ವಜ್ರಾಸನ : ನಂತರ ತಕ್ಷಣ ಮಾಡಬಹುದಾದ ಏಕೈಕ ಆಸನವಿದು ಮಂಡಿಗಳನ್ನು ಮಡಿಸಿ ನಿತಂಭದ ಕೆಳಗೆ ಕಾಲಬೆರಳು ಸಹಿತವಾಗಿ ಹಿಮ್ಮಡಿಗಳು ಅಂಟಿಕೊಂಡಿರುವಂತೆ ಕುಳಿತುಕೊಳ್ಳುವುದು ಪಾದಗಳ ಹೆಬ್ಬೆರಳುಗಳು ಪರಸ್ಪರ ಸ್ಪರ್ಶಿಸ್ಸುತ್ತಿರಲಿ ಕೈಗಳು ಮಂಡಿಯ ಮೇಲಿರಲಿ ( ಕಾಲ್ಬೆರಳುಗಳನ್ನು ನೆಲಕ್ಕೆ ಊರಿದರೆ ಅದುವೇ ಭದ್ರಾಸನ )
ಪ್ರಯೋಜನಗಳು : ಧನಾತ್ಮಕ ಆಸನ, ಚಂಚಲತೆ ದೂರ, ಅಜ್ಜೀರ್ಣ, ಆಮ್ಲ ಪಿತ್ತ, ಗ್ಯಾಸ್ ಮಲಬದ್ಧತೆ ಮತ್ತು ಮಂಡಿ ನೋವಿಗೆ ಉತ್ತಮ.
ವೀರಸನ : ವಜ್ರಾಸನ ಸ್ಥಿತಿಯಲ್ಲಿ ಕುಳಿತು ಹಾಗೆ ಮೇಲಿನ ಪಾದಗಳನ್ನು ನಿಧಾನವಾಗಿ ಅಗಲಿಸುತ್ತಾ ಪೃಷ್ಟ ಭಾಗವನ್ನು ನೆಲದ ಮೇಲೆ ಇರಿಸಿ ಕುಳಿತುಕೊಳ್ಳುವುದು, ಮಂಡಿಗಳು ತಾಗಿರಲಿ ಕೈಗಳು ತೊಡೆಗಳ ಮೇಲಿರಲಿ ಇದಕ್ಕೆ ಬ್ರಹ್ಮಚರ್ಯಾಸನ ಎಂದು ಕೂಡ ಹೇಳುತ್ತಾರೆ.. ಪ್ರಯೋಜನಗಳು :ಮಂಡಿ ಮತ್ತು ಕೀಲು ನೋವು ಸಂಧಿವಾತ ಇರುವವರಿಗೆ ರಕ್ತನಾಳಗಳಲ್ಲಿ ಹೂತ ಇರುವವರಿಗೆ ತುಂಬಾ ಹೊತ್ತು ನಿಂತುಕೊಂಡು ಕೆಲಸ ಮಾಡುವವರಿಗೆ ಮತ್ತು ನೀರಿನಲ್ಲಿ ನಿಲ್ಲುವರಿಗೆ ಉಪಶಮನ ನೀಡುವುದು ಜೊತೆಗೆ ಬ್ರಹ್ಮಚರ್ಯಕ್ಕೆ ಉತ್ತಮ ಮತ್ತು ಧಾತುವಿಕಾರ ಸ್ವಪ್ನ ದೋಷ ಪ್ರಮೇಹ, ಮಧುಮೇಹ ಮುಂತಾದ ರೋಗಗಳಿಗೆ ಶಮನಕಾರಿಯಾಗಿದೆ.
ಸಿದ್ದಾಸನ : ದಂಡಾಸನದಲ್ಲಿ ಕುಳಿತು ಎಡಗಾಲನ್ನು ಮಡಿಸಿ ಹಿಮ್ಮಡಿಯನ್ನುಗುದ ಹಾಗೂ ಜನನಾಂಗದ ಮಧ್ಯಾಭಾಗ (ಪೆರಿನಿಯಮ್) ಮೇಲಿರಿಸಿ, ಎಡಗಾಲಿನ ಗಂಟಿನ ಮೇಲೆ ಬಲಗಾಲಿನ ಗಂಟು ಬರಬೇಕು. ಮಂಡಿಗಳು ನೆಲದ ಮೇಲೆ ನೆಲೆಗೊಂಡಿರಲಿ ಬೆನ್ನು ನೇರವಾಗಿದ್ದು, ಕೈಗಳು ಧ್ಯಾನ ಮುದ್ರೆಯಲ್ಲಿ ಮಂಡಿಗಳ ಮೇಲಿರಬೇಕು. ಕಣ್ಣು ಮುಚ್ಚಿ ಕುಳಿತುಕೊಳ್ಳುವುದು.
ಪ್ರಯೋಜನಗಳು : ಕಾಮದ ವೇಗವನ್ನು ಶಾಂತಗೊಳಿಸಿ ಚಂಚಲತೆಯನ್ನು ದೂರಗೊಳಿಸುತ್ತದೆ ಬ್ರಹ್ಮಚರ್ಯಗೆ ಸಹಾಯಕ ಮೂಲವ್ಯಾಧಿ ಹಾಗೂ ಯೌವ್ವನ ಸಂಬಂಧಿ ರೋಗಗಳಿಗೆ ಪ್ರಯೋಜನಕಾರಿ.
ಸ್ವಸ್ತಿಕಾಸನ : ಸುಖಸನ ಮೇಲಿನ ಯಾವುದೇ ಆಸನಗಳಲ್ಲಿ ಕುಳಿತುಕೊಳ್ಳಲು ಶಕ್ಯವಿಲ್ಲದವರಿಗೆ ಕಾಲುಗಳನ್ನು ಮಡಿಸಿಕೊಂಡು ಬೆನ್ನು ನೇರವಾಗಿರಿಸಿಕೊಂಡು ಕೈಗಳನ್ನು ಮಂಡಿಗಳ ಮೇಲಿನ (ಚಕ್ಕಳ –ಮಕ್ಕಳ) ಅಂತಾರಲ್ಲ ಹಾಗೆ ಕುಳಿತುಕೊಳ್ಳುವುದು ಮತ್ತು ತೂಗು ಇಲ್ಲದೆ ಕುರ್ಚಿಯ ಮೇಲೆ ಕಾಲುಗಳನ್ನು ನೆಲಕ್ಕೆ ಇಳಿಬಿಟ್ಟು ಕೈಗಳನ್ನು ಇರಿಸಿ ಬೆನ್ನು ನೇರವಾಗಿರಿಸಿ ಕೂಡಕುಳಿತುಕೊಳ್ಳುವುದು ಇವು ಸ್ವಸ್ತಿಕಸನ ಅಥವಾ ಸುಖಸನಗಳಾಗಿವೆ
ಯೋಗಾಸನವನ್ನು ಮಾಡುವಾಗ ಸ್ತ್ರೀಯರು ವಿಶೇಷವಾಗಿ ಅನುಸರಿಸಬೇಕಾದ ವಿಧಿ ವಿಧಾನಗಳು..
ಬಹಿಷ್ಟಯರಾದಾಗ : ಅಂತಹ ಸಮಯದಲ್ಲಿ ಸ್ತ್ರೀಯರು ಯೋಗಾಸನಗಳ ಅಭ್ಯಾಸವನ್ನು ನಿಲ್ಲಿಸುವುದು ಉತ್ತಮ ಅಂದರೆ ರಕ್ತಸ್ರಾವ ಹಿಂದಿಗಿಂತಲೂ ಹೆಚ್ಚಾಗಿದ್ದಲ್ಲಿ ವೀರಸನ, ಜಾನುಶಿರಾಸನ, ಪಶ್ಚಿಮೋತ್ಥಾಸನ ಮತ್ತು ಪರಿಹಾರ ನೀಡುವುದು ಆದರೆ ಮುಟ್ಟಿನ ಸಮಯದಲ್ಲಿ “ಶೀರ್ಷಾಸನ” ಮಾತ್ರ ನಿಷಿದ್ಧವಾಗಿದೆ.
ಗರ್ಭಿಣಿಯರಿಗೆ : ಗರ್ಭಿಣಿಯ ಮೂರು ತಿಂಗಳವರೆಗೆ ಯೋಗಾಸನಗಳನ್ನು ಮಾಡಬಹುದು. ಆನಂತರ ನಿಲ್ಲಿಸಬೇಕು ಮತ್ತು ಪ್ರಾಣಾಯಾಮದ ವಿಷಯದಲ್ಲಿ ಕುಂಭಕವನ್ನು ಉಸಿರು ಹಿಡಿದು ಹಿಡಿದಿಟ್ಟುಕೊಳ್ಳುವುದನ್ನು ಬಿಟ್ಟು ಪೂರಕ ಅಂದರೆ ಶ್ವಾಸ ಮತ್ತು ರೇಚಕ ಅಂದರೆ ವಿಶ್ವಾಸಗಳನ್ನು ಗರ್ಭಸ್ತ ಕಾಲದುದ್ದಕ್ಕೂ ಮಾಡುವುದು ಒಳ್ಳೆಯದು ಕ್ರಮವರಿದು ಮಾಡುವ ದೀರ್ಘವಾದ ಉಸಿರಾಟದ ಕ್ರಿಯೆಯಿಂದ ಸುಖಪ್ರಸವಕ್ಕೆ ಸಹಕಾರಿ ಎಂದು ಹೇಳುತ್ತಾರೆ. ಪ್ರಸವದ ಒಂದು ತಿಂಗಳವರೆಗೆ ಯಾವುದೇ ಯೋಗಾಸನಗಳನ್ನು ಮಾಡಕೊಡದು ಆಮೇಲೆ ಮೂರು ತಿಂಗಳು ಮುಗಿಯುವವರೆಗೆ ಲಘು ಅಂದರೆ ಹಗುರವಾದ ಆಸನಗಳು ಮಾಡುತ್ತಿದ್ದು ಮುಂದೆ ಮೂರು ತಿಂಗಳ ಬಳಿಕ ಎಂದಿನಂತೆ ಎಲ್ಲಾ ಯೋಗಭ್ಯಾಸಗಳು ಮುಂದುವರಿಸಬಹುದು.