ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾ ಇವೆಂಟ್ ವೇಳೆ ನಟ ಕಿಚ್ಚ ಸುದೀಪ್ ಆಡಿದ ಮಾತುಗಳು ನಾನಾ ಚರ್ಚೆ ಹುಟ್ಟುಹಾಕಿವೆ. ಯಾರ ಹೆಸರನ್ನೂ ನೇರವಾಗಿ ತಗೆದುಕೊಳ್ಳದೇ ಸುದೀಪ್ ಮಾತನಾಡಿದ್ದರೂ, ಆ ಮಾತುಗಳು ದರ್ಶನ್ ಅಭಿಮಾನಿಗಳನ್ನೇ ಉದ್ದೇಶಿಸಿ ಆಡಲಾಗಿದೆ ಅಂತ ಹೇಳಲಾಗುತ್ತಿದೆ.
ಸುದೀಪ್ ಮಾತಿನ ನಂತರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಯಾರ ಹೆಸರನ್ನೂ ಉಲ್ಲೇಖಿಸಲದೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ‘ಕೆಲವರು ದರ್ಶನ್ ಅವ್ರು ಇಲ್ಲದೇ ಇದ್ದಾಗ ಏನೇನೋ ಮಾತಾಡ್ತಾ ಇದ್ದಾರೆ. ಅವರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆ ಎಲ್ಲಾ ಮಾತಾಡ್ತಾರೆ. ವೇದಿಕೆ ಮೇಲೆ ನಿತ್ಕೊಂಡು ಮಾತಾಡೋದು, ವೀಡಿಯಾಗಳಲ್ಲಿ ಕುಳಿತು ಮಾತಾಡೋದು, ಹೊರಗೆ ಕುತ್ಕೊಂಡ್ ಮಾತಾಡೋದು ಎಲ್ಲಾ ಮಾಡ್ತಿದ್ದಾರೆ. ಅದೇ ಜನರು ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲʼ ಅಂತ ಕುಟುಕಿದ್ದರು.

ಇದೀಗ ವಿಜಯಲಕ್ಷ್ಮಿ ಮಾತು ಬೆಂಬಲಿಸಿ ಖುದ್ದು ದರ್ಶನ್ ಫ್ಯಾನ್ಸ್ ಅಖಾಡಕ್ಕೆ ಇಳಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾ ಮಾತಿನ ಯುದ್ಧ ಸಾರಿದ್ದಾರೆ. ಮಾರ್ಕ್ ಸಿನಿಮಾದ ಪ್ರಚಾರಕ್ಕಾಗಿ ನಡೆದ ಗಿಮಿಕ್ ಅದು ಅಂತ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಾಕ್ತಿದ್ದಾರೆ.
ಮುಂದುವರಿದು… ನೀವೇ ಯುದ್ಧಕ್ಕೆ ಕರೆದ್ರೆ ನಾವ್ ಬರದೇ ಇರ್ತೀವಾ ಅಂತ ಹೇಳೋದ್ರ ಜೊತೆಗೆ, ಯುದ್ಧ ಏನು ಒಬ್ಬ ಶಕುನಿ ಕೂಡ ಮಾಡ್ತಾನೆ ಜನರ ಪ್ರೀತಿ ಗಳಿಸಿ ಅಂತ ಕುಟುಕಿದ್ದಾರೆ. ಅಲ್ಲದೇ ಡಿಬಾಸ್ ಫ್ಯಾನ್ಸ್. ವಿಜಯಲಕ್ಷ್ಮಿ ದಾವಣಗೆರೆಯಲ್ಲಿನ ಫೋಟೋ ಹಾಕಿ ಟಾಂಗ್ ಕೊಡ್ತಿದ್ದಾರೆ. ಇನ್ನೂ ಕೆಲವರು ಡೆವಿಲ್ ಸಿನಿಮಾದಲ್ಲಿ ದರ್ಶನ್ ಮಾಸ್ ಲುಕ್ ಫೋಟೋವನ್ನ ಹಂಚಿಕೊಂಡು ಸುದೀಪ್ ವಿರುದ್ಧ ಮಾತಿನಲ್ಲೇ ಟಾಂಗ್ ಕೊಡ್ತಿದ್ದಾರೆ.
ವಿಜಯಲಕ್ಷ್ಮಿ ಬೆಂಕಿ ಮಾತಿಗೆ ನಟ ಧನ್ವೀರ್ ಕೂಡ ಶಭಾಷ್ ಎಂದಿದ್ದಾರೆ. ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರ್ತಾವೆ. ಆದ್ರೆ ಆ ಕಾಡಿಗೆ ಒಂದೇ ಸಿಂಹ ಇರುತ್ತೆ, ಅಂತ ಡೈಲಾಗ್ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಫ್ಯಾನ್ಸ್ ವಾರ್ ಎಲ್ಲಿಗೆ ನಿಲ್ಲುತ್ತೆ ಅನ್ನೋದನ್ನ ಕಾದುನೋಡಬೇಕಿದೆ.















