಮೇಲೆ ಒಣಗಿ ಹೋಗಿರುವ ಭಾಗಗಳಿಗೆ ಮಾಯಿಶ್ಚರೈಸಿಂಗ್ ಲೋಷನ್ ಲೇಪಿಸಬೇಕು ಬೆರಳುಗಳ ನಡುವೆ ಲೋಷನ್ ಹಾಕಬಾರದು.
★ಕಾಲುಬೆರಳುಗಳ ಉಗುರುಗಳನ್ನು ಆಗಿಂದಾಗ ಸರಿಯಾಗಿ ಕತ್ತರಿಸಿಕೊಳ್ಳಬೇಕು. ಬುಡ ಗಾಯ ವಾಗುವಂತೆ ಒಳಗಿನತನಕ ಕತ್ತರಿಸಕೂಡದು.
,★ಸಾಕ್ಸ್ ಗಳನ್ನು ಪ್ರತಿದಿನವೂ ಬದಲಾಯಿಸಬೇಕಲ್ಲದೆ, ಅವು ಶುಭ್ರುವಾಗಿರುವಂತೆ ನೋಡಿಕೊಳ್ಳಬೇಕು.
★ಪಾದಗಳಿಗೆ ಅನುಕೂಲವಾಗುವಂತಹ,ಸರಿಯಾಗಿ ಹೂಂದುವ ಪಾದರಕ್ಷೆಗಳನ್ನು ಧರಿಸಬೇಕು ಅವುಗಳಿಗೆ ಸರಿಯಾದ ಮತ್ತೆಯಿರಬೇಕು. ಸಿಂಥೆಟಿಕ್ ಪಾದರಕ್ಷೆಗಳಿಗಿಂತ ಚರ್ಮದ ಪಾದರಕ್ಷೆಗಳೇ ಒಳ್ಳೆಯದು. ಹೊಸ ಬೂಟುಗಳನ್ನು ಬಳಸುವಾಗ,ಅವುಗಳನ್ನು ದಿನವೂ ಕೆಲವು ಗಂಟೆಗಳ ಕಾಲ ಹಾಕಿಕೊಂಡು ನಿಧಾನವಾಗಿ ನಡೆದಾಡಿ ರೂಡಿ ಮಾಡಿಕೊಳ್ಳಬೇಕು.
ಲೈಂಗಿಕ ಸಮಸ್ಯೆಗಳು
★ ದೀರ್ಘಕಾಲದವರೆಗೆ ಡಯಾಬಿಟಿಸ್ ತೊಂದರೆ ಇರುವವರಿಗೆ ಪುರುಷಾಂಗದಲ್ಲಿನ ರಕ್ತನಾಳಗಳು ಇಕ್ಕಟಾಗುವುದರಿಂದ, ದುರ್ಬಲವಾಗುವುದರಿಂದ ಅದರೊಳಗೆ ರಕ್ತ ಪ್ರವಾಹಕ್ಕೆ ಅಡ್ಡಿಯಾಗುತ್ತದೆ.ಆದರಿಂದ ಆ ವ್ಯಕ್ತಿಗೆ ಉದ್ರೇಕದ ಸಮಸ್ಯೆಗಳುಂಟಾಗುತ್ತದೆ. ನಿಮಿರುವಿಕೆ ತಡವಾಗುವುದು, ಹೆಚ್ಚು ಹೊತ್ತು ಉದ್ರೇಕವಿಲ್ಲದೇ ಹೋಗುವುದು,ಇಂತಹವು ನಡೆಯುತ್ತವೆ.
★ ಡಯಾಬಿಟೀಸ್ ಕಾರಣದಿಂದ ಸ್ತ್ರೀಯರಲ್ಲಿ ಲೈಂಗಿಕ ಪರಿಣಾಮಗಳು ಕಡಿಮೆಯೇ ಎಂದು ಹೇಳಬೇಕು.ಕೆಲವೊಮ್ಮೆ ಕೆಲವರಲ್ಲಿ ವೈಜೇಲ್ ಲೂಬ್ರಿಕೇಷನ್ ಯೋನಿದ್ರವ ಕಡಿಮೆಯಾಗಬಹುದು.
ಆಂಟಿ ಬಯಾಟಿಕ್ಸ್ ವಿಷಯದಲ್ಲಿ ಜಾಗ್ರತೆ :-
★ಆೄಂಟೀ ಡಯಾಬಿಟಿಕ್ ಮಾತ್ರೆಗಳನ್ನು ಇಲ್ಲವೇ ಇನ್ಸಲಿನ್ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುವ ಡಯಾಬಿಟಿಕ್ ರೋಗಿಗಳು ಯಾವುದೇ ಕಾರಣದಿಂದ ಆೄಂಟಿ ಬಾಯಾಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿ ಬಂದಾಗ ಬಹಳ ಎಚ್ಚರಿಕೆಯಿಂದಿರಬೇಕು.
★ಇವರು Septran, Bactrim, Cipin ತರಹದ ಸ್ವಲ್ಪಾಗ್ರೂಪ್ ಆೄಂಟಿಬಾಯಾಟಿಕ್ ಗಳನ್ನು ಬಳಸಕೂಡದು. ಇವುಗಳ ಬಳಕೆಯಿಂದ ಅವರಲ್ಲಿ ಬ್ಲಡ್ ಷುಗರ್ ಮಟ್ಟ ಬಹಳ ಕಡಿಮೆಯಾಗಿ ಬಿಡುತ್ತದೆ. ಹೈಪೋಗ್ಲೈಸೇಮಿಯಾ
★ಹಾಗೆಯೇ ಆೄಂಟಿ ಡಯಾಬಿಟಿಕ್ ಮಾತ್ರೆಗಳನ್ನು ತೆಗೆದುಕೊಂಡನಂತರ ಆಲ್ಕೋಹಾಲನ್ನು ಕುಡಿದರೆ ಕೂಡಾ ಇಂತಹ ಪಾಯವೇ ಸಂಭವಿಸುತ್ತದೆ.














