ಮೈಸೂರು(Mysuru): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(MUDA) ಆಯುಕ್ತರಾಗಿ(Commissioner) ಇಂದು ದಿನೇಶ್(Dinesh) ಅಧಿಕಾರ ಸ್ವೀಕಾರ ಮಾಡಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ. ನಟೇಶ್ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮುಡಾ ಆಯುಕ್ತರಾಗಿ ದಿನೇಶ್ ಅಧಿಕಾರ ಸ್ವೀಕರಿಸಿದರು. ಮುಡಾ ನಿರ್ಗಮಿತ ಆಯುಕ್ತ ನಟೇಶ್ ಹೂಗುಚ್ಚ ನೀಡಿ ನೂತನ ಆಯುಕ್ತರನ್ನು ಸ್ವಾಗತಿದರು.
ಈ ಹಿಂದೆ ನಟೇಶ್ ಎರಡು ಬಾರಿ ವರ್ಗಾವಣೆಗೊಂಡಿದ್ದರು. ಆದರೆ ವರ್ಗಾವಣೆ ಆದೇಶದ ವಿರುದ್ದ ನಟೇಶ್ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದು, ಈ ಮಧ್ಯೆ ಕೆಎಟಿ ತಡೆಯಾಜ್ಞೆ ಪ್ರಶ್ನಿಸಿ ದಿನೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ನಟೇಶ್ ಅವಧಿ 2 ವರ್ಷ ಪೂರೈಸಿದ ಬಳಿಕ ವರ್ಗಾವಣೆಗೆ ಹೈಕೋರ್ಟ್ ಸೂಚಿಸಿತ್ತು ಮೇ 3ಕ್ಕೆ ನಟೇಶ್ ಅವರ 2 ವರ್ಷ ಅವಧಿ ಪೂರೈಸಿದ ಹಿನ್ನೆಲೆ, ಕೋರ್ಟ್ ಸೂಚನೆಯಂತೆ ನಟೇಶ್ ಕರ್ತವ್ಯದಿಂದ ಬಿಡುಗಡೆಯಾದರು. ನಟೇಶ್ ಸ್ಥಾನಕ್ಕೆ ದಿನೇಶ್ ನೇಮಕ ಮುಂದುವರೆದಿದೆ.