ಮನೆ ಆರೋಗ್ಯ ಮಧುಮೇಹ :  ಭಾಗ ಎರಡು

ಮಧುಮೇಹ :  ಭಾಗ ಎರಡು

0

★ ಪ್ಯಾನ್ ಕ್ರಿಯಾಸ್, ಇನ್ಸುಲಿನ್ ನ್ನು ಸಾಕಷ್ಟು ಉತ್ಪತ್ತಿ ಮಾಡಲಾಗದೆ ಹೋಗುವುದು. ಇಲ್ಲವೇ ಉತ್ಪತ್ತಿಯಾದ ಇನ್ಸುಲಿನ್ ಶರೀರ ಕೋಶಗಳಿಂದ ಸರಿಯಾಗಿ ಉಪಯೋಗಿಸಲ್ಪಡದೆ ಹೋಗುವುದು. ಈ ಎರಡು ಕಾರಣಗಳಲ್ಲಿ ಯಾವುದೋ ಒಂದು ಕಾರಣದಿಂದ ಡಯಾಬಿಟಿಸ್ ಬರುತ್ತದೆ.

Join Our Whatsapp Group

★ ಈ ಎರಡು ಕಾರಣಗಳಲ್ಲಿ ಯಾವುದರಿಂದ ಬಂದರೂ, ಡಯಾಬಿಟಿಸ್ ಕಾರಣದಿಂದ ನಾವು ತಿನ್ನುವ ಆಹಾರವನ್ನು ಶಕ್ತಿಯಾಗಿ (Energy)ಶರೀರ ಪರಿವರ್ತಿಸಲಾರದೆ ಹೋಗುತ್ತದೆ.

(a) ಇನ್ಸುಲಿನ್ ಸಾಲದೇ ಹೋಗುವುದು.

 (b)ಇನ್ಸುಲಿನ್ ಸಕ್ರಮವಾಗಿ ಉಪಯೋಗಿಸಲ್ಪಡದೆ ಹೋಗುವುದು. ಡಯಾಬಿಟಿಸ್‌ನ ಈ ಎರಡು ಪರಿಸ್ಥಿತಿಗಳಲ್ಲೂ ಶರೀರದ ಮೇಲೆ ಎರಡು ರೀತಿಯಲ್ಲಿ ಪ್ರಭಾವತೋರಿಸುತ್ತವೆ.

 ಈ ಎರಡು ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಡಯಾಬಿಟಿಸ್ ನ್ನು ಎರಡು ಬಗೆಯಾಗಿ ವಿಭಜಿಸಿದ್ದಾರೆ.

1. ಟೈಪ್ -1 ಡಯಾಬಿಟಿಸ್. ಇದನ್ನು ಇನ್ಸುಲಿನ್ ಅವಲಂಬಿತ ಡಯಾಬಿಟೀಸ್ (Insulin Dependent Diabetes Mellitus) ಎನ್ನುತ್ತಾರೆ ಬಾಲಿಶ (Juvenile) ಡಯಾಬಿಟಿಸ್ ಎಂದೂ ಕರೆಯುತ್ತಾರೆ.

2. ಟೈಪ್ -ಡಯಾಬಿಟಿಸ್.ಇದನ್ನು ಇನ್ಸುಲಿನ್ ಮೇಲೆ ಅವಲಂಬಿಸಿದ ಡಯಾಬಿಟಿಸ್ (Non Insulin Dependent Mellitus )ಎನ್ನುತ್ತಾರೆ ಮೆಚ್ಚುರಿಟಿ ಅನ್ ಸೆಟ್ ಡಯಾಬಿಟೀಸ್ ಅಂಡ್ ಫುಡ್ ಡಯಾಬಿಟೀಸ್ (Maturity onset Mellitus ) ಅಡಲ್ಟ್ ಹುಡ್ ಡಯಾಬಿಟಿಸ್(Adulihood Diabetes- ವಯಸ್ಕ ಡಯಾಬಿಟಸ್ )ಎಂದು ಕೂಡಾ ಕರೆಯುತ್ತಾರೆ.

ಡಯಾಬಿಟಿಸ್ ಲಕ್ಷಣಗಳು

★ ಅತಿಯಾಗಿ ಮೂತ್ರ ವಿಸರ್ಜನೆ

★ ಅತಿಯಾದ ಬಾಯರಿಕೆ

 ★ಮಿತಿಮೀರಿದ ಹಸಿವು

★ತೂಕ ಕಡಿಮೆಯಾಗುವಿಕೆ

★ದೃಷ್ಟಿ ಮಂದಾಗುವುದು

★ಬೇಗನೆ ಆಯಾಸಗೊಳ್ಳುವುದು

★ಸಿಡಿಮಿಡಿ ಗೊಳ್ಳುವಿಕೆ

★ಹುಣ್ಣುಗಳು ಗಾಯಗಳು ಬೇಗ ವಾಸಿಯಾಗದಿರುವುದು

★ಕಾಲುಗಳು, ಕೈಗಳುಜೋಮು ಹಿಡಿಯುವುದು

★ನಿರುತ್ಸಾಹ ನಿಶ್ಯಕ್ತಿ

★ನವೆಯಾಗುವುದು

★ಚರ್ಮರೋಗಗಳು

★ಮೂತ್ರ ವಿಸರ್ಜನೆ ಮಾಡುವಾಗ ಉರಿ

★ಸ್ತ್ರೀಯರಲ್ಲಿ ಮಿತಿಮೀರಿದ ಬಿಳಿ ಸೆರಗು

ರಕ್ತದಲ್ಲಿ ಷುಗರ್ ಎಷ್ಟಿರಬೇಕು

ಯಾವ ರೋಗವೂ ಇಲ್ಲದ ಸಾಧಾರಣ ವ್ಯಕ್ತಿಗಳಿಗೆ  ಬೆಳಿಗ್ಗೆ ಏನೂ ತಿನ್ನದೇ, ಕುಡಿಯದೆ ಖಾಲಿಹೊಟ್ಟೆಯಲ್ಲಿರುವಾಗ ಬ್ಲಡ್ ಷುಗರ್( ಇದನ್ನು Fasting Blood sugar ಎನ್ನುತ್ತಾರೆ )80mg ಇಂದ 120 mgವರೆಗೆ ಇರಬಹುದು.

    ★ಊಟ ಮಾಡಿದ ಎರಡು ಗಂಟೆಗಳ ನಂತರ ( ಇದನ್ನುPost Paradial ಎನ್ನುತ್ತಾರೆ ) ರಕ್ತದ  ಸಕ್ಕರೆಯ ಪ್ರಮಾಣ ಮೀರಬಾರದು.

    ★ಮೇಲೆ ಹೇಳಿದ ಉಳಿದ ಲಕ್ಷಣಗಳ ಜೊತೆಗೆ ರಕ್ತ ಪರೀಕ್ಷೆಯಲ್ಲಿ ರಕ್ತದ ಸಕ್ಕರೆಯ ಮಟ್ಟ ಮೀರಿದರೆ ಆ ವ್ಯಕ್ತಿಗೆ ಡಯಾಬಿಟಿಸ್ ಇದೆಯೆಂದರ್ಥ.

★ ರಕ್ತದಲ್ಲಿ ಸಕ್ಕರೆ ಇರಬೇಕಾದ ಪ್ರಮಾಣಕ್ಕಿಂತ ಹೆಚ್ಚಾದಾಗ ಅದು ಮೂತ್ರದ ಮೂಲಕ ಹೊರಗೆ ಬರಲು ಪ್ರಾರಂಭಿಸುತ್ತದೆ.