ಮನೆ ರಾಜ್ಯ ಪಹಲ್ಗಾಮ್ ಬಳಿಕ ಇಂಡಿಯಾ – ಪಾಕಿಸ್ತಾನ ಮ್ಯಾಚ್ ಬೇಕಿತ್ತಾ?; ಸಂತೋಷ್ ಲಾಡ್

ಪಹಲ್ಗಾಮ್ ಬಳಿಕ ಇಂಡಿಯಾ – ಪಾಕಿಸ್ತಾನ ಮ್ಯಾಚ್ ಬೇಕಿತ್ತಾ?; ಸಂತೋಷ್ ಲಾಡ್

0

ಕೋಲಾರ : ಬಿಜೆಪಿಯವರಿಗೆ ಹಿಂದೂ-ಮುಸ್ಲಿಂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಪಹಲ್ಗಾಮ್ ಆಗಿ ಎಷ್ಟು ದಿನ ಆಗಿದೆ? ಈ ಮಧ್ಯೆ ಇಂಡಿಯಾ ಪಾಕಿಸ್ತಾನ ಮ್ಯಾಚ್ ಯಾಕೆ ಬೇಕಾಗಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೇಂದ್ರ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರು ಬೇಡ, ಸಿಂಧೂ ನದಿ ನೀರು ಕೊಡಲ್ಲ ಅಂತಾರೆ, ಕ್ರಿಕೆಟ್ ಮಾತ್ರ ಆಡಿಸುತ್ತಾರೆ. ಪಾಕಿಸ್ತಾನದ ಜೊತೆಗೆ ಇಂಡಿಯಾ ಕ್ರಿಕೆಟ್ ಆಡಬಹುದಾ ಎಂದು ಪ್ರಶ್ನಿಸಿದರು.

ಮೋದಿ ಗ್ರೇಟೆಸ್ಟ್ ಪ್ರೈಮ್ ಮಿನಿಸ್ಟರ್ ಎಂದು ಸಾಬೀತು ಮಾಡಲು ಹೊರಟಿದ್ದಾರೆ. ಬಿಜೆಪಿಯ ಪಿಎಂ ಮೋದಿ, ಅಡ್ವಾನಿ, ವಾಜಪೇಯಿ ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲದೇ ಪಾಕಿಸ್ತಾನಕ್ಕೆ ಬಸ್ ಬಿಟ್ಟಿದ್ದು ಅವರೆ. ಹಾಗಾಗಿ ಎಲ್ಲವೂ ಮಾಡಿದ್ದು ಬಿಜೆಪಿಯವರೆ ಎಂದು ಕಿಡಿಕಾರಿದರು.

83 ಸಾವಿರ ಕೋಟಿ ಅಭಿವೃದ್ಧಿಗೆ, 60 ಸಾವಿರ ಕೋಟಿ ಗ್ಯಾರಂಟಿಗಳಿಗೆ ಕೊಡುತ್ತಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಕೊಡದೆ, ಅಭಿವೃದ್ಧಿಗೆ ಮಾತ್ರ ಅಷ್ಟು ಹಣ ಮೀಸಲಿಟ್ಟಿದ್ದರು, ಉಳಿದ ಹಣ ಎಲ್ಲಿ ಹೋಯ್ತು? ಆಗ ರಾಜ್ಯ ದಿವಾಳಿಯಾಗಿಲ್ವಾ? ದೇಶ ಆರ್ಥಿಕ ಸಂಕಷ್ಟದಲ್ಲಿದೆ,

ಆದರೆ ರಾಜ್ಯ ಸುಧಾರಿಸಿದೆ. ಜಿಎಸ್‌ಟಿ ಸೇರಿ ಎಲ್ಲದರಲ್ಲೂ ರಾಜ್ಯ ಮುಂದಿದೆ. ಗುಜರಾತ್ ಮಾಡೆಲ್ ಅಂತಾರೆ ಎಲ್ಲಾಗಿದೆ ಮಾಡೆಲ್? ಗಿಫ್ಟ್ ಸಿಟಿ ಅಂತ ಮಾಡಿ ಮೋದಿ ಅವರು ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ? ಸಾಕಷ್ಟು ಬಾರಿ ಸಿಎಂ ಆಗಿದ್ದವರು ಏನು ಮಾಡಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು.

ಖೇಲೋ ಇಂಡಿಯಾ ಅನ್ನೋ ದೊಡ್ಡ ಕಾರ್ಯಕ್ರಮ 426 ಕೋಟಿ ಗುಜರಾತ್‌ಗೆ ಮಾತ್ರ ಹೋಗುತ್ತೆ, ಎಲ್ಲಿ ಎಷ್ಟು ಮೆಡಲ್ ಬಂದಿದೆ? ಈ ಮೊದಲು ಕಡಿಮೆ ಇತ್ತು, ಈಗಲೂ ಕಡಿಮೆ ಇದೆ. ಗುಜರಾತ್ ಯಾಕೆ ಇಂದಿಗೂ ಮಾಡೆಲ್ ಆಗಿಲ್ಲ? ನಮ್ಮ ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜು, ಸಿಎಸ್ಟಿ, ಎಫ್‌ಡಿಎ ಸೇರಿ ನಾವು ಅಭಿವೃದ್ಧಿಯಲ್ಲಿದ್ದೇವೆ, ಆದ್ರೆ ದೇಶವೆ ಹಿಂದುಳಿದಿದೆ. ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.