ಚಾಮರಾಜನಗರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಬಂಧನ್ ಬ್ಯಾಂಕ್ ಹಾಗೂ ಇಂಡಿಯನ್ ಲಿಟ್ರೆಸಿ ಪ್ರೋಜೆಕ್ಟ್ (ಐ.ಎಲ್.ಪಿ) ಸಹಯೋಗದೊಂದಿಗೆ ಜುಲೈ ೩೦ರಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ನೇರ ಸಂದರ್ಶನವನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಬಂಧನ್ ಬ್ಯಾಂಕ್‌ನಲ್ಲಿ ಕಲೆಕ್ಷನ್ ಆಫೀಸರ್, ಟೆಲಿಕಾಲರ್, ಡೇಟಾ ಎಂಟ್ರಿ ಆಪರೇಟರ್‌ಗಳ ೫೦ ಹುದ್ದೆಗಳಿಗೆ ಪಿಯುಸಿ ಅಥವಾ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹಾಗೂ ಇಂಡಿಯನ್ ಲಿಟ್ರೆಸಿ ಪ್ರೋಜೆಕ್ಟ್ (ಐ.ಎಲ್.ಪಿ) ಸಂಸ್ಥೆಯಲ್ಲಿ ಟೆಕ್ನಿಕಲ್ ಫೆಸಿಲಿಟೇಟರ್ಸ್ನ ೨೫ ಹುದ್ದೆಗಳಿಗೆ ಬಿ.ಸಿ.ಎ. ಬಿಎಡ್, ಎಂ.ಸಿ.ಎ, ಬಿ.ಇ, ಬಿ.ಟೆಕ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರ (ಬಯೋಡೆಟಾ) ಮತ್ತು ಅಂಕಪಟ್ಟಿಗಳ ಮೂಲ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೂ.ಸಂ ೦೮೨೨೬-೨೨೪೪೩೦ ಸಂಪರ್ಕಿಸುವAತೆ ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














