ಮನೆ ಆರೋಗ್ಯ ಮಧುಮೇಹ : ಭಾಗ ಒಂದು

ಮಧುಮೇಹ : ಭಾಗ ಒಂದು

0

  ನಮ್ಮ ದೇಶದಲ್ಲಿ ಮಧುಮೇಹ ರೋಗ ಮೂರು ಕೋಟಿಗೂ ಹೆಚ್ಚು ಜನರನ್ನು ಕಾಡುತ್ತಿದೆಯಂದರೆ ಅತಿಶಯೋಕ್ತಿಯಲ್ಲ. ಈ ರೋಗಕ್ಕೂ ವಯಸ್ಸಿಗೂ ಸಂಬಂಧವಿಲ್ಲ ಎರಡು ವಾರಗಳ ಕೂಸಿನಿಂದ ಹಿಡಿದು 60 ವರ್ಷಗಳ ಮುದುಕರವರೆಗೆ ಯಾರಿಗಾದರೂ ಯಾವ ವಯಸ್ಸಿನಲ್ಲಾದರೂ ಬರಬಹುದು.

Join Our Whatsapp Group

  ಈ ಷುಗರ್ ಕಾಯಿಲೆ, ಸಕ್ಕರೆ ಕಾಯಿಲೆ, ಅತಿಮೂತ್ರ ರೋಗ, ಮಧುಮೇಹ ಎಂದು ಕರೆಯಲ್ಪಡುವ ಈ ರೋಗವನ್ನು ವೈದ್ಯಕೀಯ ಭಾಷೆಯಲ್ಲಿ ‘ಡಯಾಬಿಟಿಸ್ ’ಎಂದು ಕರೆಯುತ್ತಾರೆ ನಮ್ಮ ಶರೀರದಲ್ಲಿ ಇನ್ಸುಲಿನ್ ಎಂಬ ಹಾರ್ಮೋನಿಕ ಉತ್ಪಾದನೆ ಕುಂಠಿತವಾದ ಡಯಾಬಿಟಿಸ್ ಬರುತ್ತದೆ.

     ನಾವು ಸೇವಿಸುವ ಆಹಾರದಿಂದ ಲಭಿಸುವ ಗ್ಲೂಕೋಸ್, ಶರೀರದ ಜೀವಕೋಶ ಜಾಲಗಳಿಗೆ ಶಕ್ತಿಯಾಗಿ ಉಪಯೋಗವಾಗುವುದಕ್ಕಾಗಲಿ, ಹಾಗೆಯೇ ಗ್ಲೂಕೋಸ್ ಭವಿಷ್ಯದ ಅಗತ್ಯಗಳಿಗಾಗಿ ಸಂಗ್ರಹಿಸಿಲಿಟ್ಟುಕೊಳ್ಳುವುದಕ್ಕಾಗಲಿ, ನಮ್ಮ ರಕ್ತದ ಇನ್ಸುಲಿನ್ ಇರುವುದು ಬಹಳ ಅಗತ್ಯ.

   ಇನ್ಸುಲಿನ್ ಎನ್ನುವುದು, ನಮ್ಮ ಶರೀರದಲ್ಲಿನ ಮೇದೋಜ್ಜೀರಕ ಗ್ರಂಥಿ ತಯಾರು ಮಾಡುವ ಒಂದು ಹಾರ್ಮೋನು. ದೊಡ್ಡವರಲ್ಲಿ ಮೂರು ಅಥವಾ ನಾಲ್ಕು ಔನ್ಸುಗಳ ತೂಕವಿರುವ ಈ ಪ್ಯಾಂಕ್ರಿಯಾಸ್ ಗ್ರಂಥಿ, ಜಠರದ ಕೆಳಗೆ ಹಿಂಭಾಗಕ್ಕಿರುತ್ತದೆ.

     ಮೇದೋಜ್ಜೀರಕ ಗ್ರಂಥಿಯ ಶೇಕಡ ಐದು ಭಾಗದಲ್ಲಿ, ಸುಮಾರು ಒಂದು ಮಿಲಿಯಕ್ಕೂ ಹೆಚ್ಚು ಸೂಕ್ಷ್ಮವಾದ ಕಣಜಾಲ ದ್ವೀಪಗಳಿರುತ್ತವೆ. ಇವುಗಳನ್ನು ಐಲೈಟ್ಸ್ ಆಫ್ ಲ್ಯಾಂಗರ್ ಹೋನ್ಸ್ ಎನ್ನುತ್ತಾರೆ.

ಒಂದೊಂದು ಕಣದ್ವಿಪದಲ್ಲೂ ಆಲ್ಫಾ,ಬೀಟಾ,ಡೆಲ್ಟ ಎಂಬ ಬಗೆ ಬಗೆಯ ಕೋಶಗಳ ಸಮುದಾಯವಿರುತ್ತದೆ.

ಉತ್ಪಾದನೆ ಮಾಡುವ ಹಾರ್ಮೋನುಗಳು ಈ ಕೆಳಗಿನ ರೀತಿಯಾಗಿರುತ್ತವೆ :

*ಆಲ್ಫಾ ಕಣಗಳು: ಇವು ಗ್ಲೂಕಗಾನ್ ಎಂಬ ಹಾರ್ಮೋನನ್ನು ಉತ್ಪತ್ತಿ ಮಾಡುತ್ತವೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ.

*ಬೀಟಾ ಕಣಗಳು: ಇವು ಇನ್ಸುಲಿನ್ ಉತ್ಪಾದನೆ ಮಾಡುತ್ತವೆ.

 ಡೆಲ್ಟಾ ಕಣಗಳು : ಇವು Somatostatin ಎಂಬ ಹಾರ್ಮೋನನ್ನು ಉತ್ಪತ್ತಿ ಮಾಡುತ್ತವೆ. ಈ ಪದಾರ್ಥ ಇನ್ ಸು ಲಿನ್, ಗ್ಲುಕಗಾನ್ ಗಳ ಬಿಡುಗಡೆಯನ್ನು ನಿರೋಧಿಸುತ್ತದೆ.

ಮೇದೋಜ್ಜೀರಕ ಗ್ರಂಥಿಯ  ಒಳಗೆಲ್ಲಾ ಹರಡಿಕೊಂಡಿದ್ದರೂ,ಬಾಲದ ಭಾಗದಲ್ಲಿ ಮಾತ್ರ ಕಿರಿದಿರುತ್ತವೆ. ಬಾಲದ ಭಾಗಕ್ಕೆ ಧಾರಾಳವಾದ ರಕ್ತ ಪೂರೈಕೆಯಿದ್ದು ಕಿಬ್ಬೊಟ್ಟೆಯಲ್ಲಿರುವ,ತನಗೆ ತಾನೆ ಸ್ವತಂತ್ರವಾಗಿ ಕೆಲಸ ಮಾಡುವ ಎಂಬ ನರವ್ಯವಸ್ಥೆಯ  ನರಗಳ ಮೂಲಕ, ಅಲ್ಲಿ ಹಾರ್ಮೋನುಗಳ ಉತ್ಪಾದನೆ ನಿಯಂತ್ರಿಸಲ್ಪಡುತ್ತದೆ.

ಹಿಂದಿನ ಲೇಖನಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ  2 ವಾರ ಮುಂದೂಡಿದ ಕೋರ್ಟ್
ಮುಂದಿನ ಲೇಖನನಂಜನಗೂಡು ತಾಲೂಕು ಮಟ್ಟದ ಜನಸ್ಪಂದನ:  89 ಅರ್ಜಿ ಸ್ವೀಕಾರ, ವಾರದಲ್ಲಿ ಪರಿಹಾರ