ಮನೆ ಆರೋಗ್ಯ ಡಯಾಬಿಟಿಸ್ : ಭಾಗ ಆರು

ಡಯಾಬಿಟಿಸ್ : ಭಾಗ ಆರು

0

ಡಯಾಬಿಟಿಕ್ ರೋಗಿಗಳು ಯಾವಾಗಲೂ ಚಾಕ್ಲೆಟ್ ಗಳು, ಗ್ಲೋಕೋಸ್ ಬಿಸ್ಕತ್ತುಗಳು,  ಅಥವಾ ಸಕ್ಕರೆಯನ್ನಾದರೂ ತಮ್ಮ ಬಳಿ ಇಟ್ಟುಕೊಳ್ಳುವುದು ಒಳ್ಳೆಯದು ಇದಕ್ಕೆ ಕಾರಣವೇನೆಂದರೆ

Join Our Whatsapp Group

 ಈ ರೋಗಿಗಳಲ್ಲಿ ಒಮ್ಮೊಮ್ಮೆ ಅನಿರೀಕ್ಷಿತವಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಈ ಸ್ಥಿತಿಯನ್ನು ಹೈಪೋಗ್ಲೈನ್ ಸೇಮಿಯಾ ಎನ್ನುತ್ತಾರೆ.

 ಇಂತಹ ಸಂದರ್ಭಗಳಲ್ಲಿ ಇವರು ತಮ್ಮ ಬಳಿ ಇರುವ ಒಂದೆರಡು ಸ್ವೀಟ್ ಗಳನ್ನು ತಿಂದರೆ,ರಕ್ತದ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ.

 ಡಯಾಬಿಟಿಕ್ ರೋಗಿಗಳು ಎಂದಿಗೂ ಹಸಿವೆಯಿಂದ ಇರಬಾರದು.ವೇಳೆಗೆ ಸರಿಯಾಗಿ ಊಟ ಮಾಡದಿರುವುದು, ಶರೀರಕ್ಕೆ ಅಧಿಕ ಶ್ರಮ ಕೊಡುವುದು, ಇವುಗಳಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿಯುತ್ತದೆ.

  ತಲೆನೋವು ಬಂದು, ಸಣ್ಣಗೆ ಬೆವರುವುದು, ಇಲ್ಲವೇ ಕಣ್ಣುಗಳು ಮಂಜಾಗುವಂತಹ ಲಕ್ಷಣಗಳು ಕಾಣಿಸಿಕೊಂಡಾಗ ಕೂಡಲೇ ಯಾವುದೋ ಒಂದು ಸಿಹಿ ಪದಾರ್ಥವನ್ನು ತಿನ್ನುವುದು ಅಥವಾ ಸಿಹಿ ಪಾನೀಯವನ್ನು ಕುಡಿಯುವುದು ಮಾಡಬೇಕು. ಎರಡು ಮೂರು ಚಮಚ ಸಕ್ಕರೆಯನ್ನು ತಿಂದರೂ ಆದೀತು.

  ಈ ಲಕ್ಷಣಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಕುಸಿತದಿಂದಾಗಿಯೇ ಆಗಿದ್ದರೆ ಐದು ನಿಮಿಷಗಳಲ್ಲಿಯೇ ಗುಣ ಕಂಡು ಬರುತ್ತದೆ.

 ಹಾಗೆಯೇ ಸ್ರೀರೋಗಿಗಳ ಜನನೆಂದ್ರಿಯ ಸೂಕ್ಷ್ಮ ಜೀವಾಣುಗಳ ದಾಳಿಗೆ ಹೆಚ್ಚಾಗಿ ಗುರಿಯಾಗುತ್ತದೆ

ವ್ಯಾಯಾಮ ಯೋಗಾಸನಗಳು

 ಡಯಾಬಿಟೀಸ್ ನ್ನು ಹಿಡಿತದಲ್ಲಿಟ್ಟುಕೊಳ್ಳಲು, ರೋಗಿ ಆಹಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ, ದಿನವೂ ತಪ್ಪದೇ ವ್ಯಾಯಾಮ ಮಾಡುವುದು ಬಹಳ ಅಗತ್ಯ.

 ರಕ್ತದಲ್ಲಿನ ಸಕ್ಕರೆಯನ್ನು ಸ್ನಾಯುಗಳು ಹೆಚ್ಚು ಬಳಸಿಕೊಳ್ಳುವುದರಿಂದ, ರಕ್ತದಲ್ಲಿ ಸಕ್ಕರೆ ತಗ್ಗಲು ವ್ಯಾಯಾಮ ಸಹಕಾರಿ. ಹೃದಯರೋಗಗಳು,ರಕ್ತನಾಳ ರೋಗಗಳು ಬರದಂತಿರಲು ವ್ಯಾಯಾಮ ಸಹಕರಿಸುತ್ತದೆ.

 ವಾಕಿಂಗ್, ಜಾಗಿಂಗ್, ರನ್ನಿಂಗ್,ಸ್ವಿಮ್ಮಿಂಗ್ ಸ್ಲಿಪ್ಪಿಂಗ್ ತರಹದ ವ್ಯಾಯಾಮಗಳು ಮಧುಮೇಹ ರೋಗಿಗಳಿಗೆ ಬಹಳ ಉಪಯುಕ್ತ.

 ಯೋಗಾಸನಗಳಿಂದಲೂ ಬಹಳ ಉಪಯೋಗವಿದೆ. ಹೊಟ್ಟೆಯ ಮೇಲೆ ಒತ್ತಡತರುವ ಮಯೂರಾಸನದಿಂದ ಹೆಚ್ಚು ಸಹಾಯವಾಗುತ್ತದೆ.ಹೊಟ್ಟೆಯ ಮೇಲೆ ಒತ್ತಡವುಂಟಾಗುವುದರಿಂದ ಇನ್ಸುಲಿನ್ ಹಾರ್ಮೋನನ್ನು  ಉತ್ಪತ್ತಿ ಮಾಡುವ ಪ್ಯಾಂಕ್ರಿಯಾಸ್ ಗ್ರಂಥಿ  ಉತ್ತೇಜನಗೊಳ್ಳುತ್ತದೆ.

 ಪ್ರಾಣಾಯಾಮದಂತಹ ಶ್ವಾಸಸಂಬಂಧೀ  ವ್ಯಾಯಾಮಗಳು ಆರೋಗ್ಯವಂತರಿಗಲ್ಲದೆ, ಮಧುಮೇಹ ರೋಗಿಗಳಿಗೆ ಕೂಡಾ ಬಹಳ ಉತ್ತಮ.