ಮನೆ ರಾಜ್ಯ ಟಿಬಿ ನಿರೋಧಕ ಡ್ರಗ್ಸ್ ಪೂರೈಸುವಂತೆ ಕೇಂದ್ರಕ್ಕೆ ದಿನೇಶ್ ಗುಂಡೂರಾವ್ ಪತ್ರ

ಟಿಬಿ ನಿರೋಧಕ ಡ್ರಗ್ಸ್ ಪೂರೈಸುವಂತೆ ಕೇಂದ್ರಕ್ಕೆ ದಿನೇಶ್ ಗುಂಡೂರಾವ್ ಪತ್ರ

0

ಬೆಂಗಳೂರು: ರಾಜ್ಯಕ್ಕೆ ಟಿಬಿ ನಿರೋಧಕ ಔಷಧಗಳ ತುರ್ತು ಪೂರೈಕೆಗೆ ಮನವಿ ಮಾಡಿ ಕೇಂದ್ರ ಆರೋಗ್ಯ ಸಚಿವರಿಗೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿರುವ ದಿನೇಶ್ ಗುಂಡೂರಾವ್, ೨೦೨೧ ರಿಂದಲೂ ರಾಜ್ಯಕ್ಕೆ ಟಿಬಿ ನಿರೋಧಕ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಮುಂದಿನ ೩ ತಿಂಗಳಿಗೆ ಅಗತ್ಯವಿರುವ ಔಷಧಗಳನ್ನು ರಾಜ್ಯ ದಾಸ್ತಾನು ಮಾಡಿಕೊಳ್ಳಬೇಕೆಂದು ಭಾರತ ಸರ್ಕಾರ ತನ್ನ ಇತ್ತೀಚಿನ ೨ ಸಂವಹನಗಳಲ್ಲಿ ತಿಳಿಸಿದೆ.

ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದ ನಂತರ ಎರಡನೇ ಸಂವಹನ ರಾಜ್ಯಕ್ಕೆ ಬಂದಿದೆ ಎಂದು ಪತ್ರದಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ರಾಜ್ಯ ವಾರ್ಷಿಕವಾಗಿ ೮೦,೦೦೦ ಕ್ಕೂ ಹೆಚ್ಚು ರೋಗಿಗಳನ್ನು- ಮಾಸಿಕ ಆಧಾರದ ಮೇಲೆ ಸುಮಾರು ೬,೮೦೦ ಟಿಬಿ ರೋಗಿಗಳಿಗೆ ನಿರಂತರ ಚಿಕಿತ್ಸೆ ನೀಡಬೇಕು, ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಟಿಬಿ ನಿರೋಧಕ ಔಷಧಗಳನ್ನು ಖರೀದಿಸಲು ರಾಜ್ಯ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಆರೋಗ್ಯ ಇಲಾಖೆ ರಾಜ್ಯ ಹಣಕಾಸು ಇಲಾಖೆಗೆ ಔಷಧಗಳನ್ನು ಖರೀದಿಸುವುದಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಪತ್ರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.